ಮಂಗಳೂರಿನಲ್ಲಿನ ರಿಕ್ಷಾದಲ್ಲಿ ಆದ ಸ್ಫೋಟದ ಹಿಂದೆ ಉಗ್ರರ ಕೈವಾಡ !

ಕರ್ನಾಟಕದ ಪೊಲೀಸ್ ಅಧಿಕಾರಿ ನೀಡಿದ ಮಾಹಿತಿ

ಮಂಗಳೂರು – ಇಲ್ಲಿ ನವಂಬರ್ ೧೯ ರಂದು ಒಂದು ರಿಕ್ಷಾದಲ್ಲಿ ಸ್ಪೋಟಗೊಂಡು ಬೆಂಕಿ ಹತ್ತಿಕೊಂಡಿತ್ತು. ಇದರಲ್ಲಿ ರಿಕ್ಷಾ ಚಾಲಕ ಮತ್ತು ಇತರ ಇಬ್ಬರು ಕೂಡ ಸುಟ್ಟಿದ್ದಾರೆ. ಈ ಘಟನೆಯ ಸಿಸಿಟಿವಿ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಘಟನೆಯ ನಂತರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಇವರು ಈ ಘಟನೆ ಬೆಂಕಿ ಅನಾಹುತ ಎಂದು ಹೇಳಿದ್ದರು. ಈಗ ಈ ವಿಷಯದ ಬಗ್ಗೆ ಪೊಲೀಸ್ ಅಧಿಕಾರಿ ಬಹಿರಂಗಪಡಿಸಿದ್ದಾರೆ. ಅವರು, “ರಿಕ್ಷಾದಲ್ಲಿ ನಡೆದಿರುವ ಸ್ಫೋಟ ಇದು ಸಾಮಾನ್ಯ ಸ್ಫೋಟ ಅಲ್ಲದೆ ಇದು ಉಗ್ರರ ದಾಳಿ ಆಗಿದೆ. ಈ ಸ್ಫೋಟದಿಂದ ಹೆಚ್ಚು ಹಾನಿ ಆಗಿಲ್ಲ, ಆದರೂ ಕೂಡ ಹೆಚ್ಚು ಹಾನಿ ಮಾಡುವ ಉದ್ದೇಶದಿಂದ ಈ ದಾಳಿ ಮಾಡಲಾಗಿದೆ.” ಎಂದು ಅವರು ಹೇಳಿದರು.

೧. ಕರ್ನಾಟಕದ ಗೃಹ ಸಚಿವ ಅರಗ ಜ್ಞಾನೇಂದ್ರ ಇವರು, ಈ ಘಟನೆ ಉಗ್ರರ ಕೃತ್ಯ ಇರುವ ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಪೊಲೀಸರು ಈಗ ಕೇಂದ್ರ ತನಿಖಾ ದಳದ ಸಹಾಯದಿಂದ ಈ ಪ್ರಕರಣದ ಆಳವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.

೨. ಸೂತ್ರಗಳು ನೀಡಿರುವ ಮಾಹಿತಿಯ ಪ್ರಕಾರ ಒಬ್ಬ ಪ್ರವಾಸಿ ರಿಕ್ಷಾದಲ್ಲಿ ಇಟ್ಟಿರುವ ಬ್ಯಾಗನಲ್ಲಿ ಸ್ಪೋಟಕಗಳು ಇರುವ ದಾವೆ ಮಾಡಲಾಗುತ್ತಿದೆ. ಈ ಸ್ಪೋಟಕ್ಕಾಗಿ ಉಪಯೋಗಿಸಲಾಗಿರುವ ಬ್ಯಾಗಿನ ಫಾರೆನ್ ಸಿಕ್ಸ್ ಸೈನ್ಸ್ ಲ್ಯಾಬ್ ನಿಂದ ಸಮೀಕ್ಷೆ ಮಾಡಲಾಗುತ್ತಿದೆ. ಗುಪ್ತಚರ ಇಲಾಖೆ ಮತ್ತು ರಾಷ್ಟ್ರೀಯ ತನಿಖಾ ದಳವು ಸ್ಥಳೀಯ ಪೊಲೀಸರಿಗೆ ತನಿಖೆಗಾಗಿ ಸಹಾಯ ಮಾಡುತ್ತಿದ್ದಾರೆ. ಕರ್ನಾಟಕ ಪೊಲೀಸರು ಇದರ ತನಿಖೆಗಾಗಿ ಒಂದು ವಿಶೇಷ ದಳದ ಸ್ಥಾಪನೆ ಮಾಡಿದ್ದಾರೆ.

೩. ಈ ಸ್ಫೋಟದಲ್ಲಿ ಗಾಯಗೊಂಡಿರುವ ರಿಕ್ಷಾ ಚಾಲಕ ಮತ್ತು ಇನ್ನೊಬ್ಬ ಮಾತನಾಡುವ ಸ್ಥಿತಿಯಲ್ಲಿಲ್ಲ.

೪. ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ ಕಳೆದ ಕೆಲವು ದಿನಗಳಿಂದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಉಗ್ರರು ದೊಡ್ಡ ದಾಳಿಯ ಸಿದ್ಧತೆಯಲ್ಲಿ ಇದ್ದಾರೆ. ತಮಿಳುನಾಡಿನ ಕೊಯಿಮುತ್ತೂರು ಇಲ್ಲಿ ಚತುಶ್ಚಕ್ರ ವಾಹನದಲ್ಲಿ ಆಗಿರುವ ಸ್ಫೋಟದ ತನಿಖೆಯಿಂದ ಈ ಮಾಹಿತಿ ಬೆಳಕಿಗೆ ಬಂದಿತ್ತು. ‘ಕೊಯಿಮತ್ತೂರ್ ಮತ್ತು ಈಗಿನ ಮಂಗಳೂರಿನಲ್ಲಿ ನಡೆದಿರುವ ಸ್ಫೋಟದ ಏನಾದರೂ ಸಂಬಂಧ ಇದೆಯೇ ?’, ಇದರ ತನಿಖೆ ಮಾಡಲಾಗುತ್ತುದೆ. ಎರಡು ಸ್ಪೋಟದ ಹಿಂದೆ ಒಬ್ಬನೇ ಸೂತ್ರಧಾರ ಇರುವ ಸಾಧ್ಯತೆ ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು 

ಭಾರತದಲ್ಲಿ ಜಿಹಾದಿ ಭಯೋತ್ಪಾದಕ ಚಟುವಟಿಕೆ ನಡೆಸುವುದರ ಹಿಂದೆ ಇರುವ ಜಿಹಾದಿ ಮಾನಸಿಕತೆ ನಾಶಗೊಳಿಸಲು ಭಾರತ ಇನ್ನು ಮುಂದೆ ಸಮರೋಪಾದಿಯಲ್ಲಿ ಪ್ರಯತ್ನ ಮಾಡುವುದು ಅವಶ್ಯಕ !

ಪೊಲೀಸರು ಕೇವಲ ಮಾಹಿತಿ ನೀಡದೆ, ಉಗ್ರರನ್ನು ಹೇಡೆಮುರಿ ಕಟ್ಟಿ ಅವರಿಗೆ ಕಠಿಣ ಶಿಕ್ಷೆ ನೀಡುವ ಪ್ರಯತ್ನ ಮಾಡುವುದು ಅಪೇಕ್ಷಿತವಾಗಿದೆ !