ಸಪ್ತರ್ಷಿಗಳ ಆಜ್ಞೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ರಾಜಸ್ಥಾನದ ಅಮರಸರದ ಶ್ರೀ ಕಾಲಿಕಾಮಾತಾ ಮಂದಿರದಲ್ಲಿ ಪಡೆದ ದೇವರದರ್ಶನದ ವೃತ್ತಾಂತ !

‘ಮಾರ್ಚ್ ೨೦೨೦ ರಿಂದ ಇಡೀ ಭಾರತದಲ್ಲಿನ ಜನರು ಕೊರೋನಾ ಮಹಾಮಾರಿಯಿಂದ ತೊಂದರೆಗೀಡಾಗಿದ್ದರು. ೨೨.೩.೨೦೨೦ ರಿಂದ ಸಂಪೂರ್ಣ ಭಾರತದಲ್ಲಿ ಸಂಚಾರಸಾರಿಗೆ ನಿರ್ಬಂಧವಿತ್ತು. ಭಾರತ ಸರಕಾರವು ೧.೬.೨೦೨೦ ರಂದು ಸಂಚಾರಸಾರಿಗೆ ನಿರ್ಬಂಧವನ್ನು ಸ್ವಲ್ಪ ಸಡಿಲಗೊಳಿಸಿತ್ತು. ೩.೬.೨೦೨೦ ರಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ದೈವೀ ಪ್ರವಾಸ ಆರಂಭವಾಯಿತು. ೫.೭.೨೦೨೦ ರಂದು ನೆರವೇರಿದ ಗುರುಪೂರ್ಣಿಮೆಯ ನಂತರ ಸಪ್ತರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಕರ್ನಾಟಕದಲ್ಲಿನ ಕೆಲವು ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆಯಲು ಹೇಳಿದರು. ಅನಂತರ ಸಪ್ತರ್ಷಿಗಳು ದೆಹಲಿ ಮತ್ತು ರಾಜಸ್ಥಾನಕ್ಕೆ ಹೋಗಲು ಹೇಳಿದರು. ಶುಕ್ರವಾರ, ೨೪.೭.೨೦೨೦ ರಂದು ಸಪ್ತರ್ಷಿಗಳು ರಾಜಸ್ಥಾನದ ಅಮರಸರದಲ್ಲಿನ ಶ್ರೀ ಕಾಲಿಕಾಮಾತಾ ಮಂದಿರಕ್ಕೆ ಹೋಗಲು ಹೇಳಿದರು. ಅದರಂತೆ ಆ ದಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಶ್ರೀ ಕಾಲಿಕಾಮಾತಾ ಮಂದಿರಕ್ಕೆ ಹೋಗಿ ಸಾಧಕರಿಗಾಗಿ ಪ್ರಾರ್ಥನೆಯನ್ನು ಮಾಡಿದರು.

ಶ್ರೀ ಕಾಲಿಕಾಮಾತಾ ಮಂದಿರದಲ್ಲಿ ದರ್ಶನ ಪಡೆದ ನಂತರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು

 

