ನವದೆಹಲಿ – ಇಲ್ಲಿಯ ಐತಿಹಾಸಿಕ ಜಾಮಸೀದಿಯಲ್ಲಿ ಈಗ ಒಬ್ಬಂಟಿ ಯುವತಿಯು ಅಥವಾ ಅನೇಕ ಯುವತಿಯರು ಪುರುಷರಿಲ್ಲದೆ ಹೋಗಲು ನಿಷೇಧ ಹೇರುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈ ವಿಷಯದ ಬಗ್ಗೆ ಮಸೀದಿಯ ಪ್ರವೇಶ ದ್ವಾರದಲ್ಲಿ ಸೂಚನೆ ಬರೆಯಲಾಗಿದೆ. ನಿಷೇಧದಿಂದ ಮಸೀದಿಯ ಆಡಳಿತ ವ್ಯವಸ್ಥೆಯ ಮೇಲೆ ಟಿಕೆ ಟಿಪ್ಪಣಿ ಆದವು. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷ ಸ್ವಾತಿ ಮಾಲಿವಾಲ ಇವರು ಮಸೀದಿಯ ವ್ಯವಸ್ಥೆಪಕರಿಗೆ ಈ ವಿಷಯವಾಗಿ ನೋಟಿಸ್ ಜಾರಿ ಮಾಡಿದರು ಹಾಗೂ ವಿಶ್ವ ಹಿಂದೂ ಪರಿಷತ್ತ ಕೂಡ ಇದನ್ನು ವಿರೋಧಿಸಿತು. ಅದರ ನಂತರ ದೆಹಲಿಯ ಉಪರಾಜ್ಯಪಾಲ ವೀ.ಕೆ ಸೆಕ್ಸೆನ ಇವರು ಮಸೀದಿಯ ಇಮಾಮ ಬುಖಾರಿ ಇವರಿಗೆ ಆದೇಶ ಹಿಂಪಡೆಯಲು ವಿನಂತಿಸಿದ ನಂತರ ಅದು ಹಿಂಪಡೆಯಲಾಯಿತು.
#ShahiImam agrees to revoke order restricting entry of #women in #JamaMasjid after LG requesthttps://t.co/peu9UU5KzD
— Zee News English (@ZeeNewsEnglish) November 24, 2022
೧. ಮಸೀದಿಯ ವಕ್ತಾರ ಸಬೀಉಲ್ಲಾಹ ಇವರು, ಮಸೀದಿಯ ಸ್ಥಳ ಪ್ರಾರ್ಥನೆಗಾಗಿ ಇದೆ, ಆದರೆ ಇಲ್ಲಿ ಸುತ್ತಾಡಲು, ಹರಟೆ ಹೊಡೆಯಲು, ನೃತ್ಯ ಮಾಡಲು, ಛಾಯಾಚಿತ್ರ ತೆಗೆಯಲು ಯುವತಿಯರು ಬರುತ್ತಾರೆ. ಯಾವುದೇ ಧಾರ್ಮಿಕ ಸ್ಥಳದಲ್ಲಿ ಈ ರೀತಿಯ ಕೃತ್ಯಗಳು ನಡೆಯಬಾರದು. ಅದು ಮಸೀದಿ ಆಗಿರಲಿ, ದೇವಸ್ಥಾನ ಅಥವಾ ಗುರುದ್ವಾರ ಆಗಿರಲಿ, ಅದರ ಪವಿತ್ರ, ಗೌರವ ಕಾಪಾಡುವುದು ಅವಶ್ಯಕವಾಗಿದೆ. ಆದ್ದರಿಂದ ಮಹಿಳೆಯರು ಅವರ ಕುಟುಂಬದ ಜೊತೆ ಬರಬಹುದು. ಪುರುಷರ ಜೊತೆ ಬರಬಹುದು ಅದರ ಬಗ್ಗೆ ಯಾವುದೇ ನಿಷೇಧವಿಲ್ಲ ಎಂದು ಹೇಳಿದರು.
೨. ವಿಶ್ವ ಹಿಂದೂ ಪರಿಷತ್ತಿನ ವಕ್ತಾರರಾದ ವಿನೋದ್ ಬನ್ಸಲ ಇವರು, ಭಾರತವನ್ನು ಸಿರಿಯಾ ಮಾಡುವ ಮಾನಸಿಕತೆ ಉಳ್ಳ ಕಟ್ಟರವಾದಿ ಮುಸಲ್ಮಾನರು ಇರಾನಿನಲ್ಲಿನ ಘಟನೆಯಿಂದ ಪಾಠ ಕಲಿಯುತ್ತಿಲ್ಲ. ಅವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು, ಇದು ಭಾರತ ಎಂದು ಟ್ವೀಟ್ ಮಾಡಿದ್ದಾರೆ.
ಸಂಪಾದಕೀಯ ನಿಲುವು
|