ಕಳೆದ ತಿಂಗಳಲ್ಲಿ ಶಸ್ತ್ರಾಸ್ತ್ರಕ್ಕಾಗಿ ೩ ಸಾವಿರ ಕೋಟಿ ರೂಪಾಯಿ ಸಹಾಯ ಮಾಡಿತ್ತು !
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರು ಪಾಕಿಸ್ತಾನವನ್ನು ಜಗತ್ತಿನ ಎಲ್ಲಕ್ಕಿಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಅವರ ಹತ್ತಿರ ಯಾವುದೇ ನಿಯಂತ್ರಣ ಇಲ್ಲದಿರುವ ಪರಮಾಣು ಶಸ್ತ್ರಾಸ್ತ್ರ ಇದೆ ಎಂದು ಕೂಡ ಬಯಡೆನ್ ಹೇಳಿದ್ದಾರೆ.
ಸಪ್ಟೆಂಬರ್ ೮ ರಂದು ಅಮೇರಿಕಾ ಏಫ್ ೧೬ ಈ ಯುದ್ಧ ವಿಮಾನದ ನಿರ್ವಹಣೆಗಾಗಿ ಪಾಕಿಸ್ತಾನಕ್ಕೆ ೪೫೦ ದಶಲಕ್ಷ ಡಾಲರ್ಸ್ ಎಂದರೆ ೩ ಸಾವಿರ ೫೮೧ ಕೋಟಿ ರೂಪಾಯಿ ಸ್ವೀಕೃತಿ ನೀಡಿದೆ. ಕಳೆದ ೪ ವರ್ಷಗಳಲ್ಲಿ ಇಸ್ಲಾಮಾಬಾದಿಗೆ ನೀಡಿರುವ ಇದು ಎಲ್ಲಕ್ಕಿಂತ ಹೆಚ್ಚು ಸುರಕ್ಷೆ ಸಹಾಯವಾಗಿದೆ. ಹೀಗಿರುವಾಗ ಬಾಯಡೇನ್ ಇವರು ನೀಡಿರುವ ಹೇಳಿಕೆ ಬಗ್ಗೆ ವಿವಿಧ ಮಾಧ್ಯಮದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
US President Joe Biden said that Pakistan was one of the most dangerous nations in the world.
Read more : https://t.co/ZdnWWBgyLi#ITCard pic.twitter.com/2TOB6o1Rqg— IndiaToday (@IndiaToday) October 15, 2022
ಪಾಕಿಸ್ತಾನದ ಹತ್ತಿರ ಭಾರತಕ್ಕಿಂತಲೂ ಹೆಚ್ಚಿನ ಪರಮಾಣು ಶಸ್ತ್ರಾಸ್ತ್ರಗಳು !
ಸ್ವೀಡನಿನ ‘ಥಿಂಕ ಟ್ಯಾಕ್ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್’ನ ವರದಿಯ ಪ್ರಕಾರ ಚೀನಾ ಮತ್ತು ಪಾಕಿಸ್ತಾನದ ಹತ್ತಿರ ಭಾರತದ ಕ್ಕಿಂತಲೂ ಹೆಚ್ಚಿನ ಪರಮಾಣು ಶಸ್ತ್ರಾಸ್ತ್ರಗಳು ಇದೆ. ಪ್ರಸ್ತುತ ಚೀನಾದ ಹತ್ತಿರ ೩೨೦ ಹಾಗೂ ಪಾಕಿಸ್ತಾನದ ಹತ್ತಿರ ೧೬೦ ಪರಮಾಣು ಶಸ್ತ್ರಾಸ್ತ್ರಗಳು ಇದೆ. ಭಾರತದ ಹತ್ತಿರ ೧೫೦ ಪರಮಾಣು ಶಸ್ತ್ರಾಸ್ತ್ರಗಳು ಇದೆ.
ರಷ್ಯಾದ ಹತ್ತಿರ ಎಲ್ಲಕ್ಕಿಂತ ಹೆಚ್ಚಿನ ಅಣುಬಾಂಬ್ !
ಪ್ರಸ್ತುತ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳು ರಷ್ಯಾದ ಹತ್ತಿರ ಇದ್ದು ಅದರ ನಂತರ ಅಮೇರಿಕಾದ ಸ್ಥಾನ ಬರುತ್ತದೆ. ಎರಡು ದೇಶದ ಹತ್ತಿರ ಅಣುಬಾಂಬ್‌ಗಳು ಸಹ ಇದೆ, ಅವು ಸಂಪೂರ್ಣ ನಗರ ಸರ್ವನಾಶ ಮಾಡಬಹುದು.
ಪಾಕಿಸ್ತಾನ ಜೊತೆ ಸಂಬಂಧ ಶಾಶ್ವತವಾಗಿಟ್ಟುಕೊಂಡು ಅಮೆರಿಕಾಗೆ ಏನು ಸಿಗುತ್ತದೆ, ಇದನ್ನು ಅಮೆರಿಕ ಚಿಂತನೆ ಮಾಡಬೇಕು ! – ಡಾ. ಎಸ್. ಜೈಶಂಕರಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಅಮೇರಿಕಾ ಪಾಕಿಸ್ತಾನದ ಸಂಬಂಧದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅವರು, ಇಸ್ಲಾಮಾಬಾದನ ವಾಷಿಂಗ್ಟನ್‌ನೊಂದಿಗೆ ಇರುವ ಸಂಬಂಧ ಅಮೇರಿಕಾದ ಹಿತಕ್ಕಾಗಿ ಒಳ್ಳೆಯದಲ್ಲ. ಈಗ ಪಾಕಿಸ್ತಾನದ ಜೊತೆ ಸಂಬಂಧ ಇಟ್ಟುಕೊಂಡು ಅಮೇರಿಕಾಗೆ ಏನು ಸಿಗುತ್ತದೆ, ಇದನ್ನು ಅಮೇರಿಕಾ ಚಿಂತನೆ ಮಾಡಬೇಕು. ಮುಂಬರುವ ಕಾಲದಲ್ಲಿ ಎರಡು ದೇಶಗಳಲ್ಲಿನ ಸಂಬಂಧ ಎಷ್ಟರಮಟ್ಟಿಗೆ ಸಶಕ್ತ ಮತ್ತು ಲಾಭದಾಯಕ ಆಗಬಹುದು ಇದರ ಯೋಚನೆ ಮಾಡಬೇಕು ಎಂದು ಹೇಳಿದರು.
|
ಸಂಪಾದಕೀಯ ನಿಲುವುಜಿಹಾದಿ ಭಯೋತ್ಪಾದಕರನ್ನು ಪೋಷಿಸುವ ಪಾಕಿಸ್ತಾನಗೆ ಶಸ್ತ್ರಾಸ್ತ್ರಕ್ಕಾಗಿ ಸಹಯ ಮಾಡುವ ಮತ್ತು ‘ಆಡುವುದು ಒಂದು ಮಾಡುವುದು ಇನ್ನೊಂದು’ ಈ ಗಾದೆಯನ್ನು ಸಾರ್ಥಕಗೊಳಿಸುವ ಅಮೇರಿಕಾವೇ ಜಗತ್ತಿಗಾಗಿ ನಿಜವಾದ ಅರ್ಥದಲ್ಲಿ ಅಪಾಯಕಾರಿ ಆಗಿದೆ, ಎಂದು ಯಾರಾದರು ಹೇಳಿದರು ಅದರಲ್ಲಿ ತಪ್ಪೇನು ಇಲ್ಲ ? |