ಆಮ್ ಆದ್ಮಿ ಪಕ್ಷದ ಗುಜರಾತ ಪ್ರದೇಶಾಧ್ಯಕ್ಷ ಗೋಪಾಲ ಇಟಾಲಿಯಾ ಇವರ ಖೇದಕರ ಹೇಳಿಕೆ
ಕರ್ಣಾವತಿ (ಗುಜರಾತ) – ಆಮ್ ಆದ್ಮಿ ಪಕ್ಷದ ಗುಜರಾತ ರಾಜ್ಯದ ಪ್ರದೇಶಾಧ್ಯಕ್ಷ ಗೋಪಾಲ್ ಇಟಾಲಿಯಾ ಇವರು, ‘ದೇವಸ್ಥಾನಕ್ಕೆ ಹಾಗೂ ಪ್ರವಚನಕ್ಕೆ ಮಹಿಳೆಯರು ಹೋಗಬಾರದು, ಅಲ್ಲಿ ಅವರ ಶೋಷಣೆ ಮಾಡಲಾಗುತ್ತದೆ’, ಎಂದು ಹೇಳಿಕೆ ನೀಡಿದ್ದಾರೆ. ಭಾಜಪದ ಸಾಮಾಜಿಕ ಮಾಧ್ಯಮದ ಪ್ರಮುಖ ಅಮಿತ ಮಾನವಿಯ ಇವರು ಅವರ ಟ್ವಿಟರ್ ಖಾತೆಯಿಂದ ಗೋಪಾಲ್ ಇಟಾಲಿಯಾ ಇವರ ಈ ಹೇಳಿಕೆಯ ವಿಡಿಯೋ ಪ್ರಸಾರ ಮಾಡಿದ್ದಾರೆ. ಈ ಮೊದಲು ಇಟಾಲಿಯಾ ಇವರು ಪ್ರಧಾನಿ ಮೋದಿಯವರಿಗೆ ‘ನೀಚ’ ಎಂದಿದ್ದರು ಹಾಗೂ ಹಿಂದೂ ದೇವತೆಗಳ ವಿಷಯವಾಗಿ ಕೂಡ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.
‘Temples are places of exploitation’: AAP Gujarat President Gopal Italia’s hate-filled video from 2018 goes viralhttps://t.co/TrUXxh7mHN
— OpIndia.com (@OpIndia_com) October 11, 2022
ಈ ವಿಡಿಯೋದಲ್ಲಿ ಗೋಪಾಲ್ ಇಟಾಲಿಯಾ ಇವರು ಹರಿ ಮೋಹನ್ ಧವನ ಮತ್ತು ಅರುಣ ಕುಮಾರ ಇವರ ಒಂದು ಪುಸ್ತಕ ತೋರಿಸುತಿದ್ದಾರೆ. ಆ ಸಮಯದಲ್ಲಿ ಅವರು, ‘ನಾನು ನನ್ನ ಮಾತೆಯರಿಗೆ ಮತ್ತು ಭಗಿನಿಯರಿಗೆ ದೇವಸ್ಥಾನಕ್ಕೆ ಮತ್ತು ಪ್ರವಚನಕ್ಕೆ ಹೋಗಬೇಡಿ. ಅಲ್ಲಿ ಹೋಗಿ ನಿಮಗೆ ಏನೂ ಸಿಗುವುದಿಲ್ಲ. ಇವು ಮಹಿಳೆಯರ ಶೋಷಣೆ ಮಾಡುವ ಸ್ಥಳಗಳಾಗಿವೆ. ನಿಮಗೆ ಏನಾದರೂ ನಿಮ್ಮ ಹಕ್ಕು ಬೇಕೆಂದರೆ ಹಾಗೂ ನಿಮಗೆ ಈ ದೇಶದ ಮೇಲೆ ಅಧಿಕಾರ ನಡೆಸುವುದಿದ್ದರೆ, ಪ್ರವಚನದಲ್ಲಿ ನೃತ್ಯ ಮಾಡುವುದಕ್ಕಿಂತ ಈ ಪುಸ್ತಕ ಓದಿರಿ, ಎಂದು ಗೋಪಾಲ್ ಇಟಾಲಿಯಾ ಇವರು ಮನವಿ ಮಾಡಿದರು.
ಸಂಪಾದಕೀಯ ನಿಲುವು
|