ಸಮಸ್ತಿಪುರ (ಬಿಹಾರ) ಇಲ್ಲಿಯ ಗ್ರಾಮಸ್ಥರಿಂದ ೩ ಕಳ್ಳರಿಗೆ ಥಳಿತ : ಓರ್ವ ಸಾವು

ಸಮಸ್ತಿಪುರ (ಬಿಹಾರ) – ಇಲ್ಲಿಯ ಧಮೌನ ಗ್ರಾಮದಲ್ಲಿ ೩ ಕಳ್ಳರನ್ನು ಗ್ರಾಮಸ್ಥರು ಹಿಡಿದು ಅಮಾನುಷವಾಗಿ ಥಳಸಿದ್ದಾರೆ. ಅವರಿಗೆ ನೀರಲ್ಲಿ ಮುಳುಗಿಸಿ ಥಳಿಸಲಾಯಿತು. ಇದರಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.

ಈ ಗ್ರಾಮದಲ್ಲಿ ಅಕ್ಟೋಬರ ೨೬ ರಂದು ಸಂಜೆ ೩ ಕಳ್ಳರು ಒಂದು ಸಂಸ್ಥೆಯ ಸಂಚಾಲಕರಿಗೆ ಬೆದರಿಕೆಯೊಡ್ಡಿ ಹಣ ಲೂಟಿ ಮಾಡುತ್ತಿದ್ದರು. ಸಂಚಾಲಕರು ಕಿರಿಚಿದಾಗ ಕಳ್ಳರು ಗುಂಡು ಹಾರಿಸುತ್ತ ಓಡಿ ಹೋದರು. ಗ್ರಾಮಸ್ಥರು ಇಟ್ಟಿಗೆ ಮತ್ತು ಕಲ್ಲನ್ನು ಎಸೆಯುತ್ತಾ ಅವರನ್ನು ಹಿಂಬಾಲಿಸಿದರು. ಕಳ್ಳರು ತಮ್ಮನ್ನು ಕಾಪಾಡಿಕೊಳ್ಳಲು ನೀರಿನಿಂದ ತುಂಬಿದ್ದ ಒಂದು ಗದ್ದೆಗೆ ಹೋದರು; ಆದರೆ ಜನ ಸಮೂಹವು ಅವರನ್ನು ಹಿಡಿದರು. ಆ ಸ್ಥಳದಲ್ಲಿ ಅವರನ್ನು ನೀರಲ್ಲಿ ಮುಳುಗಿಸಿ ಥಳಿಸಲಾಯಿತು. ಈ ಘಟನೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಕಳ್ಳರನ್ನು ಬಿಡುಗಡೆಗೊಳಿಸಿದರು. ಗಲಾಟೆಯಲ್ಲಿ ಗಾಯಗೊಂಡಿದ್ದ ಕಳ್ಳರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರಲ್ಲಿನ ಒಬ್ಬ ವಿಕಾಸ ಕುಮಾರ ಎಂಬವನು ಮರುದಿನ ಸಾವನ್ನಪ್ಪಿದನು. ಇನ್ನಿಬ್ಬರು ಪಿಂಕೇಶ ಮತ್ತು ರವಿ ಎಂದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.