‘ಲಾರಿಯಲ್’ನ ಸೌಂದರ್ಯವರ್ಧಕಗಳ ಬಳಕೆಯಿಂದ ಗರ್ಭಕೋಶದ ಕ್ಯಾನ್ಸರ್ ಆಗಿರುವ ಆರೋಪ !

ಅಮೇರಿಕಾದ ಕಂಪನಿಯ ವಿರುದ್ಧ ಖಟ್ಲೆ ದಾಖಲು

ಶಿಕಾಗೋ (ಅಮೇರಿಕಾ) – ‘ಲಾರಿಯಲ್’ ಎಂಬ ಅಮೆರಿಕಾದಲ್ಲಿನ ಸೌಂದರ್ಯವರ್ಧಕಗಳನ್ನು ತಯಾರಿಸುವ ಕಂಪನಿಯ ‘ಹೇರ್ ಸ್ಟ್ರೆಟನಿಂಗ’ (ಕೂದಲು ಸರಳ ಮಾಡುವ) ಉತ್ಪಾದನೆಯಿಂದ ಕ್ಯಾನ್ಸರ್ ಬಂದಿರುವುದಾಗಿ ಆರೋಪಿಸಲಾಗಿದೆ. ಆರೋಪಿಸಿರುವ ಜೆನಿ ಮಿಶೆಲ್ ಎಂಬ ಹೆಸರಿನ ಮಹಿಳೆಯು ಪರಿಹಾರಕ್ಕಾಗಿ ಅಮೇರಿಕಾದ ಶಿಕಾಗೋದ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾಳೆ. ಮಿಶೆಲ್ ಇವರು ತಾನು ಈ ಕಂಪನಿ ಉತ್ಪನ್ನಗಳನ್ನು ಎರಡು ದಶಕಗಳಿಗಿಂತಲೂ ಹೆಚ್ಚು ಸಮಯ ಬಳಸಿದ್ದೇನೆ. ಅನಂತರ ತನಗೆ ಗರ್ಭಕೋಶದ ಕ್ಯಾನ್ಸರ ಆಯಿತು, ಇದರಿಂದ ತನಗೆ ಶಸ್ತ್ರಕ್ರಿಯೆ ಮಾಡಿ ಗರ್ಭಾಶಯ ತೆಗೆಯಲಾಯಿತು ಎಂದು ಆರೋಪಿಸಿದ್ದಾರೆ.

ಮನವಿ ದಾಖಲಿಸುವಾಗ ಮಿಶೆಲ್‌ರವರು ಒಂದು ಅಧ್ಯಯನದ ಸಂದರ್ಭ ನೀಡಿದ್ದಾರೆ. ‘ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎನ್ಹ್ವಾಯರ್ನಮೆಂಟಲ್ ಹೆಲ್ತ್ ಸೇಫ್ಟಿ’ಯ ಅಧ್ಯಯನದಲ್ಲಿ ಕೂದಲು ಸರಳ ಮಾಡುವ ಉತ್ಪನ್ನಗಳನ್ನು ಆಗಾಗ ಬಳಸುವುದರಿಂದ ಗರ್ಭಕೋಶದ ಕ್ಯಾನ್ಸರ್ ಬರುವ ಅಪಾಯ ಹೆಚ್ಚುತ್ತದೆ, ಎಂಬುದು ಕಂಡುಬಂದಿದೆ. ಕೂದಲಿಗೆ ಸಂಬಂಧಿಸಿದ ರಾಸಾಯನಿಕ ಉತ್ಪಾದನೆಗಳಿಂದ ಗರ್ಭಕೋಶದ ಕ್ಯಾನ್ಸರ್ ಬರುವ ಅಪಾಯವಿದೆ. ಈ ಅಧ್ಯಯನ ಪ್ರಕಾಶಿತಗೊಂಡ ನಂತರ ಈ ಖಟ್ಲೆಯನ್ನು ದಾಖಲಿಸಲಾಗಿದೆ. ಈ ಅಧ್ಯಯನದ ಅನುಸಾರ ರಾಸಾಯನಿಕಯುಕ್ತ ಹೇರ್ ಪ್ರಾಡಕ್ಟ್ಸ್’ಗಳನ್ನು ಬಳಸುವ ಸ್ತ್ರೀಯರ ತುಲನೆಯಲ್ಲಿ ವರ್ಷದಲ್ಲಿ ೪ ಬಾರಿ ಈ ಉತ್ಪಾದನೆಗಳನ್ನು ಬಳಸುವ ಸ್ತ್ರೀಯರಿಗೆ ಗರ್ಭಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯು ಎರಡುಪಟ್ಟು ಹೆಚ್ಚಿರುತ್ತದೆ.