ದಮೋಹ (ಮಧ್ಯಪ್ರದೇಶ) ಇಲ್ಲಿ ದಲಿತ ಹಿಂದೂ ದಂಪತಿಗಳನ್ನು ಮತಾಂತರಕ್ಕೆ ಪಾದ್ರಿಯಿಂದ ೧ ಲಕ್ಷ ೨೦ ಸಾವಿರ ರೂಪಾಯಿ ಹಣ !

ದಂಪತಿಗಳು ಚರ್ಚ್‌ಗೆ ಹೋಗುವುದು ನಿಲ್ಲಿಸಿದ ನಂತರ ಪಾದ್ರಿ ಕೊಟ್ಟಿರುವ ಹಣಕ್ಕಿಂತ ೪ ಪಟ್ಟು ಹಣ ಹಿಂತಿರುಗಿಸಲು ಹೇಳಿದನು !

ದಮೊಹ (ಮಧ್ಯಪ್ರದೇಶ) – ಇಲ್ಲಿ ಓರ್ವ ದಲಿತ ಹಿಂದೂ ದಂಪತಿಗೆ ಆಮಿಷ ತೋರಿಸಿ ಅವರನ್ನು ಕ್ರೈಸ್ತ ಗೊಳಿಸುವುದು ಮತ್ತು ನಂತರ ಬೆದರಿಕೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಈ ದಂಪತಿಯಲ್ಲಿನ ಮಹಿಳೆಯು ‘ನನ್ನ ಗಂಡನಿಗೆ ಹಣ ನೀಡಿ ನಮ್ಮಿಬ್ಬರನ್ನು ಕ್ರೈಸ್ತರನ್ನಾಗಿ ಮಾಡಿದ್ದರು; ಆದರೆ ಯಾವಾಗ ನಾವು ಚರ್ಚ್‌ಗೆ ಹೋಗುವುದು ನಿಲ್ಲಿಸಿದೆವು ಆಗ ಪಾದ್ರಿ ಅಜಯ ಲಾಲ್ ಮತ್ತು ಅವನ ಸಹಚರರು ನಮಗೆ ನೀಡಿರುವ ಹಣಕ್ಕಿಂತಲೂ ೪ ಪಟ್ಟು ಹಣ ಹಿಂತಿರುಗಿಸಲು ಹೇಳಿದರು’, ಎಂಬ ಆರೋಪ ಮಾಡಿದ್ದಾರೆ. ಅಜಯ ಲಾಲ್ ಇವನು ಈ ಮಹಿಳೆಯ ಗಂಡಗೆ ಮತಾಂತರಕ್ಕಾಗಿ ೧ ಲಕ್ಷದ ೨೦ ಸಾವಿರ ರೂಪಾಯಿ ನೀಡಿದ್ದನು. ಅದರಲ್ಲಿನ ೯೦ ಸಾವಿರ ರೂಪಾಯಿ ಹಿಂತಿರುಗಿಸಿದ್ದೇವೆ ಹಾಗೂ ಉಳಿದ ಹಣ ನೀಡುವುದಕ್ಕೂ ನಾವು ಸಿದ್ಧವಾಗಿದ್ದೇವೆ ಎಂದು ಹೇಳಿದರು. ಸಾಕ್ಷಿ ಎಂದು ಆಕೆಯ ಬಳಿ ಆರೋಪಿಯ ಸಹಿ ಇರುವ ದಿನಚರಿ ಇದೆ.

ಸಂಪಾದಕೀಯ ನಿಲುವು

ಇದರಿಂದ ಕ್ರೈಸ್ತ ಮಿಷಿನರಿ ಬಡ ಮತ್ತು ದಲಿತ ಹಿಂದೂಗಳನ್ನು ಯಾವ ರೀತಿ ಮತಾಂತರ ಮಾಡುತ್ತಾರೆ, ಇದು ಸ್ಪಷ್ಟವಾಗುತ್ತದೆ ! ಈ ವಿಷಯವಾಗಿ ತಥಾಕಥಿತ ಜ್ಯಾತ್ಯತೀತರು ಬಾಯಿ ತೆರೆಯುವರೇ !