ಅಫಘಾನಿಸ್ತಾನದಲ್ಲಿ ತಾಲಿಬಾನಿಗಳು ಕಲ್ಲಿನಿಂದ ಹೊಡೆಯುವ ಶಿಕ್ಷೆ ವಿಧಿಸುವ ಮೊದಲೇ ಹೆದರಿಕೆಯಿಂದ ಮಹಿಳೆಯ ಆತ್ಮಹತ್ಯೆ !

ವಿವಾಹಿತ ಪುರುಷರೊಂದಿಗೆ ಓಡಿ ಹೋಗಿ ವಿವಾಹವಾಗಲು ಪ್ರಯತ್ನಿಸಿದ್ದಳು !

ಕಾಬುಲ (ಅಫಘಾನಿಸ್ತಾನ) – ಅಫಘಾನಿಸ್ತಾನದಲ್ಲಿ ತಾಲಿಬಾನಿ ಆಡಳಿತ ಬಂದಾಗಿನಿಂದ ಮಹಿಳೆಯರ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಅವರನ್ನು ಶಿಕ್ಷಣದಿಂದ ವಂಚಿತಗೊಳಿಸಲಾಗಿದೆ. ತಾಲಿಬಾನಿಗಳಿಂದ ಮಹಿಳೆಯರಿಗೆ ಸಾರ್ವಜನಿಕ ಸ್ಥಳದಲ್ಲಿ ಕಲ್ಲಿನಿಂದ ಹೊಡೆಯುವ ಅಥವಾ ಬಾರುಕೋಲಿನಿಂದ ಹೊಡೆಯುವ ಶಿಕ್ಷೆಯನ್ನು ನೀಡಲಾಗುತ್ತಿದೆ. ‘ತಾಲಿಬಾನಿಗಳು ನಡುರಸ್ತೆಯಲ್ಲಿ ಕಲ್ಲಿನಿಂದ ಹೊಡೆಯುವ ಶಿಕ್ಷೆಯನ್ನು ನೀಡುತ್ತಾರೆ’, ಎನ್ನುವ ಹೆದರಿಕೆಯಿಂದ ಓರ್ವ ಮಹಿಳೆಯು ಆತ್ಮಹತ್ಯೆಯನ್ನು ಮಾಡಿಕೊಂಡಿರುವ ಪ್ರಕರಣ ನಡೆದಿದೆ. ಭೋರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಮಹಿಳೆಯು ಓರ್ವ ವಿವಾಹಿತ ಪುರುಷನೊಂದಿಗೆ ಓಡಿ ಹೋಗಿ ವಿವಾಹವಾಗಲು ಪ್ರಯತ್ನಿಸಿದ್ದಳು. ತದನಂತರ ತಾಲಿಬಾನಿ ಸೈನಿಕರು ಮಹಿಳೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕಲ್ಲಿನಿಂದ ಹೊಡೆಯುವ ಶಿಕ್ಷೆಯನ್ನು ವಿಧಿಸಿದ್ದರು; ಆದರೆ ಅದಕ್ಕಿಂತ ಮೊದಲೇ ಅವಮಾನದ ಭಯದಿಂದ ಮಹಿಳೆಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳು.

ಸಂಪಾದಕೀಯ ನಿಲುವು

ಭಾರತದ ಜಾತ್ಯತೀತವಾದಿ, ಪ್ರಗತಿ(ಅಧೋ)ಗತಿ ಈ ವಿಷಯದಲ್ಲಿ ಬಾಯಿ ಬಿಡುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ !