ಕೇರಳದಲ್ಲಿ ಬಲಾತ್ಕಾರ ಪೀಡಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪೊಲೀಸ ಅಧಿಕಾರಿ ಪರಾರಿ

ಹೆಚ್ಚುವರಿ ಉಪನಿರೀಕ್ಷಕ ಹುದ್ದೆಯಲ್ಲಿರುವ ಎ.ಜೆ. ಬಾಬು

ವಾಯನಾಡ(ಕೇರಳ)– ಇಲ್ಲಿಯ ಬಲಾತ್ಕಾರದಿಂದ ಪೀಡಿತಳಾಗಿದ್ದ ಒಬ್ಬ ಹದಿಹರೆಯದ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದ್ದ ಹೆಚ್ಚುವರಿ ಉಪನಿರೀಕ್ಷಕ ಹುದ್ದೆಯಲ್ಲಿರುವ ಎ.ಜೆ. ಬಾಬು ಹೆಸರಿನ ಪೊಲೀಸ ಅಧಿಕಾರಿಯ ವಿರುದ್ಧ ಹಿಂದುಳಿದ ಆಯೋಗವು ದೂರು ದಾಖಲಿಸುತ್ತಲೇ ಅವನು ಪರಾರಿಯಾಗಿದ್ದಾನೆ.

೧. ವಾಯನಾಡ ಜಿಲ್ಲೆಯ ೧೭ ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ನಡೆಸಲಾಗಿತ್ತು. ಅದರ ತನಿಖೆ ನಡೆಸುವ ನಿಮಿತ್ತದಿಂದ ಪೊಲೀಸರು ಬಾಲಕಿಯನ್ನು ಊಟಿಗೆ ಕರೆದುಕೊಂಡು ಹೋಗಿದ್ದರು.

೨. ಆ ಸಂದರ್ಭದಲ್ಲಿ ಗಾಡಿಯಲ್ಲಿ ಮಹಿಳಾ ಪೊಲೀಸ ಮತ್ತು ಇತರೆ ಯಾರೂ ಇಲ್ಲದೇ ಇರುವುದರ ದುರುಪಯೋಗವನ್ನು ಪಡೆದುಕೊಂಡು ಬಾಬು ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದನು. ಈ ಸಮಯದಲ್ಲಿ ಬಾಬು ಅವಳಿಗೆ ಅಶ್ಲೀಲ ಶಬ್ದಗಳನ್ನು ಉಪಯೋಗಿಸಿದನು ಮತ್ತು ಅವಳ ಸಮ್ಮತಿಯಿಲ್ಲದೇ ಅವಳ ಛಾಯಾಚಿತ್ರಗಳನ್ನು ತೆಗೆದಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

೩. ಸಾಮಾಜಿಕ ಕಾರ್ಯಕರ್ತೆ ಪಿ.ಇ. ಉಷಾ ಹೇಳಿರುವುದೇನೆಂದರೆ, ಜುಲೈ ೨೦೨೨ ರಲ್ಲಿ ಜರುಗಿದ ಈ ಪ್ರಕರಣದ ದೂರನ್ನು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದರು. (ಇಂತಹ ಸಮಾಜದ್ರೋಹಿ ಪೊಲೀಸರ ಮೇಲೆ ಕ್ರಮ ಜರುಗಿಸುವುದು ಆವಶ್ಯಕವಾಗಿದೆ.- ಸಂಪಾದಕರು) ಪ್ರಸಾರಮಾಧ್ಯಮಗಳಲ್ಲಿ ಈ ಸುದ್ದಿ ಬರುತ್ತಲೇ ಪೊಲೀಸರು ದೂರು ದಾಖಲಿಸಿಕೊಳ್ಳಲೇ ಬೇಕಾಯಿತು.

೪. ‘ಸಂಬಂಧಿಸಿದ ಪೊಲೀಸ ಅಧಿಕಾರಿ ಪರಾರಿಯಾಗಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಅವನು ಬಂಧನದ ಪೂರ್ವ ಜಾಮೀನು ಪಡೆಯುವನು ಮತ್ತು ಪೊಲೀಸರು ಸಂಬಂಧಿಸಿದ ಅಧಿಕಾರಿಯನ್ನು ಬೆಂಬಲಿಸುವರು’, ಎಂದೂ ಉಷಾ ಹೇಳಿದರು.

ಸಂಪಾದಕೀಯ ನಿಲುವು

  • ಜನತೆಯ ರಕ್ಷಕರಲ್ಲ, ಭಕ್ಷಕರಾಗಿರುವ ಪೊಲೀಸರು
  • ಇಂತಹ ಪೊಲೀಸರಿಂದ ತುಂಬಿರುವ ಪೊಲೀಸದಳವು ಮಹಿಳೆಯರ ರಕ್ಷಣೆಯನ್ನು ಹೇಗೆ ಮಾಡುವರು ?