ಜೈನ ಮಂದಿರದಲ್ಲಿ ಕಳ್ಳತನ ಮಾಡಿದ್ದ ಕಳ್ಳನಿಂದ ಕ್ಷಮಾಚನೆಯ ಪತ್ರ ಬರೆದು ಕಳವು ಮಾಡಿದ್ದ ವಸ್ತುಗಳು ಹಿಂತಿರುಗಿಸಿದನು !

ಕಳವು ಮಾಡಿದ ನಂತರ ಕಳ್ಳ ತೊಂದರೆ ಅನುಭವಿಸಿದ !

ಬಾಲಾಘಾಟ (ಮಧ್ಯಪ್ರದೇಶ) – ಇಲ್ಲಿಯ ದಿಗಂಬರ ಜೈನ ಮಂದಿರದಲ್ಲಿ ಅಕ್ಟೋಬರ್ ೨೪ ರಂದು ಬೆಳ್ಳಿ ಮತ್ತು ಹಿತ್ತಾಳೆಯ ಅನೇಕ ವಸ್ತುಗಳು ಕಳುವಾಗಿದ್ದವು. ಈ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರ ನೀಡಲಾಗಿತ್ತು.

೪ ದಿನಗಳ ನಂತರ ದೇವಸ್ಥಾನದಲ್ಲಿ ಕಳುವಾಗಿರುವ ವಸ್ತುಗಳು ಒಂದು ಹಳ್ಳದಲ್ಲಿ ದೊರೆತವು. ಅಲ್ಲಿ ಒಂದು ಚೀಟಿಯು ಪತ್ತೆಯಾಯಿತು. ಅದರಲ್ಲಿ ಕಳ್ಳನು, ‘ನಾನು ಮಾಡಿರುವ ಕೃತ್ಯದಿಂದ ನನಗೆ ಬಹಳ ತೊಂದರೆ ಸಹಿಸಬೇಕಾಯಿತು. ಆದ್ದರಿಂದ ಈ ವಸ್ತುಗಳು ನಾನು ಮರಳಿ ಕೊಡುತ್ತಿದ್ದೇನೆ. ಈ ವಸ್ತುಗಳು ಯಾರಿಗೆ ಸಿಗುವುದೋ ದಯವಿಟ್ಟು ಅವರು ಜೈನಮಂದಿರಕ್ಕೆ ಹಿಂತಿರುಗಿಸಬೇಕು. ನನ್ನಿಂದ ತಪ್ಪಾಗಿದೆ, ಕ್ಷಮಿಸಿರಿ’, ಎಂದು ಬರೆಯಲಾಗಿತ್ತು.