ಸನಾತನದ ಮೊದಲ ಬಾಲಸಂತರಾದ ಪೂ. ಭಾರ್ಗವರಾಮ ಪ್ರಭು (೫ ವರ್ಷ) ಇವರಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಬಗ್ಗೆ ಇರುವ ಭಾವ !

ಮಂಗಳೂರಿನ ಬಾಲಸಂತರಾದ ಪೂ. ಭಾರ್ಗವರಾಮ ಪ್ರಭು ಇವರು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಕೆಲವು ದಿನಗಳಿಗಾಗಿ ಬಂದಿದ್ದರು. ಆಗ ಅವರು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರನ್ನು ಭೇಟಿಯಾದರು. ಭೇಟಿಯ ನಂತರ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರ ಬಗ್ಗೆ ಅವರು ತನ್ನ ತಾಯಿಯವರೊಂದಿಗೆ ನಡೆಸಿದ ಸಂವಾದವನ್ನು ಇಲ್ಲಿ ನೀಡಲಾಗಿದೆ.

 

ಪೂ. ಭಾರ್ಗವರಾಮ ಇವರನ್ನು ವಾತ್ಸಲ್ಯದಿಂದ ಹತ್ತಿರ ಕರೆಯುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

೧. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರು ಎಲ್ಲರ ತಾಯಿಯಾಗಿದ್ದು ಎಲ್ಲರನ್ನೂ ಬಹಳ ಪ್ರೀತಿಸುತ್ತಾರೆ ಎಂದು ಪೂ. ಭಾರ್ಗವರಾಮ ಪ್ರಭು ಇವರು ಹೇಳುವುದು

ಪೂ. ಭಾರ್ಗವರಾಮ : ಸಾಧಕರು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಿಗೆ ‘ಸದ್ಗುರು ಮಾತಾ’ ಎಂದು ಏಕೆ ಕರೆಯುತ್ತಾರೆ ? (ಸಾಪ್ತಾಹಿಕ ಭಕ್ತಿಸತ್ಸಂಗದಲ್ಲಿ ಸಾಧಕರು ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರನ್ನು ‘ಸದ್ಗುರು ಮಾತಾ’ ಎಂದು ಕರೆಯುತ್ತಿದ್ದರು.)

ಸೌ. ಭವಾನಿ ಪ್ರಭು : ಅವರು ಗುರು ಆಗಿರುವುದರಿಂದ ಸಾಧಕರು ಅವರನ್ನು ‘ಗುರು ಮಾತಾ’ ಎಂದು ಕರೆಯುತ್ತಾರೆ.

ಪೂ. ಭಾರ್ಗವರಾಮ : ಅವರು ಎಲ್ಲರ ಮಾತೆಯಾಗಿರುವುದರಿಂದಲೇ ಅಲ್ಲವೇ ? ಅವರು ನನ್ನ ಮಾತೆಯೂ ಆಗಿದ್ದಾರೆ ಮತ್ತು ಅವರು ನಿಮ್ಮ ಮಾತೆಯೂ ಆಗಿದ್ದಾರೆ. ಅವರು ನಮ್ಮೆಲ್ಲರ ಮಾತೆಯಾಗಿದ್ದಾರೆ. ಆದುದರಿಂದ ಅವರು ಎಲ್ಲರನ್ನೂ ಬಹಳ ಪ್ರೀತಿಸುತ್ತಾರೆ.

೨. ‘ಪೂ. ಭಾರ್ಗವರಾಮ ಇವರು ಇಬ್ಬರು ದೇವಿಯರಲ್ಲಿ ಒಬ್ಬರು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಆಗಿದ್ದು ಎರಡನೇಯವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಆಗಿದ್ದಾರೆ’ ಎಂದು ಹೇಳುವುದು

ಗೋವಾದ ಜಾಂಬವಲಿಯ ಶ್ರೀ ದಾಮೋದರ ಸಂಸ್ಥಾನದಲ್ಲಿ ದೇವಿಯ ಎರಡು ಮೂರ್ತಿಗಳಿವೆ. ಆ ಬಗ್ಗೆ ಮಾತನಾಡುವಾಗ ಪೂ. ಭಾರ್ಗವರಾಮ ಇವರು “ಈ ಇಬ್ಬರೂ ದೇವಿಯರಲ್ಲಿ ಒಬ್ಬರು ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಆಗಿದ್ದಾರೆ ಮತ್ತು ಇನ್ನೊಬ್ಬರು ಶ್ರೀಸತ್‌ಶಕ್ತಿ (ಸೌ.) ಗಾಡಗೀಳ ಆಗಿದ್ದಾರೆ” ಎಂದು ಹೇಳಿದರು. (ಜಾಂಬವಲಿಯಲ್ಲಿನ ದೇವಿಯ ದರ್ಶನಕ್ಕೆ ಶ್ರೀಸತ್‌ಶಕ್ತಿ (ಸೌ,) ಸಿಂಗಬಾಳ ಇವರು ವರ್ಷದಲ್ಲಿ ಒಂದು ಬಾರಿಯಾದರೂ ಬರುತ್ತಾರೆ. ಇದು ನನಗೆ ಗೊತ್ತಾದಾಗ ‘ಪೂ. ಭಾರ್ಗವರಾಮ ಇವರು ಆ ದೇವಿಯ ತತ್ತ್ವವನ್ನು ಅನುಭವಿಸುತ್ತಿದ್ದಾರೆ’, ಎಂದು ನನಗನಿಸಿತು.)

