ದೆಹಲಿಯಲ್ಲಿ ಮುಸ್ಲಿಮರು ಥಳಿಸಿದ ಭಜರಂಗದಳದ ಕಾರ್ಯಕರ್ತನ ಸಾವು

ಹಿಂದೂಗಳಿಂದ ಪ್ರತಿಭಟನೆ

ನವದೆಹಲಿ – ಎರಡು ದಿನಗಳ ಹಿಂದೆ ದೆಹಲಿಯ ಬಲಜಿತನಗರದಲ್ಲಿ ೩ ಮುಸ್ಲಿಂ ಯುವಕರು ನಿತೇಶ್, ಅಲೋಕ್ ಮತ್ತು ಮಾಂಟಿ ಈ ಮೂರು ಹಿಂದೂಗಳ  ಮೇಲೆ ನಡೆಸಿದ ದಾಳಿಯಲ್ಲಿ ನಿತೇಶ ಮತ್ತು ಆಲೋಕ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿತೇಶ್ ಅಕ್ಟೋಬರ್ ೧೫ ರಂದು ನಿಧನರಾದರು. ಅವರು ಬಜರಂಗದಳದ ಕಾರ್ಯಕರ್ತರಾಗಿದ್ದರು. ನಿತೇಶ್ ಅವರ ಸಾವಿನ ಬಗ್ಗೆ ತಿಳಿದ ನಂತರ, ಹಿಂದೂಗಳು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದ್ದರಿಂದ ಇಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪೊಲೀಸರು, ಎರಡು ಗುಂಪುಗಳ ನಡುವಿನ ವಿವಾದದಿಂದಾಗಿ ಈ ದಾಳಿ ನಡೆಸಲಾಗಿದೆಯೇ ಹೊರತು ಧಾರ್ಮಿಕ ಕಾರಣಗಳಿಂದಲ್ಲ ಎಂದು ಹೇಳಿದ್ದಾರೆ. ಮೊದಲ ದಾಳಿಯನ್ನು ಅಲೋಕ್ ಮತ್ತು ನಿತೇಶ್ ಇವರು ನಡೆಸಿದ್ದರು. ಅವರಿಬ್ಬರ ವಿರುದ್ಧ ಈ ಹಿಂದೆಯೂ ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ಉಫೀಜಾ, ಅದನಾನ್ ಮತ್ತು ಅಬ್ಬಾಸ್ ಎಂದು ಗುರುತಿಸಲಾಗಿದ್ದು, ಅವರು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಒಬ್ಬ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತನಾಗಿದ್ದಾನೆ.

ಸಂಪಾದಕೀಯ ನಿಲುವು

ಕಳೆದ ಕೆಲವು ವರ್ಷಗಳಲ್ಲಿ ದೆಹಲಿಯಲ್ಲಿ ಮುಸ್ಲಿಂರಿಂದ ಹಿಂದೂಗಳ ಮೇಲೆ ಹಲ್ಲೆ ಮತ್ತು ಹತ್ಯೆಗಳು ಹೆಚ್ಚುತ್ತಿರುವ ಘಟನೆಗಳ ಬಗ್ಗೆ ಕೇಂದ್ರ ಸರಕಾರವು ಗಂಭೀರವಾಗಿ ಗಮನ ಹರಿಸುವ ಅಗತ್ಯವಿದೆ ಎಂದು ಹಿಂದೂಗಳಿಗೆ ಅನಿಸುತ್ತದೆ !