ಮುಸಲ್ಮಾನ ಯುವಕನ ಜೊತೆ ವಿವಾಹ ಮಾಡಿಕೊಂಡ ನಂತರ ಅತ್ತೆ ಮನೆಯಲ್ಲಿ ನೀಡಲಾದ ಕಿರುಕುಳದಿಂದ  ಹಿಂದೂ  ಯುವತಿಯ ಆತ್ಮಹತ್ಯೆ!

ಪೂರ್ಣಿಯ (ಬಿಹಾರ) – ಇಲ್ಲಿಯ ಸೋನು ಆಲಮ್  ಎಂಬ ಮುಸಲ್ಮಾನ ಯುವಕನು ಹಿಂದೂ ಯುವತಿಯನ್ನು ಬಲೆಗೆ ಸಿಲುಕಿಸಿ ಆಕೆಯ ಜೊತೆ ವಿವಾಹ ಮಾಡಿಕೊಂಡ ನಂತರ ಆಕೆಯನ್ನು ಮತಾಂತರಗೊಳಿಸಿದನು. ನಂತರ ಆಕೆಯ ಅತ್ತೆ ಮನೆಯಲ್ಲಿ ಆಕೆಗೆ ಕಿರುಕುಳ ನೀಡಿರುವುದರಿಂದ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆರತಿ ನಾಗ ಎಂಬುದು ಆ  ಯುವತಿಯ ಹೆಸರಾಗಿದೆ. ಆಕೆಗೆ ನೀಡಲಾಗಿರುವ ಕಿರುಕುಳದ ಬಗ್ಗೆ ಪಂಚಾಯತಿಯಲ್ಲಿ ಚರ್ಚೆ ನಡೆದಿತ್ತು; ಆದರೆ ನಂತರವೂ ಕೂಡ ಆಕೆಗೆ ಕಿರುಕುಳ ನೀಡುವುದು ಮುಂದುವರೆದಿತ್ತು. ಪೊಲೀಸರು ಈ ಆತ್ಮಹತ್ಯೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಸೋನು ಆಲಮ್ ಇವನು ಪೂರ್ಣಿಯಾದ ಮಹಮ್ಮದಪುರ ಗ್ರಾಮದ ನಿವಾಸಿಯಾಗಿದ್ದನು. ಅವನು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಫೇಸ್ಬುಕ್ ಮೂಲಕ ಅವನು ಆರತಿಯ ಜೊತೆ ಸ್ನೇಹ ಬೆಳೆಸಿದನು. ಈ ಸ್ನೇಹ ಮುಂದೆ ಪ್ರೇಮದಲ್ಲಿ ಪರಿವರ್ತಿತವಾಯಿತು. ಆರತಿಯು ಆಲಮ್ ಇವನ ಜೊತೆ ವಿವಾಹ ಮಾಡಿಕೊಂಡು ಮತಾಂತರಗೊಂಡಿದ್ದಳು ಮತ್ತು ಆಕೆ ಅವನ ಮಹಮ್ಮದಪುರನಲ್ಲಿಯ ಮನೆಯಲ್ಲಿ ವಾಸವಾಗಿದ್ದಳು. ಅಲ್ಲಿ ಆಕೆಗೆ ಪ್ರತಿದಿನ ಹೊಡೆಯಲಾಗುತ್ತಿತ್ತು. ಈ ವಿಷಯವಾಗಿ ಆಕೆಗೆ ಪಂಚಾಯತಿಯಿಂದ ನ್ಯಾಯ ಸಿಕ್ಕಿರಲಿಲ್ಲ.

ಸಂಪಾದಕೀಯ ನಿಲುವು

ಲವ್ ಜಿಹಾದಿನ ಅಪರಾಧಿಗಳಿಗೆ ಇನ್ನು ಗಲ್ಲು ಶಿಕ್ಷೆ ಆಗುವಂತಹ ಕಾನೂನು ಮಾಡುವುದು ಅವಶ್ಯಕವಾಗಿದೆ, ಎಂಬುದೇ ಈ ರೀತಿಯ ಪ್ರಕರಣಗಳು ಸತತವಾಗಿ ನಡೆಯುವ ಘಟನೆಗಳಿಂದ ತಿಳಿದು ಬರುತ್ತಿದೆ!