ರಾಜನಾಂದಗಾವ (ಛತ್ತಿಸ್‌ಗಢ) ಇಲ್ಲಿಯ ಬೌದ್ಧರ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳ ಪೂಜೆ ಮಾಡದಿರಲು ಪ್ರತಿಜ್ಞೆ !

ರಾಜನಾಂದಗಾವದ ಕಾಂಗ್ರೆಸ್‌ನ ಮಹಾಪೌರ ಹೇಮಾ ದೇಶಮುಖ ಇವರ ಉಪಸ್ಥಿತಿ

ರಾಜನಾಂದಗಾವ(ಛತ್ತೀಸ್‌ಗಡ) – ಇಲ್ಲಿ ನವೆಂಬರ್ ೭ ರಂದು ಆಯೋಜಿಸಲಾಗಿದ್ದ ಒಂದು ರಾಜ್ಯಮಟ್ಟದ ಬೌದ್ಧ ಸಮ್ಮೇಳನದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಉಪಸ್ಥಿತರಿರುವ, ‘ನಾನು ಗೌರಿ, ಗಣಪತಿ ಮುಂತಾದ ಹಿಂದೂ ದೇವತೆಗಳ ಪೈಕಿ ಯಾರನ್ನು ನಂಬುವುದಿಲ್ಲ ಮತ್ತು ಎಂದಿಗೂ ಅವರ ಪೂಜೆ ಮಾಡುವುದಿಲ್ಲ. ನಾನು ‘ಈಶ್ವರನೇ ಅವತಾರ ತಾಳಿದ್ದಾನೆ’, ಇದರ ಬಗ್ಗೆ ಎಂದೂ ವಿಶ್ವಾಸ ಇಡುವುದಿಲ್ಲ’, ಎಂದು ಪ್ರತಿಜ್ಞೆ ಮಾಡುತ್ತಿವುದು ಕಾಣುತ್ತಿದೆ. ಪ್ರತಿಜ್ಞೆ ಸ್ವೀಕರಿಸಿದವರಲ್ಲಿ ಕಾಂಗ್ರೆಸ್‌ನ ಮಹಾಪೌರ ಹೇಮಾ ದೇಶಮುಖ ಇವರು ಉಪಸ್ಥಿತರಿದ್ದರು. ಕೆಲವು ದಿನಗಳ ಹಿಂದೆ ದೆಹಲಿಯ ಆಮ್ ಆದ್ಮಿ ಪಕ್ಷದ ಸಚಿವ ರಾಜೇಂದ್ರ ಪಾಲ್ ಗೌತಮ ಇವರು ಕೂಡ ಬೌದ್ಧರ ಕಾರ್ಯಕ್ರಮದಲ್ಲಿ ಉಪಸ್ಥಿತ ಇರುವವರಿಗೆ ಈ ರೀತಿಯ ಪ್ರತಿಜ್ಞೆ ನೀಡಿದ್ದರು.

ಸನಾತನ ವಿರೋಧಿ ಕಾರ್ಯಕ್ರಮ ಇದ್ದರೆ ಮತ್ತು ಅದರ ಸಂಬಂಧ ಕಾಂಗ್ರೆಸ್‌ನ ಜೊತೆ ಇಲ್ಲದಿರುವುದು ಹೀಗೆ ಆಗಲು ಸಾಧ್ಯವೇ ! – ಭಾಜಪ

ಭಾಜಪದ ನಾಯಕ ಹಾಗೂ ಕೇಂದ್ರ ರಾಜ್ಯ ಸಚಿವ ರೇಣುಕಾ ಸಿಂಹ ಇವರು ಈ ವಿಡಿಯೋ ಟ್ವೀಟ್ ಮಾಡಿ, ‘ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ನ ರಾಜ್ಯದಲ್ಲಿ ಹಿಂದೂಗಳಿಗೆ ಮಾಡಲಾಗುತ್ತಿರುವ ವಿರೋಧ ಶಿಖರ ಮುಟ್ಟಿದೆ. ಹಿಂದೂಗಳ ಶ್ರದ್ಧೆಯ ಮೇಲೆ ಬಹಿರಂಗವಾಗಿಯೇ ಆಘಾತ ಮಾಡಲಾಗುತ್ತಿದೆ. ಮತ್ತು ಕಾಂಗ್ರೆಸ್‌ನ ಮಹಾಪೌರ ಹಿಂದೂ ಧರ್ಮದ ವಿರೋಧದಲ್ಲಿ ಪ್ರತಿಜ್ಞೆ ತೆಗೆದುಕೊಳ್ಳುತ್ತಾರೆ. ಸನಾತನ ವಿರೋಧಿ ಕಾರ್ಯಕ್ರಮ ಇದ್ದರೆ ಅದರ ಸಂಬಂಧ ಕಾಂಗ್ರೆಸ್‌ನ ಜೊತೆ ಇಲ್ಲ ಹೀಗೆ ಆಗಲು ಸಾಧ್ಯವೇ ?’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್‌ನ ರಾಜ್ಯದಲ್ಲಿ ಕಾಂಗ್ರೆಸ್‌ನ ಮಹಾಪೌರರ ಉಪಸ್ಥಿತಿಯಲ್ಲಿ ಈ ರೀತಿಯ ಪ್ರತಿಜ್ಞೆ ಮಾಡುವುದು, ಇದರಲ್ಲಿ ಆಶ್ಚರ್ಯ ಪಡುವ ಅವಶ್ಯಕತೆ ಇಲ್ಲ !

ಕಾಂಗ್ರೆಸ್ ಎಂದರೆ ‘ಹಿಂದೂ ದ್ವೇಷಿ ಪಕ್ಷ’ ಹೀಗೆ ಇಲ್ಲಿಯವರೆಗಿನ ಪ್ರತಿಮೆ ಮತ್ತು ಮಾರ್ಗಕ್ರಮಣ ಇದೆ ! ಆದ್ದರಿಂದ ಹಿಂದೂ ಅದನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡುತ್ತಿದೆ, ಇದು ಅದಕ್ಕೆ ಇನ್ನೂ ತಿಳಿದಿಲ್ಲ, ಇದಕ್ಕೆ ‘ವಿನಾಶಕಾಲೈ ವಿಪರೀತ ಬುದ್ಧಿ’, ಎಂದೆ ಹೇಳಬೇಕಾಗುತ್ತದೆ !