ಮಹಿಳೆಯರ ತುಂಡು ಬಟ್ಟೆ ಪುರುಷನಿಗೆ ಆಕೆ ಮೇಲೆ ದೌರ್ಜನ್ಯವೆಸಗಲು ನೀಡುವ ಪರವಾನಗಿ ಅಲ್ಲ – ಕೇರಳ ಉಚ್ಚ ನ್ಯಾಯಾಲಯ

ತಿರುವನಂತಪುರಂ (ಕೇರಳ) ಸಂವಿಧಾನವು ವ್ಯಕ್ತಿಗೆ ಯಾವುದೇ ಉಡುಪು ಧರಿಸುವ ಸ್ವಾತಂತ್ರ್ಯ ಅಧಿಕಾರದ ಒಂದು ಭಾಗವಾಗಿದೆ. ಸಂವಿಧಾನದ ಕಲಂ ೨೧ ಅನ್ವಯ ಇದು ನಾಗರಿಕರ ಮೂಲಭೂತ ಅಧಿಕಾರವಾಗಿದೆ. ಯಾರಾದರೂ ಮಹಿಳೆ ತುಂಡು ಬಟ್ಟೆ ಧರಿಸಿದರೆ, ಆಗಲೂ ಪುರುಷರ ಅಸಭ್ಯ ವರ್ತನೆಗೆ ಅನುಮತಿ ಸಿಗುವುದಿಲ್ಲ, ಎಂದು ಕೇರಳ ಉಚ್ಚ ನ್ಯಾಯಾಲಯ ಒಂದು ಪ್ರಕರಣದ ವಿಚಾರಣೆಯ ವೇಳೆ ಹೇಳಿದೆ. ಲೈಂಗಿಕ ಶೋಷಣೆ ಪ್ರಕರಣದಲ್ಲಿ ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತನಾಗಿರುವ ಸಿವಿಕ್ ಚಂದ್ರನ್ ಇವರ ಬಂಧನ ಪೂರ್ವ ಜಾಮೀನು ಅರ್ಜಿಗೆ ಆಹ್ವಾನ ನೀಡುವ ಅರ್ಜಿಯ ಕುರಿತು ತೀರ್ಪು ನೀಡುವಾಗ ಉಚ್ಚ ನ್ಯಾಯಾಲಯ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ. ಸಿವಿಕ ಚಂದ್ರನ್ ಇವರ ಬಂಧನ ಪೂರ್ವ ಜಾಮೀನು ಅರ್ಜಿಯ ವಿರುದ್ಧ ರಾಜ್ಯ ಸರಕಾರ ಸಹಿತ ಇತರ ದೂರು ದಾರರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. ಕೊಝಿಕೊಡೆ ಸೆಷನ್ಸ್ ನ್ಯಾಯಾಲಯವು ಬಂಧನ ಪೂರ್ವ ಜಮೀನು ನೀಡುವುದಕ್ಕೆ ನೀಡಿರುವ ಕಾರಣ ಯೋಗ್ಯವಾಗಿಲ್ಲ ಎಂದು ಉಚ್ಚ ನ್ಯಾಯಾಲಯ ನಮೂದಿಸಿದೆ.

ಈ ಪ್ರಕರಣದಲ್ಲಿ ಆಗಸ್ಟ್ ೧೨ ರಂದು ಕೊಝಿಕೊಡೆ ಸೆಷನ್ಸ್ ನ್ಯಾಯಾಲಯವು ನೀಡಿರುವ ಆದೇಶದ ಮೇಲೆ ದೊಡ್ಡದಾದ ವಿವಾದ ನಿರ್ಮಾಣವಾಯಿತು. ‘ಯಾವುದಾದರೂ ಮಹಿಳೆ ತುಂಡು ಬಟ್ಟೆ ಧರಿಸಿದ್ದರೆ ಆಗ ಆ ಪ್ರಕರಣಕ್ಕೆ ಭಾರತೀಯ ದಂಡ ಸಂಹಿತೆಯ ೩೫೪ ನೇ ಕಲಂ ಜಾರಿ ಆಗುವುದಿಲ್ಲ. ಆದ್ದರಿಂದ ಸಂಬಂಧಿತ ಆರೋಪಿಯ ಮೇಲೆ ಅಸಭ್ಯವರ್ತನೆಯ ಮೊಕದ್ದಮೆ ದಾಖಲಿಸಲಾಗುವುದಿಲ್ಲ, ಎಂದು ಕೊಝಿಕೊಡೆ ನ್ಯಾಯಾಲಯ ಆದೇಶದಲ್ಲಿ ಹೇಳಿತ್ತು. ಈ ಆದೇಶ ಅಸಂವೇದನಾಶೀಲ ಇದೆ ಎಂದು ರಾಜ್ಯ ಸರಕಾರ ಕೇರಳ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿತ್ತು. ನ್ಯಾಯಾಲಯವು ಸಿವಿಕ್ ಚಂದ್ರನ್ ಇವರ ಬಂಧನ ಪೂರ್ವಜಾಮೀನು ಸಮ್ಮತಿಸಿತ್ತು. ಕನಿಷ್ಠ ನ್ಯಾಯಾಲಯದ ನಿರ್ಣಯ ಕೇರಳ ಉಚ್ಚ ನ್ಯಾಯಾಲಯ ಕಾಯ್ದಿರಿಸಿದೆ.