ಖಂಡವಾ (ಮಧ್ಯಪ್ರದೇಶ) ಇಲ್ಲಿಯ ಮದರಸದಲ್ಲಿನ ಮೌಲ್ವಿಯಿಂದ ೬ ವರ್ಷದ ಹುಡುಗಿಯ ಲೈಂಗಿಕ ಶೋಷಣೆ

(ಮೌಲ್ವಿ ಎಂದರೆ ಇಸ್ಲಾಂ ಅಭ್ಯಾಸಕ)

ಖಂಡವಾ (ಮಧ್ಯಪ್ರದೇಶ) – ಇಲ್ಲಿಯ ಮದರಸಾದಲ್ಲಿನ ಓರ್ವ ೬ ವರ್ಷದ ಹುಡುಗಿಯ ಲೈಂಗಿಕ ಶೋಷಣೆಯ ಆರೋಪದ ಅಡಿಯಲ್ಲಿ ಮೌಲ್ವಿ ಅಬ್ದುಲ್ ಸಮದನನ್ನು ಬಂಧಿಸಿದ್ದಾರೆ. ಸ್ಥಳಿಯ ವಾರ್ತೆಯಲ್ಲಿ ಪ್ರಸಾರವಾಗಿರುವ ಮಾಹಿತಿಯ ಪ್ರಕಾರ, ಇಲ್ಲಿಯ ಖಾನಶಾಹವಲಿ ಪ್ರದೇಶದಲ್ಲಿರುವ ಜಕರಿಯ ಮಸೀದಿಯ ಮೌಲ್ವಿ ಈ ಕೃತ್ಯ ನಡೆಸಿದ್ದಾನೆ. ಮೌಲ್ವಿಯ ವಿರುದ್ಧ ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

ಬದಾಯು (ಉತ್ತರಪ್ರದೇಶ) ಇಲ್ಲಿಯ ಮದರಸಾದಲ್ಲಿನ ವ್ಯವಸ್ಥಾಪಕನ ಜೊತೆಗೆ ೩ ಜನರಿಂದ ಶಿಕ್ಷಕಿಯ ಮೇಲೆ ಸಾಮೂಹಿಕ ಬಲತ್ಕಾರ

ಬದಾಯು (ಉತ್ತರಪ್ರದೇಶ) – ಇಲ್ಲಿಯ ಒಂದು ಮದರಸದಲ್ಲಿನ ಶಿಕ್ಷಕಿಯ ಮೇಲೆ ಮದರಸಾದ ವ್ಯವಸ್ಥಾಪಕ ರಶೀದ್ ಅಲಿ ಇವನ ಜೊತೆ ನಜರುಲ್ ಹಸನ್ ಮತ್ತು ಮುಜಾಹಿದ್ ಅಲಿಯಾಸ್ ಗುಡ್ದು ಇವರು ಸಾಮೂಹಿಕ ಬಲತ್ಕಾರ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಿಸಿಕೊಂಡಿದ್ದಾರೆ. ಈ ಘಟನೆ ಎಪ್ರಿಲ್ ೨೦೨೦ ರಲ್ಲಿ ನಡೆದಿದೆ. ಸಂತ್ರಸ್ತೆ ಶಿಕ್ಷಕಿ ಎರಡುವರೆ ವರ್ಷದ ನಂತರ ಈ ಪ್ರಕರಣದ ದೂರು ದಾಖಲಿಸಿದ್ದರಿಂದ ಪೊಲೀಸರು ಇದರ ಕಡೆಗೆ ದುರ್ಲಕ್ಷ ಮಾಡಿದರು; ಆದರೆ ಈ ವಿಷಯವಾಗಿ ಆಕೆ ನ್ಯಾಯಾಲಯದಲ್ಲಿ ನ್ಯಾಯ ಕೇಳಿದ ನಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಆಕೆ ಈ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಆಕೆಯ ಕುಟುಂಬದವರಿಗೆ ಕೊಲ್ಲಲಾಗುವುದು ಎಂದು ಆಕೆಗೆ ಬೆದರಿಕೆ ನೀಡಲಾಗಿತ್ತು.

ಸಂಪಾದಕೀಯ ನಿಲುವು

ಮದರಸದಲ್ಲಿ ದೇಶ ದ್ರೋಹಿ ಕೃತ್ಯಗಳು ನಡೆಯುತ್ತಿರುವುದು ಮೇಲಿಂದ ಮೇಲೆ ಬೆಳಕಿಗೆ ಬರುತ್ತಿದೆ. ಬಲಾತ್ಕಾರ, ಲೈಂಗಿಕ ಶೋಷಣೆ ಮುಂತಾದ ಅಪರಾಧಗಳ ವಾರ್ತೆ ಕೂಡ ಬರುತ್ತಿರುತ್ತದೆ. ಆದ್ದರಿಂದ ಇಂತಹ ಎಲ್ಲಾ ಮದರಸಾಗಳಿಗೆ ಕೇಂದ್ರ ಸರಕಾರದಿಂದ ಬೀಗ ಜಡಿಯಬೇಕು !