ರೈಲ್ವೇ ಇಲಾಖೆಯು ಶ್ರೀ ಹನುಮಾನ ದೇವಸ್ಥಾನಕ್ಕೆ ನೋಟಿಸ್ ಜಾರಿ ಮಾಡಿ ೧೦ ದಿನಗಳಲ್ಲಿ ದೇವಸ್ಥಾನವನ್ನು ತೆಗೆಯಲು ಹೇಳಿದೆ !

ಧನಬಾದ (ಝಾರಖಂಡ) – ಇಲ್ಲಿನ ಬೇಕಾರಬಾಂಧ ಸಂಕೀರ್ಣದಲ್ಲಿರುವ ರೈಲ್ವೇ ಇಲಾಖೆಯ ಜಮೀನಿನಲ್ಲಿರುವ ಶ್ರೀ ಹನುಮಾನ ದೇವಸ್ಥಾನಕ್ಕೆ ರೈಲ್ವೇ ಇಲಾಖೆಯಿಂದ ನೋಟಿಸ್ ಜಾರಿ ಮಾಡಿ ೧೦ ದಿನಗಳೊಳಗೆ ದೇವಸ್ಥಾನವನ್ನು ಇಲಾಖೆಯ ಜಮೀನಿನಿಂದ ತೆಗೆದುಹಾಕಲು ತಿಳಿಸಲಾಗಿದೆ.


ಈ ಸೂಚನೆಯನ್ನು ಪೂರ್ವ-ಮಧ್ಯ ರೈಲ್ವೇಯ ಸಹಾಯಕ ಇಂಜಿನಿಯರ್ ದೇವಸ್ಥಾನದ ಗೋಡೆಯ ಮೇಲೆ ಅಂಟಿಸಿದ್ದಾರೆ. ಇದರಿಂದ ಸ್ಥಳೀಯರು ಆಕ್ರೋಶಗೊಂಡಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ತರಲು ರೈಲ್ವೇ ಇಲಾಖೆಯು ಉದ್ದೇಶಪೂರ್ವಕವಾಗಿ ಈ ಕೃತ್ಯವನ್ನು ಎಸಗಿದೆ ಎಂಬುದು ಅವರ ಹೇಳಿಕೆಯಾಗಿದೆ.

ಸಂಪಾದಕೀಯ ನಿಲುವು

  • ದೇವಸ್ಥಾನಕ್ಕೆ ನೋಟಿಸ್ ನೀಡಿ ನಗೆಪಾಟಲಿಗೆ ಈಡಾದ ರೈಲ್ವೇ ಇಲಾಖೆ !
  • ರೈಲ್ವೇ ಇಲಾಖೆಯ ವಿಚಿತ್ರ ಆಡಳಿತ ! ರೈಲ್ವೇ ಇಲಾಖೆಯ ಒಡೆತನದ ಜಮೀನಿನಲ್ಲಿರುವ ಇತರ ಧರ್ಮದವರ ಶ್ರದ್ಧಾಸ್ಥಾನಗಳನ್ನು ತೆಗೆದುಹಾಕಲು ಇಂತಹ ನೋಟಿಸುಗಳನ್ನು ನೀಡಲು ರೈಲ್ವೇ ಇಲಾಖೆಯು ಎಂದಾದರೂ ಧೈರ್ಯ ತೋರಿಸುತ್ತದೆಯೇ ?