ಅಮೇರಿಕಾದ ೬೦ ಹಿಂದೂ ಸಂಘಟನೆಗಳ ವಿರುದ್ಧ ನಿರ್ಣಯ

* ಡೆಮಾಕ್ರಟಿಕ್ ಪಕ್ಷದ ಟೀನೆಕ್ ಮಹಾಪಾಲಿಕೆಯ ಸಮಿತಿಯಿಂದ ಪ್ರಸ್ತಾವನೆ

* ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಆರೋಪ

* ಸಂಘಟನೆಗಳ ನಿಧಿಯ ಮೂಲವನ್ನು ಹುಡುಕಲಿದೆ !

* ಹಿಂದೂ ಸಂಘಟನೆಗಳು ಬೀದಿಗಿಳಿದು ವಿರೋಧ

ಅಮೇರಿಕಾದ ನ್ಯೂಜೆರ್ಸಿಯ ಟೀನೆಕ್ ಡೆಮಾಕ್ರಟಿಕ್ ಮುನ್ಸಿಪಲ್ ಕಮಿಟಿಯ ನಾಯಕರ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಲಾಗಿದೆ. ಇದರಲ್ಲಿ ವಿಶ್ವ ಹಿಂದೂ ಪರಿಷತ್, ಸೇವಾ ಇಂಟರ್‌ನ್ಯಾಶನಲ್, ಹಿಂದೂ ಸ್ವಯಂಸೇವಕ ಸಂಘ ಮೊದಲಾದ ೬೦ ಸಂಘಟನೆಗಳು ಭಯೋತ್ಪಾದನೆಯನ್ನು ಉತ್ತೇಜಿಸುತ್ತಿವೆ ಎಂದು ಆರೋಪಿಸಲಾಗಿದೆ. ಈ ಪ್ರಸ್ತಾವನೆಯ ಮೂಲಕ ಈ ಸಂಸ್ಥೆಗಳ ನಿಧಿಯ ಕುರಿತು ತನಿಖೆ ನಡೆಸಲು ಅಮೇರಿಕಾದ ಡೆಮಾಕ್ರಟಿಕ್ ಪಕ್ಷದ ಇಬ್ಬರು ಸದಸ್ಯರನ್ನು ಕೇಳಲಾಗಿದೆ. ‘ಭಾರತ ಮತ್ತು ಅಮೇರಿಕಾದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂದೂ ಸಂಘಟನೆಗಳು ದ್ವೇಷ ಹರಡುವ ಕೆಲಸ ಮಾಡುತ್ತಿವೆ’ ಎಂದೂ ಪ್ರಸ್ತಾವನೆಯಲ್ಲಿ ಹೇಳಲಾಗಿದೆ. ಈ ಸಮಿತಿಯು ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದೆ. ಪ್ರಸ್ತುತ ಅಮೇರಿಕಾದಲ್ಲಿ ಇದೇ ಪಕ್ಷದ ಸರಕಾರವಿದೆ. ಈ ಪ್ರಸ್ತಾಪವನ್ನು ಅನುಮೋದಿಸಿದ ನಂತರ, ೬೦ ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು ಅಮೇರಿಕದ ಅನೇಕ ರಾಜ್ಯಗಳಲ್ಲಿ ಇದನ್ನು ವಿರೋಧಿಸಲು ಪ್ರಾರಂಭಿಸಿದವು. ಡೆಮಾಕ್ರಟಿಕ್ ಪಕ್ಷದ ಸರಕಾರಗಳ ವಿರುದ್ಧ ವಿಶೇಷವಾಗಿ ಕ್ಯಾಲಿಫೋರ್ನಿಯಾ ಮತ್ತು ನ್ಯೂಜರ್ಸಿಯಲ್ಲಿ ಪ್ರದರ್ಶನಗಳನ್ನು ನಡೆಸಲಾಗುತ್ತಿದೆ.

ಹಿಂದೂಗಳ ಸಂಘಟನೆಗಳ ವಿರೋಧ ಏಕೆ ?

ಈ ವರ್ಷ ಆಗಸ್ಟ್ ೧೫ ರಂದು  ಭಾರತೀಯ ಹಿಂದೂಗಳು ಅಮೆರಿಕದ ವಿವಿಧೆಡೆ ಬುಲ್ಡೋಜರ್ ತೋರಿಸಿ ಮೆರವಣಿಗೆಗಳನ್ನು ನಡೆಸಿದರು. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರ ಗಲಭೆಕೋರರು ಮತ್ತು ಅತ್ಯಾಚಾರಿಗಳ ಅಕ್ರಮ ಮನೆಗಳನ್ನು ಬುಲ್ಡೋಜರ್ ಮೂಲಕ ಕೆಡವುತ್ತಿದೆ. ಅಮೆರಿಕದಲ್ಲಿ ಹಿಂದೂಗಳು ನಡೆಸುವ ಮೆರವಣಿಗೆಗಳಲ್ಲಿ ಬುಲ್ಡೋಜರ್ ತೋರಿಸಿ ಅಮೇರಿಕದಲ್ಲಿರುವ ಮುಸಲ್ಮಾನರನ್ನು ವಿರೋಧಿಸಲಾಗುತ್ತಿದೆ ಎಂದು ಹಲವು ಸಂಘಟನೆಗಳು ಟೀಕಿಸತೊಡಗಿದವು.

* ಅಮೇರಿಕಾದಲ್ಲಿರುವ ಮುಸಲ್ಮಾನರ ಒತ್ತಡದಿಂದಾಗಿ ಮತ್ತು ಭಾರತದ ಮೇಲೆ ಒತ್ತಡ ಹೇರಲು ಡೆಮಾಕ್ರಟಿಕ್ ಪಕ್ಷದಿಂದ ಇಂತಹ ಪ್ರಸ್ತಾಪವನ್ನು ತಂದಿರುವುದು ಸ್ಪಷ್ಟವಾಗಿದೆ. ಭಾರತ ಸರಕಾರ ಇದನ್ನು ವಿರೋಧಿಸಬೇಕು!- ಸಂಪಾದಕರು ಸಂಪಾದಕರು 

* ಜಗತ್ತಿನಾದ್ಯಂತ ಇರುವ ಜಿಹಾದಿಗಳಿಗೆ ಮತ್ತು ಭಯೋತ್ಪಾದಕರ ದೇಶವಾಗಿರುವ ಪಾಕಿಸ್ತಾನಕ್ಕೆ ಎಲ್ಲ ರೀತಿಯ ಬೆಂಬಲ ನೀಡುವ ಅಮೇರಿಕಾಗೆ ಹಿಂದೂ ಸಂಘಟನೆಗಳು ಭಯೋತ್ಪಾದನೆಯನ್ನು ಪ್ರೋತ್ಸಾಹಿಸಿದೆ ಎಂದು ಹೇಳುವ ನೈತಿಕ ಹಕ್ಕಿದೆಯೇ ?- ಸಂಪಾದಕರು