ಚೀನಾ ರಾಷ್ಟ್ರಾಧ್ಯಕ್ಷ ಶೀ ಜಿನ್ ಪಿಂಗ್ ಇವರು ಪ್ರಧಾನಮಂತ್ರಿಗಳನ್ನು ಹುದ್ದೆಯಿಂದ ಕೆಳಗಿಳಿಸಲಾಯಿತು !

ಕಮ್ಯುನಿಸ್ಟ ಪಕ್ಷದ ಅಧಿವೇಶನದಿಂದ ಮಾಜಿ ರಾಷ್ಟ್ರಾಧ್ಯಕ್ಷ ಹು ಜಿಂತಾವೋ ಇವರನ್ನು ಹೊರಗೆ ಅಟ್ಟಿದರು !

ಬೀಜಿಂಗ (ಚೀನ) – ಚೀನಾ ರಾಷ್ಟ್ರಾಧ್ಯಕ್ಷ ಶೀ ಜಿನ್ ಪಿಂಗ ಇವರ ವಿರೋಧಿಯಾಗಿದ್ದ ಪಕ್ಷದಲ್ಲಿದ್ದ ಪ್ರಧಾನಮಂತ್ರಿ ಲೀ ಕೆಕಿಆಂಗರನ್ನು ಕೇಂದ್ರೀಯ ಸಮಿತಿಯಿಂದ ತೆಗೆಯಲಾಗಿದೆ. ಅವರನ್ನು ಪಕ್ಷದ ಪ್ರಮುಖ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ. ಲೀ ಕೇಕಿಆಂಗ ಇವರನ್ನು ಶೀ ನಿನ್ ಪಿಂಗ ಇವರ ಪ್ರತಿಸ್ಪರ್ಧಿಯೆಂದು ತಿಳಿಯಲಾಗುತ್ತಿತ್ತು. ಲೀ ಕೆಕಿಆಂಗ ಇವರೊಂದಿಗೆ ಇನ್ನೂ ಮೂವರನ್ನು ಹೊರಗೆ ತೆಗೆಯಲಾಗಿದೆ. ಕೇಕಿಆಂಗ ಇವರನ್ನು ಸಮಿತಿಯಿಂದ ಹೊರಗೆ ತೆಗೆಯಲಾಗಿದ್ದರಿಂದ ಕಮ್ಯುನಿಸ್ಟ ಪಕ್ಷದ ಪ್ರಮುಖರಾಗುವ ಶೀ ಜಿನಪಿಂಗ್ ಇವರ ಮಾರ್ಗ ಸುಗಮವಾಗಿದೆ.

ಇನ್ನೊಂದೆಡೆ ಚೀನಾದಲ್ಲಿ ಕಮ್ಯುನಿಸ್ಟ ಪಾರ್ಟಿಯ ೨೦ನೇ ಅಧಿವೇಶನದಲ್ಲಿಯೇ ಶೀ ಜಿನಪಿಂಗ ಇವರ ಪಕ್ಕದಲ್ಲಿ ಕುಳಿತಿದ್ದ ಚೀನಾದ ಮಾಜಿ ರಾಷ್ಟ್ರಾಧ್ಯಕ್ಷ ಹೂ ಜಿಂತಾಓ(ವಯಸ್ಸು ೭೯ ವರ್ಷ) ಇವರನ್ನು ಅಧಿವೇಶನದಿಂದ ಬಲವಂತವಾಗಿ ಹೊರಗೆ ತೆಗೆಯಲಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗುತ್ತಿದೆ. ಇದರಲ್ಲಿ ಭದ್ರತಾ ಪಡೆಯು ಜಿಂತಾಓ ಇವರನ್ನು ಬಂಧಿಸಿ ಹೊರಗೆ ಹಾಕುತ್ತಿರುವುದು ಕಾಣಿಸುತ್ತಿದೆ. ಹೂ ಜಿಂತಾಓ ಇವರಿಗೆ ಹೊರಗೆ ಹೋಗುವುದು ಬೇಕಾಗಿರಲಿಲ್ಲ. ಇದನ್ನೇ ಅವರು ವಿರೋಧಿಸುತ್ತಿದ್ದರು. ಜಿಂತಾಓ ಇವರನ್ನು ಹೊರಗೆ ಹಾಕಿರುವುದರ ಹಿಂದಿರುವ ಕಾರಣ ಇಂದಿಗೂ ಸ್ಪಷ್ಟವಾಗಿಲ್ಲ.