ನೇಪಾಳದಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ದಾಳಿ !

  • ೨೦ ಕ್ಕೂ ಹೆಚ್ಚು ಹಿಂದೂ ಮತ್ತು ಪೊಲೀಸರಿಗೆ ಗಾಯ !

  • ಹಿಂದೂಗಳ ವಿರುದ್ಧವೆ ದೂರು ದಾಖಲು

  • ಹಿಂದೂ ಸಾಮ್ರಾಟ ಸೇನೆಯ ಅಧ್ಯಕ್ಷನ ಹತ್ಯೆಗೆ ಸಂಚು !

ಗೋರಖಪುರ (ಉತ್ತರಪ್ರದೇಶ) – ನೇಪಾಳದಲ್ಲಿನ ಮಹೋತ್ತರಿ ಜಿಲ್ಲೆಯಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ದಾಳಿ ನಡೆದಿದೆ. ಇದರಲ್ಲಿ ೨೦ ಕ್ಕೂ ಹೆಚ್ಚಿನ ಹಿಂದೂಗಳು ಮತ್ತು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿಚಾರ್ಜ್ ಮತ್ತು ಆಶ್ರುವಾಯುವಿನ ಉಪಯೋಗ ಮಾಡಿದರು. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿ ಇದ್ದರೂ, ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವುದರಿಂದ ಸಂಚಾರ ನಿಷೇಧ ಜಾರಿಗೊಳಿಸಲಾಗಿದೆ. ಈ ಘಟನೆಯ ನಂತರ ಮಹೋತ್ತರಿ ಜಿಲ್ಲೆಯಲ್ಲಿನ ಅನೇಕ ಪ್ರದೇಶಗಳಲ್ಲಿನ ಧಾರ್ಮಿಕ ಮೆರವಣಿಗೆಯ ಮೇಲೆ ನಿಷೇಧ ಹೇರಲಾಗಿದೆ. (ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳುವ ಬದಲು ಹಿಂದೂಗಳ ಮೆರವಣಿಗೆಯ ಮೇಲೆ ಈ ರೀತಿ ನಿಷೇಧ ಹೇರುವುದು, ಇದು ನೇಪಾಳ ಇಸ್ಲಾಮಿ ದೇಶದತ್ತ ಸಾಗುತ್ತಿರುವುದು ಸೂಚಿಸುತ್ತದೆ, ಹೀಗೆ ಹೇಳಿದರೆ ತಪ್ಪಾಗಲಾರದು ! – ಸಂಪಾದಕರು)

೧. ನೇಪಾಳದಲ್ಲಿನ ಹಿಂದೂ ಸಾಮ್ರಾಟ ಸೇನೆ ಈ ಹಿಂದೂ ಸಂಘಟನೆಯ ಭಂಗಹಾ ನಗರಪಾಲಿಕೆ ಪರಿಸರದಲ್ಲಿ ದೇವಿಯ ವಿಸರ್ಜನೆ ಮೆರವಣಿಗೆ ನಡೆಸಲಾಗುತ್ತಿತ್ತು. ಈ ಮೆರವಣಿಗೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಿಂದ ಹೋಗುವಾಗ ಅಲ್ಲಿ ಬಾವುಟ ಹಾಕುವುದರ ಬಗ್ಗೆ ಮುಸಲ್ಮಾನರ ಜೊತೆಗೆ ವಿವಾದ ನಡೆದಿದೆ. ಅದರ ನಂತರ ಮುಸಲ್ಮಾನರು ಮನೆಯ ಮೇಲಿನ ಮಾಳಿಗೆಯಿಂದ ಕಲ್ಲುತೂರಾಟ ನಡೆಸಿದರು. (ಯಾವುದೇ ದೇಶದಲ್ಲಿ ಇದ್ದರೂ ಮತಾಂಧ ಮುಸಲ್ಮಾನರ ದಾಳಿಯ ಪದ್ಧತಿ ಒಂದೇ ರೀತಿಯದಾಗಿದೆ, ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ! ಇದು ಅವರಿಗೆ ಎಲ್ಲಿ ಕಲಿಸಲಾಗುತ್ತದೆ, ಇದನ್ನು ಪೊಲೀಸರು ಹುಡುಕಬೇಕು ! – ಸಂಪಾದಕರು)

೨. ಈ ದಾಳಿಯಲ್ಲಿ ಗಾಯಗೊಂಡಿರುವ ಹಿಂದೂ ಸಾಮ್ರಾಟ ಸೇನೇಯ ಅಧ್ಯಕ್ಷ ರಾಜೇಶ ಯಾದವ ಇವರು ಘಟನೆಯ ಬಗ್ಗೆ ಮಾಹಿತಿ ನೀಡುವಾಗ, ಪರರಿಯಾ ಈ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಮೆರವಣಿಗೆ ಹೋಗುತ್ತಲೇ ಅದರ ಮೇಲೆ ಕಲ್ಲು ತೂರಾಟ ನಡೆಯಿತು. ಕಲ್ಲು ತೋರಾಟ ಮಾಡುವವರು ಪುರುಷರ ಜೊತೆಗೆ ಮಹಿಳೆಯರು ಕೂಡ ಸಹಭಾಗಿಯಾಗಿದ್ದರು. ಇದರಲ್ಲಿ ೨೦ ಕ್ಕೂ ಹೆಚ್ಚಿನ ಹಿಂದೂಗಳಿಗೆ ತಲೆಗೆ ಪೆಟ್ಟು ಬಿದ್ದಿದೆ. ಈ ಮೊದಲು ಕೂಡ ಹಿಂದೂಗಳ ಮೆರವಣಿಗೆಯ ಮೇಲೆ ಈ ರೀತಿಯ ದಾಳಿ ನಡೆದಿದ್ದವು, ನಾವು ಅದನ್ನು ವಿರೋಧಿಸಿದ್ದೆವು, ಆದರೆ ಒಟ್ಟಾರೆ ಹಿಂದೂಗಳಿಂದ ನಮಗೆ ಯಾವುದೇ ಸಹಕಾರ ನೀಡಲಾಗುವುದಿಲ್ಲ. (ಇದು ಹಿಂದೂಗಳ ಸಂದರ್ಭದಲ್ಲಿ ಸಾರ್ವತ್ರಿಕ ಅನುಭವವಾಗಿದೆ. ಹೇಗೆ ಹಿಂದೂಗಳೇ ಹಿಂದೂ ಧರ್ಮದ ನಿಜವಾದ ವೈರಿಯಾಗಿದ್ದಾರೆ ! – ಸಂಪಾದಕರು) ಇನ್ನೊಂದು ಕಡೆ ನೇಪಾಳಿ ಪ್ರಸಾರ ಮಾಧ್ಯಮಗಳು ನೇಪಾಳಿ ನಾಯಕರು ಆದೇಶದ ಪ್ರಕಾರ ವರ್ತಿಸುತ್ತಾರೆ ಎಂದು ಹೇಳಿದರು.

೩. ಹಿಂದೂ ಸಾಮ್ರಾಟ ಸೇನೆಯ ಪದಾಧಿಕಾರಿ ಧೀರಜ ಮಂಡಲ ಇವರು, ‘ನಮ್ಮ ನಾಯಕರಾದ ರಾಜೇಶ ಯಾದವ ಇವರ ಹತ್ಯೆಯ ಸಂಚನ್ನು ಮುಸಲ್ಮಾನರು ರೂಪಿಸಿದ್ದರು. ದಾಳಿಯ ದಿನದಂದು ಸ್ಥಳೀಯರು ನಮಗೆ ಸಹಾಯ ಮಾಡದೆ ಇದ್ದರೆ, ಯಾದವ ಅವರ ಹತ್ಯೆ ನಡೆಯುತ್ತಿತ್ತು.’ ಈ ವಿಷಯದ ಬಗ್ಗೆ ಅವರು ಒಂದು ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಕಳುಹಿಸಿದ್ದಾರೆ. ಅದರಲ್ಲಿ ಇಸ್ಲಾಮಿ ಉಡುಗೆ ತೊಟ್ಟಿರುವ ಕೆಲವು ಜನರು ಚರ್ಚೆ ಮಾಡುವಾಗ ರಾಜೇಶ ಯಾದವ ಇವರ ಹೆಸರು ಹೇಳುವುದು ಕಾಣುತ್ತಿದೆ. ಇದರ ಜೊತೆಗೆ ಮಂಡಲ ಅವರು ಮೆರವಣಿಗೆಯ ಮೇಲೆ ದಾಳಿಯ ವಿಡಿಯೋ ಕೂಡ ಕಳುಹಿಸಿದ್ದಾರೆ. ಇದರಲ್ಲಿ ಮುಸಲ್ಮಾನರು ಲಾಠಿಗಳು ಹಿಡಿದಿರುವುದು ಮತ್ತು ಹಸಿರು ಬಾವುಟ ಕೈಯಲ್ಲಿ ಹಿಡಿದು ಘೋಷಣೆ ಕೂಗುತ್ತಿರುವುದು ಕಾಣುತ್ತಿದೆ.

೪. ಧೀರಜ ಮಂಡಲ ಇವರ ಹೇಳಿಕೆಯ ಪ್ರಕಾರ ಮಹೋತ್ತರಿ ಜಿಲ್ಲೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಶೇಕಡ ೧೫ ರಷ್ಟು ಇದೆ. ಸರಕಾರ ಪ್ರತಿಯೊಂದು ಪ್ರಕರಣದಲ್ಲಿ ಮುಸಲ್ಮಾನರದ್ದೇ ಮಾತು ಕೇಳುತ್ತದೆ. ಹಿಂದೂಗಳ ಮಾತು ಕೇಳುವುದಿಲ್ಲ.

೫. ಹಿಂದೂ ಸಾಮ್ರಾಟ ಸೇನೆಯ ಮಹಿಳಾ ಪದಾಧಿಕಾರಿ ಮಂಜು ಮಂಡಲ ಇವರು, ನಮ್ಮ ಮೇಲೆ ದಾಳಿ ನಡೆದ ನಂತರ ನಮ್ಮ ಜನರ ವಿರುದ್ಧ (ಹಿಂದೂಗಳ ವಿರುದ್ಧ) ದೂರು ದಾಖಲಿಸಲಾಗಿದೆ. ರಾಜೇಶ ಯಾದವ ಇವರ ಬಂಧನದ ವಾರಂಟ್ ತೆಗೆಯಲಾಗಿದೆ. ಸರಕಾರ ಏಕ ಪಕ್ಷಿಯವಾಗಿ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು.

ಸಂಪಾದಕೀಯ ನಿಲುವು

ಇಲ್ಲಿಯವರೆಗೆ ನೇಪಾಳದಲ್ಲಿ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ ಮಾಡಿರುವ ಘಟನೆ ಕೇಳಿರಲಿಲ್ಲ, ಈಗ ಅದು ನಡೆದಿದೆ. ಇದು ನೇಪಾಳದಲ್ಲಿನ ಹಿಂದೂಗಳಿಗಾಗಿ ಅಪಾಯದ ಗಂಟೆಯಾಗಿದೆ, ಇದು ಅಲ್ಲಿಯ ಹಿಂದೂಗಳು ಅರ್ಥಮಾಡಿಕೊಳ್ಳಬೇಕು !

ಭಾರತದಲ್ಲಿನ ಹಿಂದೂ ಸಂಘಟನೆಗಳು ನೇಪಾಳದಲ್ಲಿನ ಹಿಂದೂ ಸಂಘಟನೆಗಳಿಗೆ ಈ ವಿಷಯವಾಗಿ ಸಹಾಯ ಮಾಡಬೇಕು !