ಮೆಕ್ಸಿಕೋದಲ್ಲಿ ಗುಂಡಿನ ದಾಳಿಯಲ್ಲಿ ಮಹಾಪೌರ ಸಹಿತ ೧೨ ಜನರ ಸಾವು

ಮೆಕ್ಸಿಕೋ ಸಿಟಿ (ಮೆಕ್ಸಿಕೋ) – ಅಮೇರಿಕಾ ಖಂಡದಲ್ಲಿರುವ ಮೆಕ್ಸಿಕೋ ದೇಶದ ಇರಾಪುಆಟೋ ಇಲ್ಲಿ ಒಂದು ದಾಳಿಕೋರನಿಂದ ನಡೆಸಿದ ಗುಂಡಿನ ದಾಳಿಯಲ್ಲಿ ೧೨ ಜನರು ಹತರಾಗಿದ್ದಾರೆ. ಅದರಲ್ಲಿ ನಗರದ ಮಹಾಪೌರ ಕಾನರಾಡೊ ಮೇನ್‌ಡೋಜಾ ಅಲಮೆಡಾ ಇವರು ಕೂಡ ಹತರಾಗಿದ್ದಾರೆ. ಗುಂಡಿನ ದಾಳಿಯ ನಂತರ ದಾಳಿಕೋರನು ಪರಾರಿ ಆಗಿ ಆಗಿದ್ದಾನೆ. ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ. ಕಳೆದ ತಿಂಗಳಿನಲ್ಲಿನ ಈ ರೀತಿಯ ಗುಂಡಿನ ದಾಳಿಯ ಇದು ಎರಡನೆಯ ಘಟನೆಯಾಗಿದೆ. ಮೊದಲು ಕೂಡ ಒಂದು ನಗರದಲ್ಲಿ ನಡೆದಿರುವ ಗುಂಡಿನ ದಾಳಿಯಲ್ಲಿ ಮಹಾಪೌರರ ಸಹಿತ ೧೮ ಜನರು ಹತರಾಗಿದ್ದರು.