ಶ್ರೀ. ವಿನಾಯಕ ಶಾನಭಾಗ

೧. ರಾಜಸ್ಥಾನದ ಅಮರಸರದಲ್ಲಿನ ಶ್ರೀ ಕಾಲಿಕಾ ಮಾತಾ ಮಂದಿರದ ಇತಿಹಾಸ

ರಾಜಸ್ಥಾನ ರಾಜ್ಯದ ಜಯಪುರ ಜಿಲ್ಲೆಯ ಅಮರಸರ ಗ್ರಾಮದ ಸಮೀಪ ಒಂದು ಸುಂದರ ಪರ್ವತವಿದೆ. ಈ ಪರ್ವತದ ಮೇಲೆ ಶ್ರೀ ಕಾಲಿಕಾದೇವಿಯ ಮಂದಿರವಿದೆ. ಇದು ದೇವಿಯ ೫೧ ಶಕ್ತಿ ಪೀಠಗಳಲ್ಲಿನ ಒಂದು ಶಕ್ತಿಪೀಠವಾಗಿದೆ. ಸತ್ಯಯುಗದಲ್ಲಿ ಆದಿಶಕ್ತಿಯು ಈ ಪರ್ವತದ ಮೇಲೆ ಶುಂಭ-ನಿಶುಂಭ ಎಂಬ ಇಬ್ಬರು ದೈತ್ಯರನ್ನು ವಧಿಸಿದ್ದಳು. ಇದೇ ಪರ್ವತದ ಮೇಲೆ ಕಾಕಭುಜಂಡ ಋಷಿಗಳು ತಪಶ್ಚರ್ಯವನ್ನು ಮಾಡಿದ್ದಾರೆ. ಈ ಪರ್ವತದ ೨-೩ ಕಿ.ಮೀ. ಪರಿಸರದಲ್ಲಿ ಒಂದೂ ಕಾಗೆ ಬರುವುದಿಲ್ಲ. ಹಿಂದಿನ ಕಾಲದಲ್ಲಿ ಈ ಎಲ್ಲ ಪರಿಸರ ವಿರಾಟ ನಗರದ ಒಂದು ಭಾಗವಾಗಿತ್ತು. ಪಾಂಡವರು ‘ಇಲ್ಲಿ ಬಂದು ತಪಶ್ಚರ್ಯ ಮಾಡಿದ್ದರು, ಎಂದು ಹೇಳಲಾಗುತ್ತದೆ. (ಕಾಕಭುಜಂಡ ಋಷಿಗಳ ಶರೀರ ಕಾಗೆಯ ಹಾಗಿದೆ. ಪ್ರಳಯವಾದ ನಂತರ ಸೃಷ್ಟಿ ನಾಶವಾಗುತ್ತದೆ. ಕಾಕಭುಜಂಡ ಋಷಿಗಳು ಕಾಗೆಯ ರೂಪದಲ್ಲಿದ್ದುದರಿಂದ ಅವರಿಗೆ ‘ಪ್ರಳಯವನ್ನು ನೋಡಲು ಸಾಧ್ಯವಾಗುತ್ತದೆ. ಅವರು ಪ್ರಳಯವನ್ನು ನೋಡಬಲ್ಲ ಏಕೈಕ ಋಷಿಗಳಾಗಿದ್ದಾರೆ, ಎಂದು ಹೇಳಲಾಗುತ್ತದೆ. – ಸಂಕಲನಕಾರರು)

೨. ಕಾಲಿಕಾಮಾತಾ ಮಂದಿರದಲ್ಲಿ ದರ್ಶನ ಪಡೆದ ನಂತರ ಘಟಿಸಿದ ವೈಶಿಷ್ಟ್ಯಪೂರ್ಣ ಘಟನೆಗಳು !

೨ ಅ. ಮಂದಿರದ ಮಹಂತರು ಮಂದಿರದ ಪರಿಸರದಲ್ಲಿನ ವೈಶಿಷ್ಟ್ಯ ಪೂರ್ಣ ಸ್ಥಳಗಳನ್ನು ತೋರಿಸುವುದು : ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕಾಲೀಮಾತಾ ಮಂದಿರದ ಮಹಂತ ಶ್ರೀ ಶ್ರೀ ೧೦೮ ಪ್ರೇಮಗಿರಿ ಮಹಾರಾಜರನ್ನು ಭೇಟಿಯಾದರು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅವರ ಆಶೀರ್ವಾದವನ್ನು ಪಡೆದರು. ಆಗ ಮಹಂತರು  ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಮಂದಿರದ ಒಳಗಿನ ಮತ್ತು ಹೊರಗಿನ ಪರಿಸರದಲ್ಲಿನ ವೈಶಿಷ್ಟ್ಯಪೂರ್ಣ ಸ್ಥಳಗಳನ್ನು ತೋರಿಸಿದರು.

