ಕಲಬುರ್ಗಿಯಲ್ಲಿ ಜನತಾದಳ (ಜಾತ್ಯಾತೀತ) ಪಕ್ಷದ ಮುಖಂಡನ ಹತ್ಯೆ

ಹತ್ಯೆಯ ಹಿಂದೆ ಕಳ್ಳತನದ ಉದ್ದೇಶವಿರುವ ಅನುಮಾನ

ಜನತಾದಳ (ಜಾತ್ಯಾತೀತ) ಪಕ್ಷದ ಮಾಜಿ ಮುಖಂಡ ಮಲ್ಲಿಕಾರ್ಜುನ ಮುತ್ಯಾಲ

ಕಲಬುರ್ಗಿ– ಇಲ್ಲಿ ಜನತಾದಳ (ಜಾತ್ಯಾತೀತ) ಪಕ್ಷದ ಮಾಜಿ ಮುಖಂಡ ಮಲ್ಲಿಕಾರ್ಜುನ ಮುತ್ಯಾಲನ ಹತ್ಯೆ ಮಾಡಲಾಗಿದೆ. ಅವರು ೬೪ ವರ್ಷದವರಾಗಿದ್ದರು. ಹತ್ಯೆಯ ಒಂದು ದಿನ ಮೊದಲು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ಶೀಘ್ರದಲ್ಲೇ ಭಾಜಪ ಪಕ್ಷವನ್ನು ಪ್ರವೇಶಿಸುವವರಿದ್ದರು. ಅವರ ಶವ ಅವರ ಅಂಗಡಿಯ ಹತ್ತಿರ ಸಿಕ್ಕಿತು. ಅವರ ಅಂಗಡಿಯಲ್ಲಿರುವ ಹಣ ಕಾಣೆಯಾಗಿದೆ. ‘ಈ ಹತ್ಯೆ ಕಳ್ಳತನದ ಉದ್ದೇಶದಿಂದ ಆಗಿರಬಹುದೇ ?’, ಎಂದು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ. ಅವರ ಪುತ್ರ ವೆಂಕಟೇಶ ಇವರು, ‘ನನ್ನ ತಂದೆ ರಾತ್ರಿ ಅಂಗಡಿಯಲ್ಲಿ ಮಲಗುತ್ತಿರುತ್ತಾರೆ. ಇದು ಕಳ್ಳತನದ ಉದ್ದೇಶದಿಂದ ಹತ್ಯೆಯಾಗಿರಬಹುದು ಎಂದೆನಿಸುತ್ತದೆ. ಅಂಗಡಿಯ ಹಣವನ್ನು ಕಳ್ಳತನ ಮಾಡಲಾಗಿದೆ’ ಎಂದು ಹೇಳಿದರು.