ದೇಶದಲ್ಲಿ ಮುಸಲ್ಮಾನರಿಂದ ‘ಲವ್ ಜಿಹಾದ್’ ನಡೆಸಲಾಗುತ್ತಿದೆ ! – ಕೇಂದ್ರ ಸಚಿವ ಗಿರಿರಾಜ ಸಿಂಹ

ನವ ದೆಹಲಿ – ದೆಹಲಿಯಲ್ಲಿ ಶ್ರದ್ಧಾ ವಾಲ್ಕರ್ ಈ ಹಿಂದೂ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ, ಹಾಗೂ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಈ ಘಟನೆ ಅತ್ಯಂತ ದುರಾದೃಷ್ಟಕರವಾಗಿದೆ. ದೇಶದಲ್ಲಿನ ಮುಸಲ್ಮಾನರಿಂದ ‘ಲವ್ ಜಿಹಾದ್’ ನಡೆಸಲಾಗುತ್ತಿದೆ. ಷಡ್ಯಂತ್ರ ನಡೆಸಿ ಹಿಂದೂ ಯುವತಿಯರನ್ನು ಮುಸಲ್ಮಾನ ಯುವಕರು ಪ್ರೇಮದ ಬಲೆಗೆ ಸಿಲುಕಿಸಿ ನಂತರ ಅವರನ್ನು ಬಿಟ್ಟುಬಿಡುತ್ತಾರೆ ಅಥವಾ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಹತ್ಯೆ ಮಾಡುತ್ತಾರೆ, ಎಂದು ಕೇಂದ್ರ ಸಚಿವ ಗಿರಿರಾಜ ಸಿಂಹ ಅವರು ಪ್ರತಿಕ್ರಿಯೆ ನೀಡಿದರು.

ಅಫ್ತಾಬ್‌ನು ಶ್ರದ್ಧಾಳನ್ನು ಹತ್ಯೆ ಮಾಡಿದ ನಂತರ ಇನ್ನೊಬ್ಬ ಯುವತಿಯನ್ನು ಮನೆಗೆ ಕರೆಸಿದ್ದನು !

‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿ (ವಿವಾಹ ಮಾಡಿಕೊಳ್ಳದೆ ಒಟ್ಟಾಗಿ ಇರುವುದು) ಇರುವ ಶ್ರದ್ಧಾ ವಾಲ್ಕರ ಇವಳ ಹತ್ಯೆ ಮಾಡಿದ ಅಫ್ತಾಬ್ ಪುನಾವಾಲ ಇವನನ್ನು ಪೊಲೀಸರು ಬಂಧಿಸಿದರು. ನಂತರ ಪೊಲೀಸರ ವಿಚಾರಣೆಯಲ್ಲಿ ಅವನು ಅನೇಕ ಆಘಾತಕಾರಿ ಮಾಹಿತಿ ನೀಡಿದ್ದಾನೆ. ಶ್ರದ್ಧಾನನ್ನು ಭೇಟಿಯಾದ ನಂತರ ಅಫ್ತಾಬ್‌ನು ‘ಬಂಬಲ್’ ಈ ‘ಡೇಟಿಂಗ್ ಆಪ್’ ಸಂಚಾರವಾಣಿಯಿಂದ ತೆಗೆದುಹಾಕಿದ್ದನು. ಅದನ್ನು ಅವನು ಅವಳ ಹತ್ಯೆಯ ನಂತರ ಮತ್ತೆ ‘ಡೌನ್‌ಲೋಡ್’ ಮಾಡಿದ್ದನು. ಅದರ ಮೂಲಕ ಅವನು ಇನ್ನೊಬ್ಬ ಯುವತಿಯ ಜೊತೆಗೆ ಪರಿಚಯ ಮಾಡಿಕೊಂಡು ಆಕೆ ಅವನ ಮನೆಗೆ ಕೂಡ ಬಂದು ಹೋಗಿದ್ದಳು ಎಂದು ಪೊಲೀಸರಿಗೆ ಪ್ರಾರ್ಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ.

ಸಂಪಾದಕೀಯ ನಿಲುವು

ಗಿರಿರಾಜ ಸಿಂಹ ಇವರು ಲವ್ ಜಿಹಾದಿನ ಘಟನೆಗಳು ತಡೆಯುವುದಕ್ಕಾಗಿ ಅವರ ಸರಕಾರಕ್ಕೆ ಹೇಳಿ ದೇಶದಲ್ಲಿ ಇದರ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡುವುದಕ್ಕೆ ವ್ಯವಸ್ಥೆ ಮಾಡಬೇಕು !