ಸಾಧಕರಿಗೆ ಅವರ ಸಂಬಂಧಿಕರು ಮತ್ತು ಸಾಧಕರು ಇವರಲ್ಲಿನ ಸಂಬಂಧದಲ್ಲಿ ಅರಿವಾದ ಭೇದ !

ಕು. ಮಧುರಾ ಭೋಸಲೆ

‘ಸಾಧಕರ ಸಂಪರ್ಕವು ಅವರ ಸಂಬಂಧಿಕರು ಮತ್ತು ಸಾಧಕರು ಹೀಗೆ ಇಬ್ಬರ ಜೊತೆಗೂ ಬರುತ್ತದೆ. ಸಾಧಕರು ಸಂಬಂಧಿಕರೊಂದಿಗೆ ಮಾಯೆಯ ಮತ್ತು ಸಾಧಕರೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಿ ಜೀವನವನ್ನು ಜೀವಿಸುತ್ತಾರೆ. ಸಾಧನೆಯನ್ನು ಮಾಡುತ್ತಿರುವಾಗ ವೈಚಾರಿಕ (ವಿಚಾರಗಳ) ಸ್ತರವು ಮಾನಸಿಕ ಸ್ತರದಿಂದ ಆಧ್ಯಾತ್ಮಿಕ ಸ್ತರದ ಕಡೆಗೆ ಹೊರಳುತ್ತದೆ. ಆದ್ದರಿಂದ ಅವರಿಗೆ ಮಾಯೆಯಲ್ಲಿನ ಕುಟುಂಬದವರಿಂದ ದೊರಕುವ ಸುಖಕ್ಕಿಂತ ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಸ್ತರದಲ್ಲಿರುವ ಆನಂದವನ್ನು ಅನುಭವಿಸಲು ಹೆಚ್ಚು ಒಳ್ಳೆಯದೆನಿಸುತ್ತದೆ. ಆದುದರಿಂದ ಅವರ ಒಲವು ಕುಟುಂಬದವರಿಗಿಂತ ಸಾಧಕರ ಕಡೆಗೆ ಹೆಚ್ಚು ಪ್ರಮಾಣದಲ್ಲಿರುತ್ತದೆ. ಎರಡೂ ಸ್ತರಗಳ ಸಂಬಂಧವನ್ನು ಅನುಭವಿಸುತ್ತಿರುವಾಗ ಸಾಧಕರಿಗೆ ಮುಂದಿನಂತೆ ವ್ಯತ್ಯಾಸದ ಅರಿವಾಗುತ್ತದೆ.

೧. ಸಾಧಕರಿಗೆ ಅವರ ಸಂಬಂಧಿಕರು ಮತ್ತು ಸಾಧಕರೊಂದಿಗಿನ ಸಂಬಂಧವನ್ನು ಕಾಪಾಡುವಾಗ ಅರಿವಾದ ವ್ಯತ್ಯಾಸ

೨. ಸಾಧಕರ ಕುಟುಂಬದವರೇ, ಸಾಧಕರಿಗೆ ಕುಟುಂಬದವರಿಗಿಂತ ಸಾಧಕರು ಹೆಚ್ಚು ಹತ್ತಿರದವರೆಂದು ಅನಿಸುವುದರ ಹಿಂದಿನ ಕಾರ್ಯಕಾರಣಭಾವವನ್ನು ತಿಳಿದುಕೊಳ್ಳಿರಿ ಮತ್ತು ಅವರನ್ನು ಆಶ್ರಮಕ್ಕೆ ಹೋಗಲು ವಿರೋಧಿಸಬೇಡಿರಿ, ಅದರ ಬದಲು ಅವರು ಮಾಡುತ್ತಿರುವ ಸಾಧನೆಯ ಬಗ್ಗೆ ಅವರ ಪ್ರಶಂಸೆಯನ್ನು ಮಾಡಿರಿ  !

ಯಾವಾಗ ಸಾಧಕರು ಮಾಯೆಯಲ್ಲಿನ ಜೀವನವನ್ನು ಜೀವಿಸುತ್ತಿರುತ್ತಾರೆಯೋ,  ಆಗ ಅವರಿಗೆ ಕುಟುಂಬದವರು ಮಹತ್ವದ್ದವರು ಎಂದು ಅನಿಸುತ್ತದೆ; ಆದರೆ ಯಾವಾಗ ಸಾಧಕರ ಸಾಧನೆ ಆರಂಭವಾಗುತ್ತದೆಯೋ, ಆಗ ಅವರ ಆಧ್ಯಾತ್ಮಿಕ ಜೀವನ ಆರಂಭವಾಗುತ್ತದೆ. ಆದ್ದರಿಂದ ಅವರ ವಿಚಾರದ ಸ್ತರವು ಮಾನಸಿಕ ಸ್ತರದಿಂದ ಆಧ್ಯಾತ್ಮಿಕ ಸ್ತರದ ಕಡೆಗೆ ಹೊರಳುತ್ತದೆ. ಆದ್ದರಿಂದ ಅವರಿಗೆ ಮಾಯೆಯಲ್ಲಿನ ಕುಟುಂಬದವರಿಂದ ದೊರಕುವ ಸುಖಕ್ಕಿಂತ ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಸ್ತರದಲ್ಲಿರುವ ಆನಂದವನ್ನು ಅನುಭವಿಸಲು ಹೆಚ್ಚು ಒಳ್ಳೆಯದೆನಿಸುತ್ತದೆ. ಆದುದರಿಂದ ಅವರ ಒಲವು ಕುಟುಂಬದವರಿಗಿಂತ ಸಾಧಕರ ಕಡೆಗೆ ಹೆಚ್ಚು ಪ್ರಮಾಣದಲ್ಲಿರುತ್ತದೆ. ಅದೇ ರೀತಿ ಕುಟುಂಬದವರೊಂದಿನ ಸಂಬಂಧವನ್ನು ಕಾಪಾಡುವಾಗ ಅವರ ಅಹಂನ್ನು ಕಾಪಾಡಬೇಕಾಗುತ್ತದೆ; ಆದರೆ ಸಾಧಕರೊಂದಿಗಿರುವ ಸಂಬಂಧ ಅಹಂರಹಿತವಾಗಿರುತ್ತದೆ. ಆದುದರಿಂದ ಅವರಿಗೆ ಕುಟುಂಬದವರಿಗಿಂತ ಸಾಧಕರು ಹೆಚ್ಚು ಹತ್ತಿರದವರೆಂದು ಅನಿಸುತ್ತದೆ.

