ಟ್ವಿಟರ್ ಖಾತೆಗೆ ಹಣವನ್ನು ಪಾವತಿಸಬೇಕಾಗಬಹುದು !

ನವದೆಹಲಿ – ‘ಟ್ವಿಟ್ಟರ್’ನ ನೂತನ ಮಾಲೀಕತ್ವ ಹೊಂದಿರುವ ಎಲಾನ ಮಸ್ಕ ಅವರು ಟ್ವಿಟ್ಟರ್ ಬಳಕೆದಾರರಿಗೆ ಶುಲ್ಕ ವಿಧಿಸುವ ಸಿದ್ದತೆಯಲ್ಲಿದ್ದಾರೆಂದು ವರದಿಯಾಗಿದೆ. ಮಸ್ಕ ಇವರು ಇತ್ತೀಚೆಗೆ ಕೆಲವು ದೇಶಗಳಲ್ಲಿ ‘ಬ್ಲೂ ಟಿಕ್’ಗಾಗಿ ಹಣವನ್ನು ವಿಧಿಸಲಾಗುವುದು ಎಂದು ಘೋಷಿಸಿದ್ದರು.

ಮಸ್ಕ ಅವರು ಸಭೆಯೊಂದರಲ್ಲಿ ಟ್ವಿಟ್ಟರ್ ಖಾತೆ ಹೊಂದಿರುವವರಿಗೆ ಶುಲ್ಕ ವಿಧಿಸುವ ಪರಿಕಲ್ಪನೆಯ ಬಗ್ಗೆ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿದರು. ಈ ಯೋಜನೆಯಿಂದಾಗಿ ಬಳಕೆದಾರರಿಗೆ ಸೀಮಿತ ಕಾಲಾವಧಿಯ ವರೆಗೆ ಉಚಿತ ಪ್ರವೇಶ ಸಿಗಲಿದೆ. ತದನಂತರ ಖಾತೆಯನ್ನು ಉಪಯೋಗಿಸಬಕಿದ್ದದರೆ ಸದಸ್ಯತ್ವಕ್ಕಾಗಿ ಹಣ ಪಾವತಿಸಬೇಕಾಗುವುದು.