ಭಾರತೀಯ ದಂಡ ಸಂಹಿತೆ ಮತ್ತು ‘ಪಾಕ್ಸೋ’ ಕಾನೂನು ‘ಮುಸ್ಲಿಂ ಪರ್ಸನಲ್ ಲಾ’ ಕ್ಕಿಂತ ಮೇಲ್ದರ್ಜೆಯದ್ದಾಗಿದೆ – ಕರ್ನಾಟಕ ಉಚ್ಚ ನ್ಯಾಯಾಲಯ

ಬೆಂಗಳೂರು – ‘ಪಾಸ್ಕೋ’ ಕಾನೂನು ಮತ್ತು ಭಾರತೀಯ ದಂಡ ಸಂಹಿತೆ ಈ ಎರಡೂ ‘ಮುಸ್ಲಿಂ ಪರ್ಸನಲ್ ಲಾ’ ಕ್ಕಿಂತ ಮೇಲ್ದರ್ಜೆಯದ್ದಾಗಿದೆ, ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತು. ಎರಡು ಬೇರೆ ಬೇರೆ ಪ್ರಕರಣದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಹೇಳಿತು. ೧೫ ವರ್ಷದ ವಯಸ್ಸಿನಿಂದ ಪ್ರೌಢಾವಸ್ಥೆಯು ಪ್ರಾರಂಭವಾಗುತ್ತದೆ ಆ ಸಮಯದಲ್ಲಿ ಮಾಡಿಕೊಂಡಿರುವ ವಿವಾಹ, ‘ಬಾಲ್ಯ ವಿವಾಹ ನಿಷೇಧ ಕಾನೂನು’ ಜಾರಿ ಆಗುವುದಿಲ್ಲ, ಎಂದು ಮುಸಲ್ಮಾನ ಅರ್ಜಿದಾರರ ಹೇಳಿಕೆಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.

೨೭ ವರ್ಷದ ಯುವಕನ ಪತ್ನಿಗೆ ಹೆರಿಗೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದ ನಂತರ ಆಕೆಯ ವಯಸ್ಸು ೧೭ ಆಗಿರುವುದು ತಿಳಿದು ಬಂದಿತು. ಆಗ ಆ ಯುವಕನ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾನೂನು ಮತ್ತು ಪಾಕ್ಸೋ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ಒಬ್ಬ ೧೯ ವರ್ಷದ ಯುವಕನು ೧೬ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ್ದನು. ಎರಡು ಪ್ರಕರಣದಲ್ಲಿನ ಆರೋಪಿ ಮತ್ತು ಸಂತ್ರಸ್ತತೆಯು ಮುಸಲ್ಮಾನರೇ ಆಗಿದ್ದರು. ಎರಡು ಪ್ರಕರಣದ ಆರೋಪಿಯ ನ್ಯಾಯವಾದಿಗಳಿಂದ ‘ಮುಸ್ಲಿಂ ಪರ್ಸನಲ್ ಲಾ’ದ ಆಧಾರದಲ್ಲಿ ಹುಡುಗಿಯ ಪ್ರೌಢಾವಸ್ಥೆಯ ವಯಸ್ಸು ೧೫ ವರ್ಷದಿಂದ ಪ್ರಾರಂಭವಾಗುವುದರಿಂದ ಇದು ಅಪರಾಧವಾಗುವುದಿಲ್ಲ’, ಎಂದು ಹೇಳುವ ಪ್ರಯತ್ನ ಮಾಡಲಾಯಿತು. ಆಗ ನ್ಯಾಯಾಲಯದಿಂದ ಮೇಲಿನ ಅಭಿಪ್ರಾಯ ಮಂಡಿಸುತ್ತಾ ತೀರ್ಪು ನೀಡಿದೆ.