‘ಮುಸಲ್ಮಾನರು ಶ್ರೀ ಲಕ್ಷ್ಮೀ ದೇವಿಯನ್ನು ಪೂಜಿಸುವುದಿಲ್ಲ; ಹಾಗಾದರೆ ಅವರು ಶ್ರೀಮಂತರಲ್ಲವೇ?’ (ಅಂತೆ)

ಬಿಹಾರದ ಭಾಜಪ ಶಾಸಕ ಲಲನ ಪಾಸವಾನ ಅವರ ಹಿಂದೂ ವಿರೋಧಿ ಹೇಳಿಕೆ !

ಭಾಗಲಪುರ (ಬಿಹಾರ) – ಪೀರಪೈತಿ ಕ್ಷೇತ್ರದ ಭಾಜಪ ಶಾಸಕ ಲಲನ ಪಾಸವಾನ ಅವರು, ‘ಮುಸಲ್ಮಾನರು ಎಂದಿಗೂ ಶ್ರೀ ಲಕ್ಷ್ಮಿ ದೇವಿಯನ್ನು ಪೂಜಿಸುವುದಿಲ್ಲ; ಹಾಗಾದರೆ ಅವರು ಶ್ರೀಮಂತರಲ್ಲವೇ ? ಅವರು ಎಂದೂ ಶ್ರೀ ಸರಸ್ವತಿ ದೇವಿಯನ್ನು ಪೂಜಿಸದಿದ್ದರೆ ಅವರು ವಿದ್ವಾಂಸರಲ್ಲವೇ ?’ ಎಂಬ ಹಿಂದೂದ್ರೋಹಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ವಿರುದ್ಧ ಹಿಂದೂಗಳು ಪ್ರತಿಭಟನೆ ನಡೆಸಿದರು. ಪಾಸ್ವಾನ ಅವರ ಪ್ರತಿಕೃತಿಯನ್ನೂ ದಹಿಸಲಾಯಿತು. ಆ ಬಳಿಕ ಸ್ಪಷ್ಟನೆ ನೀಡಿದ ಪಾಸ್ವಾನ, ‘ನನ್ನ ಮಾತಿನ ಅರ್ಥ ಹಾಗಲ್ಲ, ನಂಬಿದರೆ ದೇವರು, ನಂಬದಿದ್ದರೆ ಕಲ್ಲು. ನಾನು ದೇವರನ್ನು ನಂಬುತ್ತೇನೆ. ನಾನು ಎಲ್ಲ ದೇವರನ್ನೂ ಪೂಜಿಸುತ್ತೇನೆ. ಎಲ್ಲವೂ ನಂಬಿಕೆಯ ಮೇಲೆಯೇ ನಿಂತಿದೆ. ನಂಬುವವರನ್ನು ತರ್ಕದ, ವಿಜ್ಞಾನದ ಒರೆಗಲ್ಲಿನ ಮೇಲೆ ಪರೀಕ್ಷಿಸಿ ನೋಡಿದರೆ ಅವರೂ ನನ್ನ ಹಾಗೆ ಆಗುವರು. (ಇದನ್ನೇ, ಜುಟ್ಟು ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುತ್ತಾರೆ ! ಇಂತಹವರ ವಿರುದ್ಧ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆಂದು ದೂರು ಸಲ್ಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯತ್ನಿಸಬೇಕು ! – ಸಂಪಾದಕರು)

೧. ಲಲನ ಪಾಸ್ವಾನ ತಮ್ಮ ಭಾಷಣದಲ್ಲಿ, ಬಜರಂಗ ಬಲಿ ಶಕ್ತಿಯ ದೇವತೆ; ಆದರೆ ಮುಸಲ್ಮಾನರು ಅಥವಾ ಇತರ ಧರ್ಮದವರು ಬಜರಂಗ ಬಲಿಯನ್ನು ಪೂಜಿಸುವುದಿಲ್ಲ. ಅಮೇರಿಕಾದಲ್ಲಿ ಅವರ ದೇವಸ್ಥಾನವಿಲ್ಲ, ಅಲ್ಲಿಯೂ ಪೂಜೆ ನಡೆಯುವುದಿಲ್ಲ; ಹಾಗಾದರೆ ಅಮೇರಿಕಾ ಶಕ್ತಿಶಾಲಿ ದೇಶವಾಗಿಲ್ಲವೇ ?

