ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಕನ್ನಡ ಭಾಷೆಯಲ್ಲಿನ ಪುಸ್ತಕದ ಮಾರಾಟದ ಮೇಲೆ ನ್ಯಾಯಾಲಯದಿಂದ ನಿಷೇಧ

ಬೆಂಗಳೂರು – ಇಲ್ಲಿಯ ಹೆಚ್ಚುವರಿ ನಗರ ದಿವಾಣಿ ಮತ್ತು ಸತ್ರ ನ್ಯಾಯಾಲಯವು ಜಿಲ್ಲಾ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಬಿ.ಎಸ್. ರಫೀಉಲ್ಲಾ ಇವರ ಅರ್ಜಿಯ ಕುರಿತು ವಿಚಾರಣೆ ನಡೆಸುವಾಗ ಟಿಪ್ಪು ಸುಲ್ತಾನ್ ಕುರಿತು ಬರೆದಿರುವ ಪುಸ್ತಕವನ್ನು ಯಾವುದೇ ಮಾಧ್ಯಮದಿಂದ ನಡೆಯುವ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಲಾಗಿದೆ. ಅಡಾಂಡಾ ಕರಿಯಪ್ಪ ಇವರು ಕನ್ನಡ ಭಾಷೆಯಲ್ಲಿ ‘ಟಿಪ್ಪು ನಿಜ ಕನಸುಗಳು’ (ಟಿಪ್ಪುವಿನ ನಿಜವಾದ ಕನಸು) ಹೆಸರಿನ ಪುಸ್ತಕ ಬರೆದಿದ್ದಾರೆ ಮತ್ತು ಅದರ ಪ್ರಕಾಶನ ‘ಅಯೋಧ್ಯಾ ಪ್ರಕಾಶನ’ ಮಾಡಿದ್ದು, ರಾಷ್ಟ್ರೋತ್ಥಾನ ಮುದ್ರಣಾಲಯದಲ್ಲಿ ಮುದ್ರಿಸಲಾಗಿದೆ.

ರಫಿಉಲ್ಲಾ ಇವರು ಅವರ ಅರ್ಜಿಯಲ್ಲಿ, ಈ ಪುಸ್ತಕದಲ್ಲಿ ನೀಡಲಾಗಿರುವ ಮಾಹಿತಿ ತಪ್ಪಾಗಿದೆ. ಈ ಪುಸ್ತಕದಲ್ಲಿ ಮುಸಲ್ಮಾನರಿಗಾಗಿ ಅಪಮಾನವಾಗುವಂತಹ ಪದಗಳನ್ನು ಬಳಸಲಾಗಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಮತ್ತು ವೈಮನಸ್ಸು ಹರಡುವ ಸಾಧ್ಯತೆ ಇದೆ ಎಂದು ದಾವೆ ಮಾಡಿದ್ದಾರೆ.