ನಾವು ತೈವಾನ್ ನಮ್ಮದೆ ಎಂದು ತಿಳಿಯುತ್ತೇವೆ ಹಾಗೂ ಅದನ್ನು ನಮ್ಮೊಂದಿಗೆ ಸೇರಿಸಿಕೊಳ್ಳುತ್ತೇವೆ ! – ಶೀ ಜಿನ್‌ಪಿಂಗ್

ಚೀನಾದ ರಾಷ್ಟ್ರಾಧ್ಯಕ್ಷ ಶೀ ಜಿನ್‌ಪಿಂಗ್

ಬೀಜಿಂಗ್ (ಚೀನಾ) – ತೈವಾನ್‌ನ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಅದರಲ್ಲಿ ಇತರ ದೇಶಗಳ ಹಸ್ತಕ್ಷೇಪವನ್ನು ನಿರಾಕರಿಸಲು ನಾವು ಕಠೋರವಾದ ಹೆಜ್ಜೆ ಇಟ್ಟಿದ್ದೇವೆ. ನಾವು ತೈವಾನವನ್ನು ನಮ್ಮದೆಂದು ತಿಳಿಯುತ್ತೇವೆ ಹಾಗೂ ಅದನ್ನು ನಮ್ಮೊಂದಿಗೆ ಸೇರಿಸಿಕೊಳ್ಳುತ್ತೇವೆ, ಎಂದು ಚೀನಾದ ರಾಷ್ಟ್ರಾಧ್ಯಕ್ಷ ಶೀ ಜಿನ್‌ಪಿಂಗ್ ಹೇಳಿದ್ದಾರೆ. ಅವರು ಚೀನಾದ ಕಮ್ಯುನಿಷ್ಟ್ ಪಕ್ಷದ ೨೦ ನೇ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ಈ ಅಧಿವೇಶನ ಅಕ್ಟೋಬರ ೧೬ ರಿಂದ ಅಕ್ಟೋಬರ ೨೨ ರ ವರೆಗೆ ನಡೆಯಲಿದೆ. ಇದರಲ್ಲಿ ದೇಶದ ನೇತೃತ್ವವನ್ನು ಮತ್ತೊಮ್ಮೆ ಶೀ ಜಿನ್‌ಪಿಂಗ್ ಇವರಿಗೆ ಒಪ್ಪಿಸಲಾಗುವುದು.

ಜಿನ್‌ಪಿಂಗ್ ಇವರು,

೧. ನಮ್ಮಲ್ಲಿ ಜಗತ್ತಿನ ಎಲ್ಲಕ್ಕಿಂತ ದೊಡ್ಡ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯವಿದೆ. ಕೋವಿಡ್‌ನ ಕಾಲದಲ್ಲಿ ನಾವು ಜನರ ಸುರಕ್ಷೆಯ ಮತ್ತು ಆರೋಗ್ಯದ ಬಗ್ಗೆ ಚೆನ್ನಾಗಿ ಕಾಳಜಿ ವಹಿಸಿದೆವು. ಮಹಾಮಾರಿಯ ಸಮಯದಲ್ಲಿ ಮೊದಲ ಮಹತ್ವದ ವಿಷಯವೆಂದರೆ ಜನರ ಪ್ರಾಣವನ್ನು ಉಳಿಸುವುದಾಗಿದೆ.

೨. ಚೀನಾದ ಸುರಕ್ಷೆಗಾಗಿ ಪರ್ವತ ಮತ್ತು ನದಿಗಳನ್ನು ಜೋಪಾನ ಮಾಡುವುದು ಆವಶ್ಯಕವಾಗಿದೆ. ಅವುಗಳ ರಕ್ಷಣೆಗಾಗಿ ನಾವು ನಿರಂತರ ಕಾರ್ಯವನ್ನು ಮಾಡುತ್ತಿದ್ದೇವೆ. ಚೀನಾದ ಸುರಕ್ಷೆಗಾಗಿ ಸೈನ್ಯವನ್ನು ಹೆಚ್ಚು ಸಕ್ಷಮಗೊಳಿಸಲಾಗಿದೆ. ಸೈನ್ಯದ ಮೇಲೆ ಪಕ್ಷದ ನೇತೃತ್ವವನ್ನು ಸಂಪೂರ್ಣ ಸ್ಥಾಪಿಸಲು ನಾವು ಮೂಲಭೂತ ಬದಲಾವಣೆಯನ್ನು ಮಾಡಿದ್ದೇವೆ, ಅದರಿಂದ ಒಳ್ಳೆಯ ಪರಿಣಾಮ ಕಾಣಿಸುತ್ತದೆ. ಈ ಹಿಂದೆ ಹಾಂಗ್‌ಕಾಂಗ್‌ನಲ್ಲಿ ಅರಾಜಕತೆಯಿರುತ್ತಿತ್ತು; ಆದರೆ ಈಗ ಅದು ಸಂಪೂರ್ಣ ಚೀನಾದ ನಿಯಂತ್ರಣದಲ್ಲಿದೆ, ಎಂದು ಜಿನ್‌ಪಿಂಗ್ ದಾವೆ ಮಾಡಿದ್ದಾರೆ.

೩. ಮಾನವಿ ಇತಿಹಾಸದಲ್ಲಿ ಬಡತನದ ವಿರುದ್ಧ ಅತೀ ದೊಡ್ಡ ಹೋರಾಟನ್ನು ಚೀನಾ ಮಾಡಿದೆ. ಜಗತ್ತಿನಾದ್ಯಂತದ ಬಡತನವನ್ನು ಕಡಿಮೆ ಮಾಡಲು ನಮ್ಮ ಪ್ರಯತ್ನ ಮಹತ್ವದ್ದಾಗಿದೆ ಎಂದು ಹೇಳಿದರು.