ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ಇಲ್ಲಿಯ ಅಲ್ಪಸಂಖ್ಯಾತ ಶರಣಾರ್ಥಿಗಳಿಗೆ ೧೯೫೫ ರ ಕಾನೂನಿನ ಪ್ರಕಾರ ಭಾರತೀಯ ನಾಗರಿಕತ್ವ ದೊರೆಯಲಿದೆ !

ನವದೆಹಲಿ – ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ಇಲ್ಲಿಯ ಶರಣಾರ್ಥಿ ಎಂದು ಬಂದಿರುವ ಹಿಂದೂ, ಸಿಖ್ಖ್ , ಬೌದ್ಧ, ಜೈನ್, ಪಾರಸಿ ಮತ್ತು ಕ್ರೈಸ್ತ ಇವರಿಗೆ ೧೯೫೫ ರ ನಾಗರಿಕತ್ವ ಕಾನುನಿನ ಪ್ರಕಾರ ಭಾರತೀಯ ನಾಗರಿಕತ್ವ ನೀಡಲು ಕೇಂದ್ರ ಸರಕಾರವು ನಿರ್ಣಯ ತೆಗೆದುಕೊಂಡಿದೆ. ಪ್ರಸ್ತುತ ಈ ನಾಗರಿಕರು ಗುಜರಾತಿನ ಆಣಂದ ಮತ್ತು ಮೇಹಸಣ ಈ ೨ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ನಾಗರಿಕತ್ವ ಸುಧಾರಣಾ ಕಾನೂನು, ೨೦೧೯ ಬದಲು ಈ ಎಲ್ಲರಿಗೂ ೧೯೫೫ ರ ನಾಗರಿಕತ್ವ ಕಾನೂನಿನ ಪ್ರಕಾರ ನಾಗರಿಕತ್ವ ನೀಡುವ ನಿರ್ಣಯ ಬಹಳ ಮಹತ್ವದ್ದಾಗಿದೆ. ೨೦೧೯ ರಲ್ಲಿನ ಸುಧಾರಿತ ನಾಗರಿಕತ್ವ ಕಾನೂನಿನ ಅಂತರ್ಗತ ಅಲ್ಪಸಂಖ್ಯಾತರಿಗೆ ನಾಗರಿಕತ್ವ ನೀಡುವ ವ್ಯವಸ್ಥೆ ಇದೆ ಆದರೆ ಈ ಕಾನೂನಿನ ನಿಯಮ ಸರಕಾರ ಇನ್ನು ಸಿದ್ಧಗೊಳಿಸಿಲ್ಲ. ಆದ್ದರಿಂದ ಇದರ ಅಂತರ್ಗತ ಯಾರಿಗೂ ಕೂಡ ನಾಗರಿಕತ್ವ ನೀಡಲು ಸಾಧ್ಯವಿಲ್ಲ.

ಈ ಅಲ್ಪಸಂಖ್ಯಾತರಿಗೆ ನಾಗರಿಕತ್ವಕ್ಕಾಗಿ ಆನ್ಲೈನ ಅರ್ಜಿ ತುಂಬಿಸಬೇಕಾಗುತ್ತದೆ. ಅದರ ನಂತರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಅರ್ಜಿಯ ಪರಿಶೀಲನೆ ನಡೆಸಲಾಗುವುದು. ಪರಿಶೀಲನೆಯ ಪ್ರಕ್ರಿಯೆ ಪೂರ್ಣವಾದನಂತರ ಯಾವ ಅರ್ಜಿಗಳು ಯೋಗ್ಯವಾಗಿರುವುದು ಅವರಿಗೆ ಜಿಲ್ದಾಧಿಕಾರಿ ನೋಂದಣಿ ಮತ್ತು ನಾಗರಿಕತ್ವ ಪ್ರಮಾಣ ಪತ್ರ ನೀಡುವರು.