ಬಾಂಗ್ಲಾದೇಶದಲ್ಲಿ ‘ಸಿತ್ರಾಂಗ್’ ಚಂಡಮಾರುತಕ್ಕೆ ೨೪ ಬಲಿ

  • ೨ ಲಕ್ಷಕ್ಕೂ ಹೆಚ್ಚು ಜನರಿಗೆ ಪೆಟ್ಟು

  • ಈಶಾನ್ಯ ಭಾರತದಲ್ಲೂ ಅಪಾಯದ ಎಚ್ಚರಿಕೆ

ನವದೆಹಲಿ: ‘ಸಿತರಂಗ್’ ಚಂಡಮಾರುತದಿಂದಾಗಿ ಬಾಂಗ್ಲಾದೇಶದಲ್ಲಿ ಕನಿಷ್ಠ ೨೪ ಜನರು ಸಾವನ್ನಪ್ಪಿದ್ದಾರೆ ಮತ್ತು ಚಂಡಮಾರುತದಿಂದ ಅವರನ್ನು ರಕ್ಷಿಸಲು ದೇಶದ ೧೫ ಜಿಲ್ಲೆಗಳಿಂದ ೨ ಲಕ್ಷ ೧೯ ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತವು ಭಾರತವನ್ನು ಪ್ರವೇಶಿಸಿದೆ ಮತ್ತು ಭಾರತೀಯ ಹವಾಮಾನ ಇಲಾಖೆ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಈ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಗಂಟೆಗೆ ೧೦೦ ರಿಂದ ೧೧೦ ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಬಂಗಾಳ ಮತ್ತು ಒಡಿಶಾದ ಹಲವಾರು ಜಿಲ್ಲೆಗಳಲ್ಲಿಯೂ ಮಳೆಯಾಗಿದೆ.