ಚೆನ್ನೈ (ತಮಿಳುನಾಡು) – ಇಲ್ಲಿಯ ಹಿಂದೂ ಮುನ್ನಾಮಿ ಈ ಸಂಘಟನೆಯ ಕಾರ್ಯಕರ್ತ ಶಕ್ತಿ (ವಯಸ್ಸು ೩೨ ವರ್ಷ) ಇವರನ್ನು ಸಮಾಜದಲ್ಲಿ ಬಿರುಕು ಮೂಡಿಸುವ ಪ್ರಯತ್ನ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರಿಗೆ ನ್ಯಾಯಾಲಯ ಕಸ್ಟಡಿಯಲ್ಲಿ ಇರಿಸಲು ನ್ಯಾಯಾಲಯ ಆದೇಶ ನೀಡಿದೆ. ಶಕ್ತಿ ವೆಂಗಾಮೇಡು ಜ್ಯೋತಿದಾರ ಸ್ಟ್ರೀಟ್ ಇಲ್ಲಿ ವಾಸವಾಗಿದ್ದು ಈ ಸಂಘಟನೆಯ ಅವರು ಕರೂರ ಜಿಲ್ಲೆಯ ಸಮನ್ವಯಕರಾಗಿದ್ದಾರೆ. ಅವರು ಹಿಂದೂಗಳಿಗೆ ದೀಪಾವಳಿಯ ಸಮಯದಲ್ಲಿ ಹಿಂದುಗಳು ಹಾಕುವ ಅಂಗಡಿಯಿಂದಲೇ ವಸ್ತುಗಳನ್ನು ಖರೀದಿಸುವ ಕರೆ ನೀಡಿರುವ ಕರಪತ್ರಗಳನ್ನು ವಿತರಿಸಿದ್ದರು. ಹಿಂದೂಗಳ ಅಂಗಡಿಯಿಂದ ವಸ್ತುಗಳನ್ನು ಖರೀದಿಸುವ ಮೊದಲು ‘ಅಂಗಡಿಯಲ್ಲಿ ಹಿಂದೂಗಳ ದೇವತೆಯ ಚಿತ್ರಗಳು ಇದೆಯಾ ?’, ಇದನ್ನು ನೋಡುವಂತೆ ಕರಪತ್ರದಲ್ಲಿ ಇತ್ತು. ಇದರಿಂದ ಅವರ ಮೇಲೆ ಭಾ.ದಂ.ವಿ. ಕಲಂ ೧೫೩ ಅ (ಧರ್ಮ, ವಂಶ, ಜನ್ಮಸ್ಥಾನ, ನಿವಾಸಸ್ಥಾನ, ಭಾಷೆ ಮುಂತಾದ ಕಾರಣಗಳಿಂದ ವಿವಿಧ ಗುಂಪುಗಳಲ್ಲಿ ಶತ್ರುತ್ವ ಹೆಚ್ಚಿಸುವುದು ಮತ್ತು ಸದ್ಭಾವನೆ ಕಾಪಾಡುವುದಕ್ಕೆ ಪ್ರತಿಕೂಲ ಕೃತ್ಯಗಳು ನಡೆಸುವುದು) ಮತ್ತು ೫೦೫(ಸಾರ್ವಜನಿಕ ರೋಷ ನಿರ್ಮಾಣ ಮಾಡುವ ಹೇಳಿಕೆ) ಅಡಿಯಲ್ಲಿ ದೂರು ದಾಖಲಿಸಲಾಗಿದೆ.
Tamil Nadu: Man arrested for asking people to buy only from Hindu shops for Diwali https://t.co/5EmE0mQjTw
— OpIndia.com (@OpIndia_com) October 16, 2022
ಸಂಪಾದಕೀಯ ನಿಲುವು
|