`ಗಝವಾ-ಎ-ಹಿಂದ್’ ಅಥವಾ ಹಿಂದೂ ರಾಷ್ಟ್ರ ?

ಗಝವಾ-ಎ-ಹಿಂದ್

ಕೇಂದ್ರ ಸರಕಾರವು ಇತ್ತೀಚೆಗಷ್ಟೆ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಅಂದರೆ `ಪಿ.ಎಫ್.ಐ.’ವನ್ನು ನಿಷೇಧಿಸಿತು. ಈ ಸಂಘಟನೆಯ ರಾಜಕೀಯ ಪಕ್ಷವಾಗಿರುವ `ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದ (ಎಸ್.ಡಿ.ಪಿ.ಐ.ಯ) ವಿರುದ್ಧವೂ ಕ್ರಮಕೈಗೊಳ್ಳುವ ಸಾಧ್ಯತೆ ಯಿದೆ, ಎಂದು ಹೇಳಲಾಗುತ್ತದೆ. ಜಿಹಾದಿ ಮಾನಸಿಕತೆಯನ್ನಿಟ್ಟು ಕೊಂಡು ಭಯೋತ್ಪಾದನೆಯನ್ನು ಬೆಂಬಲಿಸುವ ಸಂಘಟನೆಯನ್ನು ನಿಷೇಧಿಸಿದ್ದರಿಂದ `ಇಸ್ಲಾಮೀ ಮೂಲಭೂತವಾದಕ್ಕೆ ಸ್ವಲ್ಪ ಮಟ್ಟಿಗೆ ಪೆಟ್ಟು ಬೀಳಲು ಆರಂಭವಾಗಿದೆ’, ಎನ್ನಬಹುದು; ಆದರೆ ಇದರ ಬೇರುಗಳು ದೂರದ ವರೆಗೆ ಹರಡಿದೆ. ಮೂಲತಃ ಭಯೋತ್ಪಾದಕರಿಗೆ ಭಾರತದಲ್ಲಿ `ಗಝವಾ-ಎ-ಹಿಂದ್’ ತರಲಿ ಕ್ಕಿದೆ. `ಗಝವಾ-ಎ-ಹಿಂದ್’ ಈ ಗುರಿಯನ್ನು ಸಾಧಿಸಲು `ಮೂರ್ತಿಪೂಜಕರನ್ನು ಕೊಲೆ ಮಾಡಿ’, `ಇಡೀ ಜಗತ್ತಿ ನಲ್ಲಿ ಇಸ್ಲಾಮ್ ಧರ್ಮದ ವರ್ಚಸ್ಸನ್ನು ಪ್ರಸ್ಥಾಪಿಸಿ’ ಹಾಗೂ `ಎಲ್ಲರನ್ನೂ ಮತಾಂತರಿಸಿ’, ಎಂಬ ಸಂದೇಶ ನೀಡುತ್ತಿದೆ. ಈ `ಅಜೆಂಡಾ’ ವನ್ನು ಕಟ್ಟರ್ ಮೌಲ್ವೀ ಮತ್ತು ಪ್ರತ್ಯೇಕತಾವಾದಿಗಳು ಸಿದ್ಧಪಡಿಸಿದ್ದಾರೆ.

