ಮುಖ್ಯ ಸಂಪಾದಕರ ವಿರುದ್ಧ ನೇರ ಆರೋಪಗಳಾಗದ ಹೊರತು ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

‘ಇಂಡಿಯಾ ಟುಡೇ’ ನಿಯತಕಾಲಿಕದ ಮಾಜಿ ಸಂಪಾದಕ ಅರುಣ್ ಪುರಿ

ನವದೆಹಲಿ: ‘ಇಂಡಿಯಾ ಟುಡೇ’ ನಿಯತಕಾಲಿಕದ ಮಾಜಿ ಸಂಪಾದಕ ಅರುಣ್ ಪುರಿ ಅವರು ಸಲ್ಲಿಸಿದ್ದ ಅರ್ಜಿಯ ಬಗ್ಗೆ ಇತ್ತೀಚೆಗೆ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯ, ‘ಮಾಧ್ಯಮ ಸಂಸ್ಥೆಯ ಪ್ರಧಾನ ಸಂಪಾದಕರ ಮೇಲೆ ನೇರ ಆರೋಪ ಅಥವಾ ನೇರ ಸಹಭಾಗ ಇರದ ಕಾರಣ ಲೇಖಕ ಅಥವಾ ಪತ್ರಕರ್ತನ ಕೇವಲ ವಿಷಯಕ್ಕಾಗಿ ಹೊಣೆಗಾರರಾನ್ನಾಗಿಸಲು ಸಾಧ್ಯವಿಲ್ಲ’ ಎಂಬ ಮಹತ್ವದ ತೀರ್ಪನ್ನು ನೀಡಿತು. ೨೦೦೭ರಲ್ಲಿ ‘ಇಂಡಿಯಾ ಟುಡೇ’ಯಲ್ಲಿ ’ಮಿಷನ್ ಮಿಸ್‌ಕಂಡ್ಕ’ ಎಂಬ ಶೀರ್ಷಿಕೆಯಡಿ ಪ್ರಕಟವಾದ ಲೇಖನವೊಂದರಲ್ಲಿ ಭಾರತೀಯ ವಿದೇಶಾಂಗ ಸೇವೆಯ ಮೂವರು ಉನ್ನತ ಹುದ್ದೆಯ ಅಧಿಕಾರಿಗಳು ಬ್ರಿಟನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಅವರಲ್ಲಿ ಒಬ್ಬರು ಆಗಿನ ಸಂಪಾದಕ ಅರುಣ್ ಪುರಿ ಮತ್ತು ಸಂಬಂಧಪಟ್ಟ ಪತ್ರಕರ್ತನ ವಿರುದ್ಧ ಪ್ರಚೋದನೆಯ ಪ್ರಕರಣವನ್ನು ದಾಖಲಿಸಿದ್ದರು.

ಈ ಬಗ್ಗೆ ನಡೆದ ವಿಚಾರಣೆಯಲ್ಲಿ ಸರ್ವೋಚ್ಚ ನ್ಯಾಯಾಲಯವು, ಆರೋಪಗಳು ಬಲವಾಗಿದ್ದರೆ ಮತ್ತು ನೇರವಾಗಿದ್ದರೆ ಮುಖ್ಯ ಸಂಪಾದಕರಿಗೆ ಯಾವುದೇ ವಿನಾಯಿತಿ ನೀಡಬಾರದು ಎಂದು ಹೇಳಿದೆ. ಅಂತೆಯೇ, ಸಂಪಾದಕರ ವಿರುದ್ಧ ಯಾವುದೇ ನೇರ ಆರೋಪಗಳಿಲ್ಲದಿದ್ದರೆ ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು.