ಎಲಾನ್ ಮಸ್ಕ್ ಇವರಿಂದ ಈಗ ಟ್ವಿಟರ್‌ನ ಆಡಳಿತ ಮಂಡಳಿಯ ವಿಸರ್ಜನೆ !

ಖ್ಯಾತ ಕೈಗಾರಿಕೋದ್ಯಮಿ ಎಲಾನ್ ಮಸ್ಕ್

ನವ ದೆಹಲಿ : ಖ್ಯಾತ ಕೈಗಾರಿಕೋದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟರ್‌ನ ಮಾಲೀಕತ್ವವನ್ನು ಪಡೆದ ನಂತರ ಈಗ ಟ್ವಿಟರ್‌ನ ಆಡಳಿತ ಮಂಡಳಿಯನ್ನು ವಿಸರ್ಜಿಸಿದ್ದಾರೆ. ಇಂದಿನಿಂದ, ಅವರು ಈ ಮಂಡಳಿಯ ಜವಾಬ್ದಾರಿಯನ್ನು ತಾವೊಬ್ಬರೇ ನಿರ್ವಹಿಸುತ್ತಾರೆ.

ಈ ಹಿಂದೆ ಮಸ್ಕ್ ಅವರು ಟ್ವಿಟರ್ ಮುಖ್ಯ ಕಾರ್ಯಾಧಿಕಾರಿ ಪರಾಗ್ ಅಗ್ರವಾಲ್ ಮತ್ತು ಇತರ ಅಧಿಕಾರಿ ವಿಜಯಾ ಗಡ್ಡೆ ಮತ್ತು ನೆಡ್ ಸೆಗಲ್ ಅವರನ್ನು ತೆಗೆದುಹಾಕಿದ್ದರು. ಈಗ ಅವರು ಕಾಲುಭಾಗ ಅಂದರೆ ೨ ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಿದ್ದಾರೆ ಎಂದು ವರದಿಯಾಗಿದೆ.