ಪಾಕಿಸ್ತಾನದಲ್ಲಿ ಅಪ್ರಾಪ್ತ ಸಿಖ್ ಹುಡುಗನ ಮೇಲೆ ಮುಸ್ಲಿಮರು ಸಾಮೂಹಿಕ ಅತ್ಯಾಚಾರ!

ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಕೋಕಾಬಾದ್‌ನಲ್ಲಿ ೧೩ ವರ್ಷದ ಸಿಖ್ ಬಾಲಕನ ಮೇಲೆ ಮೊಹಸಿನ್ ಜಮಾಲಿ ಮತ್ತು ತಕ್ರಿ ಲಶಾರಿ ಈ ಮುಸಲ್ಮಾನರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ‘ಇದು ಖೇದಕರವಾಗಿದೆ. ಅತ್ಯಾಚಾರಿಗಳು ಸಿವಿಲ್ ಲೈನ್ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿರುವುದು ಹೆಚ್ಚು ನಾಚಿಕೆಗೇಡಿನ ಸಂಗತಿಯಾಗಿದೆ’, ಎಂದು ಪಾಕಿಸ್ತಾನ ಮೂಲದ ‘ವಾಯ್ಸ್ ಆಫ್ ಪಾಕಿಸ್ತಾನಿ ಮೈನಾರಿಟೀಸ್’ ಎಂಬ ಸಂಘಟನೆ ಟ್ವೀಟ್ ಮಾಡಿದೆ. ಅವರು ಟ್ವೀಟ್ ಜೊತೆಗೆ ಸಂತ್ರಸ್ತ ಹುಡುಗನ ವೀಡಿಯೊವನ್ನು ಸಹ ಅದರಲ್ಲಿ ಸೇರಿಸಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಸಿಖ್ಖರ ಮೇಲೆ ಅತ್ಯಾಚಾರ ಆಗುತ್ತಿದೆ ಎಂದು ಕೂಗಾಡುವ ಖಾಲಿಸ್ತಾನಿಗಳು ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ಪದೇ ಪದೇ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಒಂದು ಶಬ್ದವನ್ನು ಮಾತನಾಡುವುದಿಲ್ಲ. ಇದರಿಂದ ಖಲಿಸ್ತಾನಿಗಳ ತಥಾಕಥಿತ ಸಿಖ್ ಪ್ರೀತಿ ಗಮನಕ್ಕೆ ಬರುತ್ತದೆ !