೩. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರನ್ನು ನೋಡಿದಾಗ ಪೂ. ಭಾರ್ಗವರಾಮ ಇವರಿಗೆ ಭಾವ ಜಾಗೃತಿಯಾಗುವುದು ಮತ್ತು ಅವರು ಸ್ಪರ್ಶಿಸಿದಾಗ ಶೀತಲತೆಯ ಅರಿವಾಗಿ ಪೂ. ಭಾರ್ಗವರಾಮ ಇವರ ಕಣ್ಣುಗಳು ತಾವಾಗಿಯೇ ಮುಚ್ಚಲ್ಪಡುವುದು

ಸೌ. ಭವಾನಿ ಪ್ರಭು : ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರನ್ನು ನೋಡಿ ನಿಮಗೇನು ಅರಿವಾಯಿತು ?

ಪೂ. ಭಾರ್ಗವರಾಮ : ನನಗೆ ಭಾವಜಾಗೃತಿಯಾಗುತ್ತದೆ.

ಸೌ. ಭವಾನಿ ಪ್ರಭು : ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ನಿಮ್ಮನ್ನು ಸ್ಪರ್ಶಿಸುತ್ತಾರೆ. ಆಗ ನಿಮಗೇನು ಅನಿಸುತ್ತದೆ ?

ಪೂ. ಭಾರ್ಗವರಾಮ : ನನಗೆ ಶೀತಲತೆಯ ಅರಿವಾಗುತ್ತದೆ ಮತ್ತು ಅವರು ನನ್ನ ಬೆನ್ನನ್ನು ಸವರುವಾಗ ನನ್ನ ಕಣ್ಣುಗಳು ತಾವಾಗಿಯೇ ಮುಚ್ಚಿಕೊಳ್ಳುತ್ತವೆ.

೪. ಪೂ. ಭಾರ್ಗವರಾಮ ಇವರು ಭಕ್ತಿಸತ್ಸಂಗದ ಮಾಧ್ಯಮದಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಧ್ವನಿಯನ್ನು ಕೇಳಿದ ನಂತರ ‘ಅದು ಬಹಳ ಮಧುರವಾಗಿದ್ದು ಅದನ್ನು ಕೇಳುತ್ತಲೇ ಇರಬೇಕು’, ಎಂದೆನಿಸುವ ಬಗ್ಗೆ ಹೇಳುವುದು

ಪೂ. ಭಾರ್ಗವರಾಮ ಇವರು, “ಭಕ್ತಿಸತ್ಸಂಗದಲ್ಲಿ ಶ್ರೀಸತ್ ಶಕ್ತಿ (ಸೌ.) ಸಿಂಗಬಾಳ ಇವರ ಧ್ವನಿಯನ್ನು ಕೇಳಿ ಎಷ್ಟು ಒಳ್ಳೆಯದೆನಿಸುತ್ತದೆ ಅಲ್ಲವೇ ! ‘ಅವರ ಧ್ವನಿಯನ್ನು ಕೇಳುತ್ತಲೇ ಇರಬೇಕು’ ಎಂದು ನನಗೆ ಅನಿಸುತ್ತದೆ. ಅವರ ಧ್ವನಿ ಎಷ್ಟು ಮಧುರವಿದೆಯಲ್ಲ” ಎಂದು ಹೇಳಿದರು.

೫. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಪೂ. ಭಾರ್ಗವರಾಮರ ಕೈ ಹಿಡಿದು ಮೆಟ್ಟಿಲುಗಳನ್ನು ಹತ್ತುತ್ತಿರುವಾಗ ಅವರಿಗೆ ಬಹಳ ಮೇಲೆ ಮೇಲೆ ಹೋಗುತ್ತಿರುವ ಅನುಭವವಾಗುವುದು

