ಸೌದಿ ಅರೇಬಿಯಾದಲ್ಲಿ ಮಾದಕ ವಸ್ತುಗಳ ಪ್ರಕರಣದಲ್ಲಿ ೧೦ ದಿನದಲ್ಲಿ ೧೨ ಜನರಿಗೆ ಮರಣದಂಡನೆ

ಕೆಲವು ಜನರನ್ನು ಖಡ್ಗದಿಂದ ಶಿರಚ್ಛೇದ ಹಾಗೂ ಕೆಲವರಿಗೆ ಗಲ್ಲಿಗೇರಿಸಲಾಗಿದೆ !

ರಿಯಾಧ (ಸೌದಿ ಅರೇಬಿಯಾ) – ಸೌದಿ ಅರೇಬಿಯಾದಲ್ಲಿ ಮಾದಕ ವಸ್ತುಗಳ ಜೊತೆಗೆ ಸಂಬಂಧಿತ ಅಪರಾಧದ ಅಡಿಯಲ್ಲಿ ೧೨ ಜನರಿಗೆ ಮರಣ ದಂಡನೆ ವಿಧಿಸಲಾಗಿದೆ. ಕಳೆದ ೧೦ ದಿನದಲ್ಲಿ ಕೆಲವು ಜನರನ್ನು ಖಡ್ಗದಿಂದ ಶಿರಚ್ಛೇದ ಮಾಡಲಾಗಿದೆ ಹಾಗೂ ಕೆಲವರಿಗೆ ಗಲ್ಲಿಗೇರಿಸಲಾಗಿದೆ. ಇದರಲ್ಲಿ ಪಾಕಿಸ್ತಾನದ ೩, ಸಿರಿಯಾದ ೪, ಜಾರ್ಡನ್‌ದ ೨ ಮತ್ತು ಸೌದಿಯ ೩ ಜನರು ಸೇರಿದ್ದಾರೆ. ಈ ವರ್ಷ ಮಾರ್ಚ್‌ನಲ್ಲಿ ಸೌದಿ ಅರೇಬಿಯಾದಲ್ಲಿ ನಿವ್ವಳ ೮೧ ಜನರಿಗೆ ಮರಣದಂಡನೆ ವಿಧಿಸಿತ್ತು.

ಸೌದಿ ಅರೇಬಿಯಾದ ಪ್ರಿನ್ಸ್ ಮಹಮ್ಮದ್ ಬಿನ್ ಸಲ್ಮಾನ್ ಇವರು ಈ ರೀತಿಯ ಶಿಕ್ಷೆ ಕಡಿಮೆ ಮಾಡುವ ಆಶ್ವಾಸನೆ ನೀಡಿದ್ದರು. ‘ಕೇವಲ ಕೊಲೆ ಅಥವಾ ಹತ್ಯಾಕಾಂಡದಲ್ಲಿ ತಪ್ಪಿತಸ್ಥರೆಂದು ಕಂಡು ಬಂದರೆ ಅವರಿಗೆ ಮರಣದಂಡನೆ ವಿಧಿಸಲಾಗುವುದೆಂದು’, ಹೇಳುತ್ತಾ ಶಿಕ್ಷೆ ಕಡಿಮೆ ಮಾಡುವ ಪ್ರಯತ್ನ ಮಾಡಿದ್ದರು; ಆದರೆ ಮತ್ತೆ ಈ ರೀತಿಯ ಶಿಕ್ಷೆ ನೀಡಲಾಗಿದೆ.

 

ಸೌದಿ ಅರೇಬಿಯಾದಲ್ಲಿ ಅಪರಾಧಗಳು ಕಡಿಮೆ ಪ್ರಮಾಣದಲ್ಲಿರುವುದರ ಇದೇ ದೊಡ್ಡ ಕಾರಣವಾಗಿದೆ, ಇದು ತಿಳಿಯಬೇಕು ! ಭಾರತದಲ್ಲಿ ಈ ರೀತಿಯ ಶಿಕ್ಷೆ ಎಲ್ಲಾ ಅಪರಾಧಗಳಲ್ಲಿ ನೀಡಿದರೆ, ಆಗ ಅಪರಾಧಗಳು ಕೆಲವೇ ದಿನದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಕಡಿಮೆ ಆಗುವುದು ಇದರಲ್ಲಿ ಸಂಶಯವಿಲ್ಲ !