‘ಮೋರಬಿ ಸೇತುವೆ ಕುಸಿಯುವುದು ಇದು ಭಗವಂತನ ಇಚ್ಛೆ ಆಗಿತ್ತು !’ (ಅಂತೆ)

ಆರೋಪಿಯಿಂದ ನ್ಯಾಯಾಲಯದಲ್ಲಿ ಹೇಳಿಕೆ

ಮೊರಬಿ (ಗುಜರಾತ) – ಗುಜರಾತ್‌ನ ಮೊರಬಿಯಲ್ಲಿ ಕುಸಿದ ತೂಗು ಸೇತುವೆಯ ನಿರ್ವಹಣೆಯ ಜವಾಬ್ದಾರಿಯು ಓರೆವಾ ಕಂಪನಿಯ ವ್ಯವಸ್ಥಾಪಕ ದೀಪಕ ಪಾರೇಖ ಇವರು ‘ಸೇತುವೆ ಕುಸಿಯುವುದು ಇದು ದೇವರ ಇಚ್ಛೆಯಾಗಿತ್ತು’, ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಈ ಸಮಯದಲ್ಲಿ ಸರಕಾರಿ ನ್ಯಾಯವಾದಿಗಳು ‘ಸೇತುವೆಯ ಕೇಬಲ್ಸ್ ಸವೆದುಹೋಗಿತ್ತು ಮತ್ತು ನವಿಕರಣದ ಸಮಯದಲ್ಲಿ ಅವುಗಳನ್ನು ಬದಲಾಯಿಸಲಾಗಿರಲಿಲ್ಲ’, ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು. ಮೊರಬಿ ಮತ್ತು ರಾಜಕೋಟ ಬಾರ್ ಅಸೋಸಿಯೇಷನ್ ಈ ಘಟನೆಯ ಹೊಣೆಗಾರರ ವಕೀಲಿ ಪತ್ರ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ.

೧. ಸೇತುವೆಯ ನಿರ್ವಹಣೆ ನಡೆಸುವುದಕ್ಕಾಗಿ ಮೋರಬಿ ಮಹಾನಗರ ಪಾಲಿಕೆ ಮತ್ತು ಅಜಂತಾ ಓರೆವಾ ಕಂಪನಿಯ ಹತ್ತಿರ ೧೫ ವರ್ಷಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮಾರ್ಚ್ ೨೦೨೨ ರಲ್ಲಿ ಈ ಒಪ್ಪಂದ ಮಾಡಲಾಗಿದೆ. ೨೦೩೭ ರವರೆಗೆ ಈ ಒಪ್ಪಂದದ ಅವಧಿ ಇದೆ. ಈ ಅಪಘಾತದ ಪ್ರಕರಣದಲ್ಲಿ ದೀಪಕ ಪಾರೇಖ, ದಿನೇಶ ದವೆ, ಮನಸುಖ ಟೋಪಿಯ, ಮಹಾದೇವ ಸೋಳಂಕಿ, ಪ್ರಕಾಶ ಪರಮಾರ, ದೇವಾಂಗ, ಅಲ್ಪೇಶ ಗೋಹಿಲ, ದಿಲೀಪ ಗೋಹಿಲ ಮತ್ತು ಮುಕೇಶ ಚೌಹಾನ ಇವರನ್ನು ಬಂಧಿಸಲಾಗಿದೆ.

೨. ಸೇತುವೆ ನವೀಕರಣದ ಹೆಸರಿನಲ್ಲಿ ಸೇತುವೆ ಮರದ ಮೆಟ್ಟಲ ಜಾಗದಲ್ಲಿ ಅಲ್ಯುಮಿನಿಯಂ ತಗಡಿನ ೪ ಪದರ ಅಳವಡಿಸಲಾಗಿತ್ತು. ಆದ್ದರಿಂದ ಸೇತುವೆಯ ತೂಕದ ಪ್ರಮಾಣ ಹೆಚ್ಚಾಗಿತ್ತು. ಹಳೆಯ ಕೇಬಲ್ಸ್‌ಗಳು ಈ ಭಾರ ತಡೆಯಲಾಗದೆ ಜನರ ಸಂಖ್ಯೆ ಹೆಚ್ಚುತಲೇ ಈ ಸೇತುವೆ ಕುಸಿಯಿತು. ಗುಜರಾತ ಪೋಲಿಸರು ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ ಪ್ರಸ್ತುತಪಡಿಸಿ ಈ ಮಾಹಿತಿ ನೀಡಿದರು.

೩. ಸರಕಾರಿ ನ್ಯಾಯವಾದಿ ಪಾಂಚಾಳ ಇವರು, ‘ಫಾರಿನ್ಸೆಕ್ಸ್ ಸೈನ್ಸ್ ಲ್ಯಾಬ್’ನ ಪರಿಶೀಲನೆಯಲ್ಲಿ, ಯಾವ ೪ ಕೇಬಲ್ಸ್‌ಗಳ ಮೇಲೆ ಸೇತುವೆ ನಿಂತಿತ್ತೋ, ಅದರ ಸರಿಪಡಿಸುವಿಕೆಯನ್ನು ೭ ತಿಂಗಳ ಕಾಲ ಬದಲಾಯಿಸಲಾಗಿರಲಿಲ್ಲ. ಯಾವ ಗುತ್ತಿಗೆದಾರನು ಅದನ್ನು ಸರಿಪಡಿಸಿಕೊಂಡರೋ ಅವರಲ್ಲಿ ತೂಗು ಸೇತುವೆಯ ತಂತ್ರಜ್ಞಾನ ಮತ್ತು ಸಂರಚನೆಯ ಗಟ್ಟಿತನದ ಬಗ್ಗೆ ಅವಶ್ಯಕವಾದ ಜ್ಞಾನ ಇರಲಿಲ್ಲ. ಆದ್ದರಿಂದ ಅವರು ಕೇವಲ ಸೇತುವೆಯ ಮೇಲಿನ ಅಲಂಕಾರದ ಕಡೆಗೆ ಗಮನಹರಿಸಿದ್ದರು. ಆದ್ದರಿಂದ ಸೇತುವೆ ಗಟ್ಟಿಯಾಗಿ ಕಾಣುತ್ತಿತ್ತು; ಆದರೆ ಅದು ಒಳಗಿನಿಂದ ಕಡಿಮೆ ಗುಣಮಟ್ಟದ್ದಾಗಿತ್ತು.

ಸಂಪಾದಕೀಯ ನಿಲುವು

ತನ್ನ ಬೇಜಾವಾಬ್ದಾರಿತನ ಮತ್ತು ನಿಷ್ಕಾಳಜಿತನದಿಂದ ಆಗಿರುವ ಅಪಘಾತದ ಘಟನೆ ದೇವರ ಮೇಲೆ ಹಾಕುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !