…. ಹೀಗಾದರೆ ಪ್ರತಿಯೊಂದು ನಗರದಲ್ಲಿ ಅಫ್ತಾಬ ಜನಿಸಬಹುದು !

ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರ ಹೇಳಿಕೆ

ನವದೆಹಲಿ – ಅಫ್ತಾಬನು ಶ್ರದ್ಧಾ ವಾಲಕರಳನ್ನು ಮುಂಬಯಿಯಿಂದ ದೆಹಲಿಗೆ ಕರೆತಂದಿದ್ದನು. ಅಲ್ಲಿ ಅವಳ ಹತ್ಯೆ ಮಾಡಿ ಅವಳ ಶರೀರದ ೩೫ ತುಂಡುಗಳನ್ನು ಮಾಡಿದನು. ಅವಳ ಶವ ತಂಪು ಪೆಟ್ಟಿಗೆಯಲ್ಲಿ ಇಟ್ಟು, ಇತರೆ ಯುವತಿಯರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದನು.

ಇಂತಹ ಘಟನೆಗಳು ಜರುಗಬಾರದು, ಇದಕ್ಕಾಗಿ ದೇಶಕ್ಕೆ ದಕ್ಷ ಮುಖಂಡರ ಆವಶ್ಯಕತೆಯಿದೆ. ಒಂದು ವೇಳೆ ದೇಶಕ್ಕೆ ದಕ್ಷ ಮತ್ತು ಸರ್ವತೋಮುಖ ಅಭಿವೃದ್ಧಿ ಮಾಡುವ ಮುಖಂಡ ಸಿಗದಿದ್ದರೆ, ಪ್ರತಿಯೊಂದು ನಗರದಲ್ಲಿ ಅಫ್ತಾಬ ಜನಿಸಬಹುದು. ಇದರಿಂದ ದೇಶವನ್ನು ಸಂರಕ್ಷಿಸಲು ತೊಂದರೆಯಾಗಬಹುದು, ಎಂದು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಗುಜರಾತ್‌ನ ಕಚ್ಛನಲ್ಲಿ ವಿಧಾನಸಭೆ ಚುನಾವಣೆಯ ಪ್ರಸಾರದ ಸಮಯದಲ್ಲಿ ಹೇಳಿದರು.

ಜಾತ್ಯತೀತವಾದಿ ವಿರೋಧ ಪಕ್ಷದ ನಾಯಕರು ಶ್ರದ್ಧಾಳದ ವಿಷಯದಲ್ಲಿ ಏಕೆ ಮೌನವಾಗಿದ್ದಾರೆ ? – ಸಂಸದ ಸಾಕ್ಷಿ ಮಹಾರಾಜ

(ಸೌಜನ್ಯ : TV9 Bharatvarsh)

ಶ್ರದ್ಧಾಳ ವಿಚಾರದಲ್ಲಿ ವಿರೋಧ ಪಕ್ಷದವರಿಗೆ ಯಾಕೆ ಇಷ್ಟೊಂದು ಕೋಪ ? ಅವರಿಗೆ ಹಾವು ಕಚ್ಚಿದೆಯೇ ? ತಥಾಕಥಿತ ಜಾತ್ಯತೀತವಾದಿಗಳೆಂದು ಕರೆಸಿಕೊಳ್ಳುವ ಅರವಿಂದ್ ಕೇಜ್ರಿವಾಲ್, ಅಖಿಲೇಶ ಯಾದವ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಮುಂತಾದವರು ಯಾಕೆ ಮಾತನಾಡುತ್ತಿಲ್ಲ, ಎಂದು ಭಾಜಪ ಸಂಸದ ಸಾಕ್ಷಿ ಮಹಾರಾಜ್ ಪ್ರಶ್ನೆ ಎತ್ತಿದ್ದಾರೆ.