೨ ಆ. ದೆಹಲಿಯ ಯುವವಾಹಿನಿಯ ಪದಾಧಿಕಾರಿಗಳ ಭೇಟಿಯಾಗುವುದು ಮತ್ತು ಅವರಿಗೆ ‘ಇದು ದೈವೀ ಯೋಗಾಯೋಗವಾಗಿದೆ’, ಎಂದು ಅನಿಸುವುದು : ಮಹಂತರ ಭೇಟಿಯನ್ನು ಮಾಡಿಕೊಂಡು ನಾವು ಹೊರಗೆ ಬರುವಾಗ ದೆಹಲಿಯ ಹಿಂದೂ ಯುವ ವಾಹಿನಿಯ ಪದಾಧಿಕಾರಿಗಳು ಮಹಂತರನ್ನು ಭೇಟಿಯಾಗಲು ಬಂದರು. ಆಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಅವರಿಗೆ ಸನಾತನ ಸಂಸ್ಥೆಯ ಕಾರ್ಯದ ಬಗ್ಗೆ ಹೇಳಿದರು. ಆಗ ಆ ಧರ್ಮಪ್ರೇಮಿಗಳು ‘ಮುಂದೆ ನಾವು ಗೋವಾದ ಸನಾತನ ಆಶ್ರಮಕ್ಕೆ ಭೇಟಿ ನೀಡಲು ಬರುವೆವು’, ಎಂದು ಹೇಳಿದರು. ಅವರಲ್ಲಿನ ಓರ್ವ ಪ್ರಮುಖ ವ್ಯಕ್ತಿ “ಇಂದಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರೊಂದಿಗಿನ ನಮ್ಮ ಭೇಟಿಯು, ಒಂದು ದೈವೀ ಯೋಗಾಯೋಗವಾಗಿದೆ” ಎಂದು ಹೇಳಿದರು.

೩. ಕೃತಜ್ಞತೆ

‘ಎಲ್ಲ ಕಡೆಗೆ ಕೊರೋನಾ ಮಹಾಮಾರಿಯ ಸಂಕಟವಿರುವಾಗ ಮತ್ತು ಅದರಿಂದಾಗಿ ಭಾರತದಲ್ಲಿನ ಅನೇಕ ಪ್ರಮುಖ ದೇವಸ್ಥಾನಗಳು ಮುಚ್ಚಿರುವಾಗಲೂ ಸಪ್ತರ್ಷಿಗಳು ಹೇಳಿದ ಈ ದೇವಸ್ಥಾನವು ತೆರೆದಿರುವುದು ಮತ್ತು ಅಲ್ಲಿ ದರ್ಶನ ಪಡೆಯಲು ಸಾಧ್ಯವಾಗುವುದು, ಇವೆಲ್ಲವೂ ಪರಾತ್ಪರ ಗುರು ಡಾ. ಆಠವಲೆಯವರ ದೈವೀ ಕಾರ್ಯದ ಒಂದು ಭಾಗವಾಗಿವೆ’, ಎಂಬುದು ಅರಿವಾಯಿತು. ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಪ್ರಾರ್ಥನೆಯಿಂದ ಎಲ್ಲ ಸಾಧಕರಿಗೆ ದೈವೀ ಕವಚ ಲಭಿಸಬಹುದು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆವಶ್ಯಕವಾಗಿರುವ ಚೈತನ್ಯ ಮತ್ತು ಶಕ್ತಿ ಸಿಗುವುದು’, ಎಂದು ಅನಿಸಿತು. ಅದಕ್ಕಾಗಿ ನಾವು ಸನಾತನದ ಎಲ್ಲ ಸಾಧಕರು ಶ್ರೀಮನ್ನಾರಾಯಣಸ್ವರೂಪಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಸಪ್ತರ್ಷಿಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞರಾಗಿದ್ದೇವೆ.

– ಶ್ರೀ. ವಿನಾಯಕ ಶಾನ್‌ಭಾಗ್, ಜಯಪುರ ರಾಜಸ್ಥಾನ. (೨೪.೭.೨೦೨೦)