ರಾಮಾಯಣದ ಬಗ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಹಿಂಪಡೆದ ಕಾಂಗ್ರೆಸ್ಸಿನ ಕೇರಳ ಪ್ರದೇಶಾಧ್ಯಕ್ಷ ಕೆ. ಸುಧಾಕರನ್ !

ಕೊಝಿಕೊಡ (ಕೇರಳ) – ಕೇರಳದ ಕಾಂಗ್ರೆಸ ಪ್ರದೇಶಾಧ್ಯಕ್ಷ ಕೆ. ಸುಧಾಕರನ್ ಇವರು ರಾಮಾಯಣದ ಬಗ್ಗೆ ನೀಡಿರುವ ಒಂದು ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ಖೇದ ವ್ಯಕ್ತಪಡಿಸುತ್ತಾ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಸುಧಾಕರನ್ ಇವರ ಬಗ್ಗೆ ಈ ಹೇಳಿಕೆಯಿಂದಾಗಿ ಟೀಕೆಗಳನ್ನು ಮಾಡಲಾಗುತ್ತಿತ್ತು.

೧. ಸುಧಾಕರನ್ ಇವರು ಒಂದು ದೈನಿಕಕ್ಕೆ ನೀಡಿರುವ ಸಂದರ್ಶನದಲ್ಲಿ ಅವರಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಮಲಬಾರ ಕ್ಷೇತ್ರದಲ್ಲಿನ ಜನರು ಮತ್ತು ಮಧ್ಯ ಕೇರಳದಲ್ಲಿನ ರಾಜಕೀಯ ನಾಯಕರು ಇವರು ಎಷ್ಟು ಬೇರೆ ಬೇರೆಯಾಗಿದ್ದಾರೆ ? ಈ ಪ್ರಶ್ನೆಯ ಉತ್ತರ ನೀಡುವಾಗ ಸುಧಾಕರನ್, ಭಗವಂತ ಶ್ರೀ ರಾಮ ರಾವಣನ ವಧಿಸಿ ಲಂಕೆಯಿಂದ ಅಯೋಧ್ಯೆಗೆ ಹಿಂತಿರುಗುವಾಗ ಲಕ್ಷ್ಮಣನ ಮನಸ್ಸಿನಲ್ಲಿ ಭಗವಂತ ಶ್ರೀ ರಾಮನನ್ನು ಸಮುದ್ರದಲ್ಲಿ ತಳ್ಳಿ ಅವನ ಪತ್ನಿ ಸೀತಾ ಮಾತೆಯನ್ನು ತನ್ನ ಜೊತೆ ಕರೆದುಕೊಂಡು ಹೋಗುವ ಯೋಚನೆ ಬರುತ್ತಿತ್ತು. ಆಗ ಅವರು ಮಧ್ಯ ಕೇರಳಕ್ಕೆ ತಲುಪಿದ್ದರು. ಆಗ ಅವನ ಮನಸ್ಸಿನ ಯೋಚನೆ ಅಳಿಸಿ ಹೋಯಿತು. ಭಗವಾನ್ ಶ್ರೀರಾಮನಿಗೆ ಲಕ್ಷ್ಮಣನ ಮನಸ್ಸಿನಲ್ಲಿನ ಯೋಚನೆ ಅರಿವಿಗೆ ಬಂದಿತ್ತು. ಅವನು ಲಕ್ಷ್ಮಣನಿಗೆ ಹೇಳಿದನು, ಇದು ಅವನ ತಪ್ಪಲ್ಲ, ಏಕೆಂದರೆ ಈ (ಭೂಮಿಯಿಂದ) ಸ್ಥಳದ ಪ್ರಭಾವದಿಂದ (ದಕ್ಷಿಣ ಕೇರಳದಿಂದ) ಹೀಗೆ ಆಗಿದೆ.

೨. ಈ ಹೇಳಿಕೆಯಿಂದ ಸುಧಾಕರನ್ ಇವರ ಮೇಲೆ ಭಾಜಪ ಮತ್ತು ಅನ್ಯ ಪಕ್ಷದ ನಾಯಕರು ಟೀಕಿಸಿದ ನಂತರ ಸುಧಾಕರನ್ ಇವರು ಖೇದ ವ್ಯಕ್ತಪಡಿಸುತ್ತಾ ಹೇಳಿಕೆ ಹಿಂಪಡೆದಿದ್ದಾರೆ. ನಾನು ಬಾಲ್ಯದಲ್ಲಿ ಈ ಕಥೆ ಕೇಳಿದ್ದೆ, ಅದನ್ನು ನಾನು ಹೇಳಿದೆ, ನನ್ನ ಉದ್ದೇಶ ಜನರಲ್ಲಿ ಬಿರುಕು ಮೂಡಿಸುವುದು ಅಥವಾ ಯಾರನ್ನಾದರೂ ಹೀನೈಸುವುದಾಗಿರಲಿಲ್ಲ, ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಪದೇಪದೇ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ ಕಾಂಗ್ರೆಸ್ಸಿಗರಿಗೆ ಇನ್ನು ಮುಂದೆ ಹಿಂದೂಗಳೇ ಮತಪೆಟ್ಟಿಗೆಯ ಮೂಲಕ ಪಾಠ ಕಲಿಸಬೇಕು !