ತಮಿಳುನಾಡಿನ ‘ಸ್ಮಾರ್ತ’ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನದ ಬೇಡಿಕೆ ತಿರಸ್ಕೃತ

ಸರ್ವೋಚ್ಚ ನ್ಯಾಯಾಲಯದ ನಿರ್ಣಯ!

ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿನ ‘ಸ್ಮಾರ್ತ’ ಬ್ರಾಹ್ಮಣರಿಗೆ (ಬ್ರಾಹ್ಮಣರಲ್ಲಿನ ಉಪಜಾತಿ) ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲು ನಿರಾಕರಿಸಿತು. ಇದಕ್ಕೆ ಸಂಬಂಧಿಸಿ ದಾಖಲಿಸಿದ ಯಾಚನೆಯನ್ನು ತಳ್ಳಿಹಾಕಲಾಯಿತು. ಈ ಹಿಂದೆಯೂ ಮದ್ರಾಸ್ ಉಚ್ಚ ನ್ಯಾಯಾಲಯವು ಇದೇ ನಿರ್ಣಯವನ್ನು ನೀಡಿತ್ತು. ಅದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಲಾಗಿತ್ತು. ‘ಸ್ಮಾರ್ತ ಬ್ರಾಹ್ಮಣರೆಂದರೆ ಒಂದು ಸಂಪ್ರದಾಯವಲ್ಲ, ಆದ್ದರಿಂದ ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲು ಸಾಧ್ಯವಿಲ್ಲ’, ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.

೧. ಸರ್ವೋಚ್ಚ ನ್ಯಾಯಾಲಯವು ಹೇಳಿದ್ದೇನೆಂದರೆ, ಅನೇಕ ಜನರು ಅದ್ವೈತ ದರ್ಶನವನ್ನು ಪಾಲನೆ ಮಾಡುತ್ತಾರೆ. ಹೀಗಿರುವಾಗ ನಾವು ಸ್ಮಾರ್ತ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಿದರೆ, ನಮ್ಮ ದೇಶ ಅಲ್ಪಸಂಖ್ಯಾತರ ದೇಶವಾಗುವುದು.

೨. ಈ ಹಿಂದೆ ಮದ್ರಾಸ್ ಉಚ್ಚ ನ್ಯಾಯಾಲಯವು ನಿರ್ಣಯವನ್ನು ನೀಡುವಾಗ ಹೇಳಿತ್ತು ಏನೆಂದರೆ, ಸ್ಮಾರ್ತ ಬ್ರಾಹ್ಮಣರು ಭಾರತದ ಸಂವಿಧಾನದ ಕಲಮ್ ೨೬ (ಧಾರ್ಮಿಕ ಪ್ರಕರಣಗಳಿಗೆ ಸಂಬಂಧಿಸಿದ ವ್ಯವಸ್ಥಾಪನೆಯ ಸ್ವಾತಂತ್ರ್ಯ) ಕ್ಕನುಸಾರ ಲಾಭಾರ್ಥಿಗಳಲ್ಲ. ಹಾಗೂ ಸ್ಮಾರ್ತ ಬ್ರಾಹ್ಮಣರು ಅಥವಾ ಇತರ ಯಾವುದೇ ಹೆಸರಿನ ಯಾವುದೇ ಸಂಘಟನೆಯಿಲ್ಲ. ಇದೊಂದು ಜಾತಿ ಸಮುದಾಯವಾಗಿದೆ. ಅವರಲ್ಲಿ ತಮಿಳುನಾಡಿನ ಬ್ರಾಹ್ಮಣರಿಗಿಂತ ಪ್ರತ್ಯೇಕವಾದ ವೈಶಿಷ್ಟ್ಯವೇನಿಲ್ಲ ಹಾಗಾಗಿ ಅವರಲ್ಲಿ ತಮಿಳುನಾಡಿನ ಬ್ರಾಹ್ಮಣರಿಗಿಂತ ಪ್ರತ್ಯೇಕ ಗುರುತು ಅಥವಾ ಪ್ರತ್ಯೇಕವೆಂದು ಪರಿಗಣಿಸುವಂತಹದ್ದೇನಿಲ್ಲ. ಸ್ಮಾರ್ತ ಬ್ರಾಹ್ಮಣರು ತಮ್ಮನ್ನು ಒಂದು ಧಾರ್ಮಿಕ ಸಂಪ್ರದಾಯವೆಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಕಲಮ್ ೨೬ ಕ್ಕನುಸಾರ ಅವರು ಲಾಭಾರ್ಥಿಗಳಲ್ಲ.