ಧಾರವಾಡ (ಕರ್ನಾಟಕ) – ರಾಜ್ಯದಲ್ಲಿ ಸರಕಾರದ ರಿಯಾಯಿತಿಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿಶ್ವಕರ್ಮ ಜನಾಂಗದ ಹಿಂದೂಗಳು ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ರಾಜ್ಯ ವಿಧಾನ ಪರಿಷತ್ತಿನ ಭಾಜಪದ ಶಾಸಕ ಕೆ.ಪಿ. ನಂಜುಂಡಿ ಇವರು ಆಘಾತಕಾರಿ ಮಾಹಿತಿ ನೀಡಿದರು. ವಿಶ್ವಕರ್ಮ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ನೀಡುವ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ನಂಜುಂಡಿ ಇವರು ಧಾರವಾಡಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲವೆಡೆ ನಮ್ಮ ಸಮಾಜದ ಜನರು ಇತರ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಪ್ರಮಾಣ ಹೆಚ್ಚು ಇದೆ ಎಂದರು.
(ಸೌಜನ್ಯ : VIJAYAVANI)
‘ಈ ಮತಾಂತರವನ್ನು ಏಕೆ ನಿಲ್ಲಿಸುತ್ತಿಲ್ಲ ?’ ಎಂಬ ಪ್ರಶ್ನೆಗೆ ಅವರು, ನಾನು ವಿಧಾನ ಪರಿಷತ್ತಿನಲ್ಲಿ ಒಬ್ಬ ಶಾಸಕ ಮಾತ್ರನಾಗಿದ್ದೇನೆ. ಅವರನ್ನು ತಡೆಯುವ ಯಾವುದೇ ಹಕ್ಕಾದರೂ ನನಗಿದೆಯೇ ? ನಾನು ‘ವಿಶ್ವಕರ್ಮ ಅಭಿವೃದ್ಧಿ ನಿಗಮ’ಕ್ಕಾಗಿ ಆಂದೋಲನ ನಡೆಸಿದ್ದೇನೆ. ಸದ್ಯ ೫ ತಿಂಗಳಿಂದ ನಿಗಮವು ಖಾಲಿ ಇದೆ. ಅಲ್ಲಿ ಯಾವುದೇ ನೇಮಕಾತಿ ಆಗಿಲ್ಲ. ನಮ್ಮಲ್ಲಿ ಅನೇಕರು ಮುಸಲ್ಮಾನರು ಅಥವಾ ಕ್ರೈಸ್ತರಾಗುತ್ತಿದ್ದೂ ಅವರನ್ನು ತಡೆಯಲು ಸಾಧ್ಯವಿಲ್ಲ. ಈ ಬಗ್ಗೆ ಅವರಲ್ಲಿ ವಿಚಾರಿಸಿದರೆ ಅವರು, ‘ನಮಗೆ ಊಟವಿಲ್ಲ; ಆದ್ದರಿಂದ ನಾವು ಮತಾಂತರಗೊಳ್ಳುತ್ತೇವೆ. ನಿಮ್ಮ ಸರಕಾರ ಆಹಾರ ನೀಡುವುದೇ ?’ ಬದುಕುವುದಕ್ಕೆ ಅವಶ್ಯಕವಿರುವ ಅನ್ನವೇ ಸಿಗುತ್ತಿಲ್ಲದಿದ್ದರೆ ಮತ್ತೊಂದೆಡೆ ಹೋಗಲೇ ಬೇಕಾಗುವುದಲ್ಲವೇ ? ನಾವು ನಮ್ಮ ಸಾಂಪ್ರದಾಯಿಕ ವೃತ್ತಿಗಳ ಮೇಲೆ ಅವಲಂಬಿತವಾಗಿ ದಯನೀಯ ಸ್ಥಿತಿಗೆ ತಲುಪಿದ್ದೇವೆ’ ಎಂದು ಹೇಳಿದರು. ಸಾಮಾಜಿಕ ನ್ಯಾಯದಿಂದ ವಂಚಿತವಾಗಿರುವ ವಿಶ್ವಕರ್ಮ ಸಮಾಜದ ಸ್ಥಿತಿಯು ಹೀಗಿದೆ ಎಂದೂ ಸಹ ನಂಜುಂಡಿ ಹೇಳಿದರು.
ಸರಿಯಾದ ಸೌಲಭ್ಯ ಸಿಗದಕ್ಕೆ ವಿಶ್ವಕರ್ಮದವರು ಮತಾಂತರ: ಎಂಎಲ್ಸಿ ಕೆ.ಪಿ.ನಂಜುಂಡಿ
#vishwakarmacommunity https://t.co/bHfAYfdJ5x— vijaykarnataka (@Vijaykarnataka) November 20, 2022
ಸಂಪಾದಕೀಯ ನಿಲುವುಇದು ಹಿಂದೂಗಳಲ್ಲಿ ಧಾರ್ಮಿಕ ಶಿಕ್ಷಣದ ಕೊರತೆಯ ಪರಿಣಾಮವೇ ಹೌದು ! ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ಸರ್ವಪಕ್ಷ ಸರಕಾರಗಳು ಹಿಂದೂಗಳಿಗೆ ಸಾಧನೆಯನ್ನು ಕಲಿಸಿದ್ದರೆ ಹಿಂದುಗಳಿಗೆ ಇಂತಹ ಪರಿಸ್ಥಿತಿ ಸಂಭವಿಸುತ್ತಿರಲಿಲ್ಲ ಎಂಬುದನ್ನು ಗಮನದಲ್ಲಿಡಿರಿ ! |