ಬಾಯಡೆನ್ ಇವರು ಇರಾನ್‌ನಲ್ಲಿ ಅರಾಜಕತೆ ಮತ್ತು ಭಯದ ವಾತಾವರಣ ನಿರ್ಮಿಸಿದ್ದಾರೆ !
ತೆಹರಾನ್ (ಇರಾನ) – ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರು ಇರಾನ್‌ನಲ್ಲಿನ ಹಿಜಾಬ್ ವಿರೋಧಿ ಆಂದೋಲನಕ್ಕೆ ಬೆಂಬಲ ನೀಡಿದ್ದರಿಂದ ಇರಾನ್‌ನ ರಾಷ್ಟ್ರಾಧ್ಯಕ್ಷ ಇಬ್ರಾಹಿಂ ರಯಿಸಿ ಇವರು ಟೀಕೆಸಿದ್ದಾರೆ. ಬಾಯಡೆನ್ ಇವರು ಈ ಆಂದೋಲನದಲ್ಲಿ ಅರಾಜಕತೆ ಮತ್ತು ಭಯದ ವಾತಾವರಣ ನಿರ್ಮಿಸಿದ್ದಾರೆ, ಎಂದು ಅವರು ಆರೋಪಿಸಿದ್ದಾರೆ.
Raisi blames Biden for inciting “chaos and terror” in Iran https://t.co/S6cBgue47g pic.twitter.com/eXVOo9dE1f
— Reuters (@Reuters) October 16, 2022
೧. ಜೋ ಬಾಯಡೆನ್ ಇವರು, ಇರಾನ್‌ನಲ್ಲಿ ಆಂದೋಲನ ಮಾಡುವ ಜನರು ತೋರಿದ ಧೈರ್ಯ ನೋಡಿ ನಾನು ಆಶ್ಚರ್ಯನಾಗಿದ್ದೇನೆ. ಅಮೇರಿಕಾ ಇರಾನ್‌ನ ಶೂರ ಮಹಿಳೆಯರ ಬೆಂಬಲಕ್ಕೆ ನಿಂತಿದೆ. ಇರಾನ್ ಸರಕಾರ ಜನರ ಮೂಲಭೂತ ಅಧಿಕಾರ ತಿಳಿದುಕೊಂಡು ಮತ್ತು ಅವರ ರಕ್ಷಣೆ ಮಾಡಬೇಕು. ಸರಕಾರವು ಹಿಂಸಾಚಾರ ನಿಲ್ಲಿಸಬೇಕು.
೨. ಈ ಬಗ್ಗೆ ಉತ್ತರಿಸುವಾಗ ಇರಾನ್‌ನ ರಾಷ್ಟ್ರಾಧ್ಯಕ್ಷ ಇಬ್ರಾಹಿಂ ರಯಿಸಿ ಇವರು, ಬೇರೆ ದೇಶಗಳಲ್ಲಿ ಅರಾಜಕತೆ, ಭಯೋತ್ಪಾದನೆ ಮತ್ತು ಅಶಾಂತಿ ಪ್ರಚೋದಿಸುವ ಅಮೆರಿಕಾದ ರಾಷ್ಟ್ರಾಧ್ಯಕ್ಷರಿಗೆ, ಇರಾನ್‌ನ ಧಾರ್ಮಿಕ ನಾಯಕ ಅಯಾತುಲ್ಲಾ ಖೋಮೇನಿ ಇವರು ಅಮೇರಿಕಾಗೆ ‘ಸೈತಾನ್’ ಎಂದಿದ್ದರು.
೩. ಇರಾನ್‌ನ ವಿದೇಶಾಂಗ ಸಚಿವಾಲದ ವಕ್ತಾರರು ನಾಸೇರ ಕನಾನಿ ಇವರು ಅಮೆರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರ ಹೇಳಿಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು, ಬಾಯಡೆನ್ ಇವರು ಗಲಭೆಗೆ ಬೆಂಬಲ ನೀಡಿ ಇರಾನ್‌ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ಎಂದು ಹೇಳಿದರು.