ಇದರಿಂದ ಬಹಳಷ್ಟು ಸಾಧಕರಿಗೆ ಮನೆಗೆ ಹೋಗುವುದು ಬೇಡ, ಆಶ್ರಮದಲ್ಲಿಯೇ  ಇರೋಣ ಎಂದು ಅನಿಸುತ್ತದೆ. ಕುಟುಂಬದವರೇ, ಅವರಿಗೆ ಆಶ್ರಮಕ್ಕೆ ಹೋಗಲು ವಿರೋಧ ಮಾಡಬೇಡಿರಿ, ಬದಲಾಗಿ ಅವರು ಮಾಡುವ ಸಾಧನೆಗಾಗಿ ಅವರನ್ನು ಪ್ರಶಂಸಿಸಿ. ಇದರಿಂದ ನಿಮ್ಮ ಸಾಧನೆಯೂ ಆಗುವುದು.

೩. ಸಾಧಕರ ಆಧ್ಯಾತ್ಮಿಕ ಮಟ್ಟಕ್ಕನುಸಾರ ಅವರಿಗೆ ಇಷ್ಟವಾಗುವ ಸಂಬಂಧದಲ್ಲಿ ಆಗುವ ಬದಲಾವಣೆಗಳು

ಅ. ಶೇ. ೨೦ ರಿಂದ ಶೇ. ೫೦ ರಷ್ಟು ಮಟ್ಟದ ಸಾಧಕನಿಗೆ ಮಾಯೆಯಲ್ಲಿನ ಸಂಬಂಧ ಮಹತ್ವದ್ದೆನಿಸುತ್ತದೆ.

ಆ. ಶೇ. ೫೧ ರಿಂದ ೬೦ ಮಟ್ಟದ ಸಾಧಕನಿಗೆ ಮಾಯೆಯಲ್ಲಿನ ಸಂಬಂಧಕ್ಕಿಂತ ಸಾಧಕರ ಆಧ್ಯಾತ್ಮಿಕ ಸ್ತರದಲ್ಲಿನ ಸಂಬಂಧ ಹೆಚ್ಚು ಹತ್ತಿರದ್ದೆಂದು ಅನಿಸುತ್ತದೆ, ಆದುದರಿಂದ ಅವನಿಗೆ ಸಂಬಂಧಿಕರಿಗಿಂತ ಸಾಧಕರು ಹತ್ತಿರದವರೆಂದು ಅನಿಸುತ್ತದೆ.

ಇ. ಶೇ. ೬೧ ಕ್ಕಿಂತ ಹೆಚ್ಚು ಮಟ್ಟವಿರುವ ಸಾಧಕನಲ್ಲಿ ಶಿಷ್ಯನ ಗುಣಗಳು ಹೆಚ್ಚಾಗತೊಡಗುತ್ತವೆ. ಆದ್ದರಿಂದ ಅವನಿಗೆ ‘ಗುರು ಮತ್ತು ಶಿಷ್ಯ’ ಇವರ ಸಂಬಂಧ ಹತ್ತಿರದ್ದು ಎಂದು ಅನಿಸತೊಡಗುತ್ತದೆ.

ಈ. ಶೇ. ೭೦ ರ ಮಟ್ಟಕ್ಕಿಂತ ಮುಂದಿನ ಸಾಧಕರ (ಸಂತರ) ಒಲವು ಶ್ರೀಗುರುಗಳ ನಿರ್ಗುಣ ರೂಪದ ಕಡೆಗೆ (ಈಶ್ವರನಕಡೆಗೆ) ನಿರ್ಮಾಣವಾಗಿದ್ದರಿಂದ ಸಂತರು ಮತ್ತು ಈಶ್ವರ ಇವರಲ್ಲಿ ‘ಭಕ್ತ ಮತ್ತು ಭಗವಂತ’ ಈ ಸಂಬಂಧ ದೃಢವಾಗತೊಡಗುತ್ತದೆ.

೪. ಸಾಧಕರ ಆಧ್ಯಾತ್ಮಿಕ ಮಟ್ಟ, ಸಾಧಕರ ವಿಚಾರಗಳ ಸ್ತರ ಮತ್ತು ಸಾಧಕರಿಗೆ ಇಷ್ಟವಾಗುವ ಸಂಬಂಧ

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೩), ಸನಾತನ ಆಶ್ರಮ, ಗೋವಾ. (೧೪.೯. ೨೦೨೧)

ಸೂಕ್ಷ್ಮ :  ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥ ಗಳಲ್ಲಿ ಉಲ್ಲೇಖವಿದೆ.

ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ.

ಈ ವಾರದ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದ’ದಲ್ಲಿ ಹಲವೆಡೆ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ, ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.