ಕೊಯಮತ್ತೂರಿನ ಸ್ಫೋಟವು ಆತ್ಮಾಹೂತಿ ಆಕ್ರಮಣವಾಗಿರುವ ಸಾಧ್ಯತೆ

ಇಲ್ಲಿಯ ವರೆಗೆ ೫ ಜನರ ಬಂದನ

ಕೊಯಮತ್ತೂರು (ತಮಿಳನಾಡು) – ಇಲ್ಲಿನ ಕೊಟ್ಟಯಿ ಈಶ್ವರಮ್ ಮಂದಿರದ ಸಮೀಪ ಅಕ್ಟೋಬರ ೨೩ ರಂದು ಒಂದು ಚತುಶ್ಚಕ್ರ ವಾಹನದಲ್ಲಿ ನಡೆದ ಸ್ಫೋಟದ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ೫ ಜನರನ್ನು ಬಂದಿಸಿದ್ದಾರೆ. ಇದು ಆತ್ಮಾಹೂತಿ ಆಕ್ರಮಣವಾಗಿರಬಹುದು, ಎಂದು ಹೇಳಲಾಗುತ್ತಿದೆ. ಈ ಸ್ಫೋಟದಲ್ಲಿ ವಾಹನದಲ್ಲಿದ್ದ ಜಮೇಜ ಮುಬೀನ ಸಾವನ್ನಪ್ಪಿದ್ದಾನೆ. ಅವನಿಗೆ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಬಂಧವಿದ್ದ ಕಾರಣ ಈ ಹಿಂದೆಯೆ ಅವನ ವಿಚಾರಣೆಯಾಗಿತ್ತು. ಅದೇ ರೀತಿ ಶ್ರೀಲಂಕಾದಲ್ಲಿ ಈಸ್ಟರ್ ಸಂಡೆಯ ಹಬ್ಬದ ಸಮಯದಲ್ಲಿ ನಡೆದಿರುವ ಬಾಂಬ್ ಸ್ಫೋಟದಲ್ಲಿ ಅವನ ಕೈವಾಡವಿತ್ತು ಎಂದು ಹೇಳಲಾಗುತ್ತದೆ.

೧. ಬಂದಿಸಲ್ಪಟ್ಟ ೫ ಜನರನ್ನು ಸಿಸಿಟಿವಿಯ ಆಧಾರದಲ್ಲಿ ಬಂದಿಸಲಾಗಿದೆ. ಅವರನ್ನು ಸ್ಫೋಟದ ಒಂದು ದಿನ ಮೊದಲು ಘಟನೆಯ ಸ್ಥಳದಲ್ಲಿ ಮಾಹಿತಿಯನ್ನು ಸಂಗ್ರಹಿಸುವಾಗ ನೋಡಲಾಗಿದೆ. ಇದರಲ್ಲಿ ಸಾವನ್ನಪ್ಪಿದ ಮುಬಿನ ಕೂಡ ಇದ್ದನು. ಇವರೆಲ್ಲರ ಕೈಯಲ್ಲಿ ಚೀಲಗಳಿದ್ದುವು.

೨. ತಮಿಳುನಾಡಿನ ಪೊಲೀಸ್ ಮಹಾಸಂಚಾಲಕ ಶ್ರೀ. ಶೈಲೇಂದ್ರ ಬಾಬೂ ಇವರು, ಈ ಸ್ಫೋಟವು ಕಡಿಮೆ ಕ್ಷಮತೆಯದ್ದಾಗಿತ್ತು. ಇದರಲ್ಲಿ ಪೊಟೇಶಿಯಮ್ ನಾಯಟ್ರೇಟ್ ಉಪಯೋಗಿಸಲಾಗಿತ್ತು ಎಂದು ಹೇಳಿದರು.

೩. ಅಣ್ಣಾ ದ್ರಮುಕನ (ದ್ರಮುಕವೆಂದರೆ ದ್ರಾವಿಡ ಮುನ್ನೇತ್ರ ಕಳಘಮ್-ದ್ರಾವಿಡ ಪ್ರಗತಿ ಸಂಘ) ಪ್ರಧಾನ ಕಾರ್ಯದರ್ಶಿ ಮತ್ತು ವಿರೋಧಿ ಪಕ್ಷದ ನಾಯಕ ಪಳನಿಸ್ವಾಮಿ ಇವರು ಘಟನೆಯನ್ನು ಕುಲಂಕುಶವಾಗಿ ವಿಚಾರಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ‘ಈ ಪ್ರಕರಣದ ವಿಚಾರಣೆಯಲ್ಲಿ ಯಾವುದೇ ರಾಜಕೀಯ ಒತ್ತಡ ಹೇರಬಾರದು’, ಎಂದು ಕೂಡ ಅವರು ಹೇಳಿದರು.

೪. ಈ ಘಟನೆಯನ್ನು ಭಾಜಪ ‘ಭಯೋತ್ಪಾದಕ ಆಕ್ರಮಣ’ ಎಂದು ಹೇಳಿದೆ. ಕಳೆದ ೩೬ ಗಂಟೆಯಲ್ಲಿ ಮುಖ್ಯಮಂತ್ರಿ ಸ್ಟೆಲಿನ್ ಇವರು ಯಾವುದೇ ಹೇಳಿಕೆಯನ್ನು ನೀಡಿಲ್ಲ, ಇದನ್ನೂ ಭಾಜಪ ಟೀಕಿಸಿದೆ.