ಕವರ್ಧಾ (ಛತ್ತೀಸಗಡ) – ಇಲ್ಲಿಯ ಲೋಹರಾ ನಾಕಾ ಚೌಕದಲ್ಲಿ ಅಖ್ತರ ಖಾನ ಮತ್ತು ಜಾವೇದ ಇವರಿಬ್ಬರು ತರಕಾರಿ ಮಾರಾಟ ಮಾಡುತ್ತಿದ್ದ ಹಿಂದೂ ಪ್ರಕಾಶ ಸಾಹೂ ಮತ್ತು ಅವರ ಕುಟುಂಬದವರ ಹಲ್ಲೆ ಮಾಡಿರುವ ಘಟನೆ ಇಲ್ಲಿ ನವೆಂಬರ ೧೯ ರಂದು ನಡೆದಿದೆ. ಇದರಿಂದ ಹಿಂದುತ್ವನಿಷ್ಠ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ‘ಕವರ್ಧಾ ಬಂದ್’ ಗೆ ಕರೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಮೂರು ಜನರನ್ನು ಬಂಧಿಸಲಾಗಿದೆ. ಘಟನೆಯ ಬಳಿಕ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೆಲವು ದಿನಗಳ ಹಿಂದೆ ಲೋಹರಾ ನಾಕಾ ಚೌಕದಲ್ಲಿಯೇ ಬಾವುಟ ಹಾರಿಸುವ ವಿಷಯದ ಮೇಲೆ ದೊಡ್ಡ ವಿವಾದ ನಿರ್ಮಾಣವಾಗಿತ್ತು.
सब्जी विक्रेता से मारपीट का मामला: कवर्धा में दूसरे दिन माहौल तनावपूर्ण, शहर छावनी में तब्दील https://t.co/bdEkdybk5p @KabirdhamDist #Chhattisgarh
— ETVBharat Chhattisgarh (@ETVBharatCG) November 20, 2022
ಮಾಧ್ಯಮದವರ ಮಾಹಿತಿಯನುಸಾರ ಪ್ರಕಾಶ ಸಾಹೂ ಇವರು ಲೋಹರಾ ನಾಕಾ ಚೌಕದಲ್ಲಿ ತರಕಾರಿ ಮಾರಾಟ ಮಾಡುವ ವ್ಯವಸಾಯ ಮಾಡುತ್ತಿದ್ದಾರೆ. ಸಧ್ಯ ಆ ಸ್ಥಳದಲ್ಲಿ ರಸ್ತೆ ನಿರ್ಮಾಣ ಪ್ರಾರಂಭವಾಗಿದೆ. ರಸ್ತೆಯ ಕೆಲಸಕ್ಕಾಗಿ ಬೇಕಾಗುವ ಸಾಮಗ್ರಿಗಳನ್ನು ಅಲ್ಲಿಯೇ ಎಸೆಯಲಾಗುತ್ತಿತ್ತು. ಇದರಿಂದ ಸಾಹೂ ಇವರು ‘ಈ ಸಾಮಗ್ರಿಗಳನ್ನು ತನ್ನ ಅಂಗಡಿಯ ಎದುರಿನಿಂದ ಸ್ವಲ್ಪ ದೂರದಲ್ಲಿ ಎಸೆಯಬೇಕು’, ಎಂದು ಗುತ್ತಿಗೆದಾರನಿಗೆ ಹೇಳಿದರು. ಇದರಿಂದ ಇವರಿಬ್ಬರಲ್ಲಿ ವಾದ ನಡೆಯಿತು. ಇದೇ ಸಮಯದಲ್ಲಿ ಆರೋಪಿ ಅಖ್ತರ ಖಾನ ಅಲ್ಲಿ ತಲುಪಿದನು ಮತ್ತು ಅವನು ಸಾಹೂನಿಗೆ ಬೆದರಿಕೆ ಹಾಕಿದನು. ಸಾಹೂ ಅವನಿಗೆ ಅವರ ಮಧ್ಯೆ ಬರಬಾರದೆಂದು ಹೇಳಿದನು. ತದನಂತರ ಇವರಿಬ್ಬರ ವಾದವು ಹೊಡೆದಾಟದಲ್ಲಿ ಬದಲಾಯಿತು. ಆಗ ಸಾಹೂ ಕುಟುಂಬದ ಕೆಲವು ಮಹಿಳೆಯರು ಅಲ್ಲಿಗೆ ಬಂದರು. ಅಲ್ಲಿಯವರೆಗೆ ಅಖ್ತರ ತನ್ನ ಸಹಚರಗಳನ್ನು ಕರೆಸಿಕೊಂಡನು. ತದನಂತರ ಅವನು ಸಾಹೂ ಅಷ್ಟೇ ಅಲ್ಲ, ಅವನ ಸಹೋದರಿ ರಾಧಿಕಾ ಮತ್ತು ಅವನ ಕುಟುಂಬದ ಇನ್ನಿತರೆ ಸದಸ್ಯರ ಮೇಲೆಯೂ ಹಲ್ಲೆ ಮಾಡಿದನು. ಸಂತ್ರಸ್ತರು, ಹಲ್ಲೆ ಕೋರರು ನಮ್ಮನ್ನು ಕೊಲ್ಲುವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ರಾಧಿಕಾ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಇಂತಹ ಆರೋಪಿಗಳಿಗೆ ರಾಜ್ಯ ಸರಕಾರದ ಸಚಿವ ಮಹಮ್ಮದ ಅಕ್ಬರ ಇವರೆ ರಕ್ಷಣೆ ನೀಡುತ್ತಿದ್ದಾರೆ ! – ಭಾಜಪ
ಈ ಪ್ರಕರಣದಲ್ಲಿ ಭಾಜಪದೊಂದಿಗೆ ವಿಹಿಂಪ ಮತ್ತು ಇತರೆ ಹಿಂದುತ್ವನಿಷ್ಠ ಸಂಘಟನೆಗಳು ರಾಜನಾಂದಗಾವದಲ್ಲಿ ‘ರಸ್ತೆ ತಡೆ’ ಆಂದೋಲನವನ್ನು ಮಾಡಿದರು. ಅವರು ‘ಪೊಲೀಸರು ಆರೋಪಿಗಳಿಗೆ ರಕ್ಷಣೆಯನ್ನು ನೀಡುತ್ತಿದ್ದಾರೆ’, ಎಂದು ಆರೋಪಿಸಿದ್ದಾರೆ. ‘ಇಂತಹ ಆರೋಪಿಗಳಿಗೆ ರಾಜ್ಯ ಸರಕಾರದ ಸಚಿವ ಮಹಮ್ಮದ ಅಕ್ಬರ ಇವರೇ ರಕ್ಷಣೆ ನೀಡುತ್ತಿದ್ದು ಅವರು ತಮ್ಮ ಸಚಿವ ಹುದ್ದೆಗೆ ತಕ್ಷಣವೇ ರಾಜೀನಾಮೆ ನೀಡಬೇಕು’, ಎಂದು ಭಾಜಪ ಮೋತಿರಾಮ ಚಂದ್ರವತಿಯವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಸಂಪಾದಕೀಯ ನಿಲುವುಜನಸಂಖ್ಯೆಯಲ್ಲಿ ಅಲ್ಪ ಇರುವ ಮತಾಂಧರು ಅಪರಾಧಗಳಲ್ಲಿ ಬಹುಸಂಖ್ಯಾತರಾಗಿರುತ್ತಾರೆ ! |