ಒಂದು ಬಾರಿ ಮೆಟ್ಟಿಲುಗಳನ್ನು ಹತ್ತುವಾಗ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಪೂ. ಭಾರ್ಗವರಾಮರ ಕೈಯನ್ನು ಹಿಡಿದು ಅವರನ್ನು ಕರೆದುಕೊಂಡು ಹೋದರು. ಆಗ ನನ್ನ ಮನಸ್ಸಿನಲ್ಲಿ, ನೀವೇ ಪೂ. ಭಾರ್ಗವರಾಮರನ್ನು ಸಾಧನೆಯಲ್ಲಿಯೂ ಇದೇ ರೀತಿ ಕೈ ಹಿಡಿದು ಬಹಳ ಮುಂದೆ ಕರೆದೊಯ್ಯಿರಿ ಎಂದು ಪ್ರಾರ್ಥನೆಯಾಯಿತು. ಸ್ವಲ್ಪ ಸಮಯದ ನಂತರ ಪೂ. ಭಾರ್ಗವರಾಮರು ಹಿಂದಿರುಗಿದಾಗ ನಾನು ಅವರನ್ನು, ನಿಮಗೇನು ಅನಿಸಿತು ಎಂದು ಕೇಳಿದೆನು. ಆಗ ಪೂ. ಭಾರ್ಗವರಾಮರು, “ಅವರು ನನ್ನನ್ನು ಬಹಳ ಮೇಲೆ ಎತ್ತರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಸಂಪೂರ್ಣ ಆಶ್ರಮದಲ್ಲಿ ತಿರುಗಾಡುವಾಗ ನಾನು ಬಹಳ ಎತ್ತರ ಎತ್ತರಕ್ಕೆ ಹೋಗುತ್ತಿದ್ದೇನೆ ಎಂದು ನನಗೆ ಅರಿವಾಯಿತು”, ಎಂದರು.

೬. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಎಲ್ಲ ಸಾಧಕರಿಗೆ ಚೆನ್ನಾಗಿ ಹೇಳುತ್ತಿರುವುದರಿಂದ ಬಹಳಷ್ಟು ಸಂತರು ಸಿದ್ಧರಾಗುವರಲ್ಲವೇ ಎಂದು ಪೂ. ಭಾರ್ಗವರಾಮ ಇವರು ತಾಯಿಯನ್ನು ಕೇಳುವುದು

ಒಂದು ಸಲ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ಪೂ. ಭಾರ್ಗವರಾಮ ಇವರಿಗೆ ಒಂದು ಕಥೆಯನ್ನು ಹೇಳಿದರು. ಅದನ್ನು ಕೇಳಿ ಕೋಣೆಯ ಹೊರಗೆ ಬಂದ ನಂತರ ಪೂ. ಭಾರ್ಗವ ರಾಮ ಇವರು, “ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ನನಗೆ ಎಷ್ಟು ಚೆನ್ನಾಗಿ ಹೇಳಿದರು ! ಅವರು ಎಲ್ಲ ಸಾಧಕರಿಗೆ ಇದೇ ರೀತಿ ಕಲಿಸುತ್ತಾರಲ್ಲವೇ ? ಆದುದರಿಂದ ಬಹಳ ಸಂತರು ಸಿದ್ಧರಾಗುತ್ತಾರಲ್ಲವೇ !” ಎಂದು ಹೇಳಿದರು.

೭. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಬ್ಬರೂ ದೇವಿಯರಾಗಿರುವುದರಿಂದ ಸಮಾನವಾಗಿ ಇಷ್ಟವಾಗುತ್ತಾರೆಂದು ಪೂ. ಭಾರ್ಗವರಾಮ ಇವರು ಹೇಳುವುದು

ಓರ್ವ ಸಾಧಕಿ : ಪೂ. ಭಾರ್ಗವರಾಮ, ‘ನಿಮಗೆ ಎಲ್ಲಕ್ಕಿಂತ ಹೆಚ್ಚು ಯಾರು ಇಷ್ಟವಾಗುತ್ತಾರೆ ?’ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರೋ ಅಥವಾ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರೋ ?

ಪೂ. ಭಾರ್ಗವರಾಮ : ಅವರಿಬ್ಬರೂ ದೇವಿಯರಿದ್ದಾರೆ. ಆದುದರಿಂದ ನನಗೆ ಅವರಿಬ್ಬರೂ ಸಮಾನವಾಗಿ ಇಷ್ಟವಾಗುತ್ತಾರೆ.

ಪೂ. ಭಾರ್ಗವರಾಮರಿಗೆ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಬಗೆಗಿನ ಭಾವವನ್ನು ನೋಡಿ ನನಗೆ ಬಹಳ ಕೃತಜ್ಞತೆ ಎನಿಸಿತು. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರ ಸಹವಾಸದಿಂದ ನಮಗೆ ಲಾಭವಾಗುತ್ತದೆ. ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’

– ಸೌ. ಭವಾನಿ ಪ್ರಭು (ಪೂ. ಭಾರ್ಗವರಾಮ ಇವರ ತಾಯಿ), ಮಂಗಳೂರು. (೨೪.೯.೨೦೨೨)