೨. ಪಾಸವಾನ ಅವರಿಗೆ ವಿರೋಧವಾಗಲಾರಂಭಿಸಿದಗ ಅವರು, ಈ ವಿರೋಧವು ನಿರರ್ಥಕ; ತಾಕತ್ ಇದ್ದರೆ ತರ್ಕದ ಆಧಾರದ ಮೇಲೆ ಮಾತನಾಡಿರಿ ಎಂದರು. (ಹಿಂದೂಗಳ ದೇವತೆಗಳನ್ನು ತರ್ಕದ ಆಧಾರದಿಂದಲ್ಲ ಶ್ರದ್ಧೆಯ ಆಧಾರದಿಂದ ಪೂಜಿಸಲಾಗುತ್ತದೆ. ಇದೂ ತಿಳಿಯದ ಪಾಸ್ವಾನ ಅವರು ಭಾಜಪದ ಶಾಸಕರಾಗಿದ್ದಾರೆಂಬುದು ಹಿಂದೂಗಳಿಗೆ ಆಪೇಕ್ಷಿತವಿಲ್ಲ ! – ಸಂಪಾದಕರು)

೩. ಪಾಸ್ವಾನ ಅವರು ತಮ್ಮ ತಾಯಿಯ ಮರಣದ ನಂತರ, ಹದಿಮೂರನೆಯ ದಿನ ಅನ್ನದಾನ ಮಾಡಿಸುವ ಪದ್ಧತಿಯನ್ನು ಸಾಮಾಜಿಕ ಕುಪದ್ಧತಿ ಎಂದು ಕರೆಯುತ್ತಾ ಹದಿಮೂರನೆಯ ದಿನದ ಭೋಜನವನ್ನು, ಅನ್ನದಾನವನ್ನು ಮಾಡಿರಲಿಲ್ಲ. ‘ನಾನು ಭೋಜನ ಮಾಡಿಸದ ಕಾರಣಕ್ಕಾಗಿ ಈ ವಾದವು ನಡೆಯುತ್ತಿದೆ ಮತ್ತು ಇದರಿಂದಲೇ ನನ್ನನ್ನು ವಿರೋಧಿಸಲಾಗುತ್ತಿದೆ ಎಂದು ಪಸವಾನ ಅವರು ಹೇಳಿದ್ದಾರೆ.

ಭಾಜಪ, ಜನತಾದಳ ಮತ್ತು ಕಾಂಗ್ರೆಸ್‌ನಿಂದ ಟೀಕೆ

ಭಾಜಪದ ರಾಜ್ಯ ವಕ್ತಾರ ಪ್ರೇಮ ರಂಜನ ಪಟೇಲ ಅವರು ಲಲನ ಪಾಸ್ವಾನ ಅವರನ್ನು ನಾಸ್ತಿಕ ಎಂದಿದ್ದಾರೆ. ‘ನಾಸ್ತಿಕನೇ ಹೀಗೆ ಹೇಳಲು ಸಾಧ್ಯ’, ಎಂದು ಅವರು ಹೇಳಿದರು. ಕಾಂಗ್ರೆಸ ಮತ್ತು ಜನತಾ ದಳ (ಸಂಯುಕ್ತ) ನೇತಾರರು ಪಾಸವನ ಅವರನ್ನು ಟೀಕಿಸಿದ್ದಾರೆ.

ಸಂಪಾದಕೀಯ ನಿಲುವು

ಭಾಗ್ಯನಗರದ ಶಾಸಕ ಟಿ. ರಾಜಾ ಸಿಂಗ ಅವರನ್ನು, ಪ್ರವಾದಿ ಮುಹಮ್ಮದ ಪೈಗಂಬರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣಕ್ಕಾಗಿ ಅಮಾನತುಗೊಳಿಸಿದ ಭಾಜಪ ಪಾಸವಾನ ಅವರ ವಿರುಧ್ದ ಕ್ರಮ ಕೈಗೊಳ್ಳಬೇಕು ಎಂಬುದು ಹಿಂದೂಗಳಿಗೆ ಅನಿಸುತ್ತದೆ !

ಇಂತಹ ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ, ಉನ್ನತ ಹುದ್ದೆಯಲ್ಲಿ ಹೋದರೂ ಅವರು ಇಂತಹ ಹೇಳಿಕೆಗಳನ್ನು ನೀಡಿ ಹಿಂದೂಗಳಲ್ಲಿ ಗೊಂದಲವನ್ನುಂಟು ಮಾಡುತ್ತಾರೆ, ಮತ್ತು ಅವರ ಹೇಳಿಕೆಗಳಿಂದಾಗಿ ಹಿಂದೂ ಧರ್ಮವನ್ನು ಟೀಕಿಸಲು ಇತರ ಧರ್ಮದವರಿಗೆ ಅವಕಾಶ ಸಿಗುತ್ತದೆ !