ಬಂಗಾಲದ ಉಪಸಾಗರದಲ್ಲಿ ಭಾರತ ಮುಂಬರುವ ಕ್ಷಿಪಣಿ ಪರೀಕ್ಷಣೆಯ ಮೇಲೆ ನಿಗಾ ಇಡಲಿದೆ !
ಬೀಚಿಂಗ್ (ಚೀನಾ) – ಚೀನಾವು ತನ್ನ ಬೇಹುಗಾರಿಕೆ ನೌಕೆ ‘ಯುಆನ್ ವಾಂಗ – ೬’ಅನ್ನು ಹಿಂದ ಮಹಾಸಾಗರದಲ್ಲಿ ನೇಮಿಸಿದೆ. ಚೀನಾವು ಆಗಸ್ಟ್ ೨೦೨೨ ರಂದು ಇದೇ ನೌಕೆಯನ್ನು ಶ್ರೀಲಂಕಾದ ಹಂಬನಟೋಟಾಗೆ ಕಳುಹಿಸಿತ್ತು. ಅಲ್ಲಿ ಅದು ೬ ದಿನ ನಿಂತಿತ್ತು. ಭಾರತ ನವಂಬರ್ ೧೦ ಮತ್ತು ೧೧ ರಂದು ಒಡಿಸ್ಸಾದ ವಿಲರ್ ದ್ವೀಪದಲ್ಲಿ ಕ್ಷಿಪಣಿಯ ಪರೀಕ್ಷಣೆ ನಡೆಸಲಿದೆ. ಈ ದ್ವೀಪ ಬಂಗಾಲ ಸಾಗರದಲ್ಲಿದೆ. ಚೀನಾ ಈ ನೌಕೆಯ ಸಹಾಯದಿಂದ ಕ್ಷಿಪಣಿಯ ಮಾರ್ಗ, ವೇಗ, ಶ್ರೇಣಿ ಮತ್ತು ನಿಖರತೆ ಇದರ ಬಗ್ಗೆ ಮಹತ್ವದ ಮಾಹಿತಿ ಪಡೆಯಬಹುದು.
Navy tracks #Chinese surveillance vessel in #IndianOcean ahead of missile testhttps://t.co/JCPcZHko1g
— Zee News English (@ZeeNewsEnglish) November 5, 2022