ಜಿಹಾದಿ ಭಯೋತ್ಪಾದಕರಿಗೆ ಭಾರತದಲ್ಲಿ ಇಸ್ಲಾಮೀ  ರಾಷ್ಟ್ರವನ್ನು ತರಲಿಕ್ಕಿದೆ. ಈ ವಿಷಯದಲ್ಲಿ ಮಾತನಾಡಿದ ಇಸ್ಲಾಮಿಕ್ ವಿದ್ವಾಂಸ ರಿಝವಾನ ಅಹಮ್ಮದ, “ಇಷ್ಟರವರೆಗೆ `ಗಝವಾ-ಎ-ಹಿಂದ್’ನ ಶೇ. ೫೦ ರಷ್ಟು ಧ್ಯೇಯ ಪೂರ್ಣವಾಗಿದೆ. ೨೦೫೦ ರ ವರೆಗೆ ದೇಶದಲ್ಲಿನ ಮುಸಲ್ಮಾನರ ಜನಸಂಖ್ಯೆ ಶೇ. ೨೫ ರಷ್ಟಾಗುವುದು. ಶೇ. ೨೫ ರಷ್ಟು ಜನಸಂಖ್ಯೆ ಮುಸಲ್ಮಾನ ಮುಖ್ಯಮಂತ್ರಿಯಾಗಲು ಸಾಕಾಗುತ್ತದೆ. ಮುಸಲ್ಮಾನರ ಸಂಖ್ಯೆ ಶೇ. ೨೯ ರಷ್ಟಾದರೆ ಮುಂಬರುವ ೫೦ ರಿಂದ ೬೦ ವರ್ಷಗಳಲ್ಲಿ ಭಾರತದ ಪ್ರಧಾನಮಂತ್ರಿ ಮುಸಲ್ಮಾನ ಆಗಿರುವನು”, ಎಂದಿದ್ದಾರೆ. ಇದರಿಂದ ಭಯೋತ್ಪಾದಕ ಸಂಘಟನೆಗಳನ್ನು ನಿರ್ಬಂಧಿಸುವುದು ಅಥವಾ ಜಿಹಾದಿ ಭಯೋತ್ಪಾದಕರನ್ನು ಶಿಕ್ಷಿಸುವುದು ಎಷ್ಟು ಆವಶ್ಯಕವಾಗಿದೆ ಎಂಬುದು ಅರಿವಾಗುತ್ತದೆ; ಆದರೆ ಅದಕ್ಕೂ ಮುಂದೆ ಹೋಗಿ ಜಗತ್ತಿನಾದ್ಯಂತ ಯಾರು `ಗಝವಾ-ಎ-ಹಿಂದ್’ನ ಕನಸು ಕಾಣುತ್ತಿದ್ದಾರೆಯೋ ಅವರೊಂದಿಗೆ ಹೋರಾಡಿ ಭಾರತದ ಹಿಂದೂಗಳ ರಕ್ಷಣೆ ಮಾಡುವಂತಹ ದೊಡ್ಡ ಹೊಣೆಯನ್ನು ಮುಂಬರುವ ಕಾಲದಲ್ಲಿ ನಿರ್ವಹಿಸಬೇಕಾಗಿದೆ.

ಆಕ್ರಮಣಕಾರರ ಆದರ್ಶ (?) !

ಕಳೆದ ಸಾವಿರಾರು ವರ್ಷಗಳಿಂದ ಇಸ್ಲಾಮಿಕ್ ಮೂಲಭೂತ ವಾದಿಗಳು ಭಾರತವನ್ನು ಇಸ್ಲಾಮಿಸ್ತಾನವನ್ನಾಗಿಸಲು ದಾರಿ ಕಾಯುತ್ತಿದ್ದಾರೆ. ಹಿಂದಿನ ಕಾಲದ ಮುಸಲ್ಮಾನ ದಾಳಿಕೋರರು ಕೇವಲ ಭಾರತದ ಸಂಪತ್ತನ್ನು ಲೂಟಿ ಮಾಡಿದ್ದಲ್ಲದೇ, ಈ ಭೂಮಿಯಿಂದ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ಮತ್ತು ಹಿಂದೂಗಳನ್ನು ನಾಶ ಮಾಡಿ ಈ ದೇಶದ ಮೇಲೆ ಹಸಿರು ಧ್ವಜವನ್ನು ಹಾರಿಸುವ ಕನಸನ್ನು ಇಟ್ಟುಕೊಂಡಿದ್ದರು. ಆ ಕಾಲ ದಲ್ಲಿ ಹಿಂದೂಗಳು ತೋರಿಸಿದ ಪರಾಕ್ರಮದಿಂದ ಅವರ ಕನಸು ಎಂದೂ ನನಸಾಗಲಿಲ್ಲ. ಈಗ ಅದೇ ಕನಸ್ಸನ್ನಿಟ್ಟುಕೊಂಡು ಜಗತ್ತಿ ನಾದ್ಯಂತದ ಜಿಹಾದಿಗಳು, ಭಯೋತ್ಪಾದಕರು ಮತ್ತು ಮತಾಂಧರು ಭಾರತವನ್ನು ಮತ್ತು ಹಿಂದೂಗಳನ್ನು ಗುರಿ ಮಾಡುತ್ತಿದ್ದಾರೆ. ಪ್ರಸ್ತುತ `ಪಿ.ಎಫ್.ಐ. ಸಂಘಟನೆ ಹೆಸರು ಬದಲಾಯಿಸಿ ತನ್ನ ಕಾರ್ಯವನ್ನು ಮುಂದುವರಿಸುವುದೆ ?’, `ಈ ಸಂಘಟನೆಗೆ ಸಂಬಂಧಿಸಿದ ೫೦ ಲಕ್ಷ ಕಾರ್ಯಕರ್ತರ ಮೇಲೆ ಕಾರ್ಯಾಚರಣೆಯಾಗುವುದೇ?’ ಮುಂತಾದ ವಿವಿಧ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಗುತ್ತಿದೆ; ಆದರೆ ಈ ಸಂಘಟನೆಯು `ಗಝವಾ-ಎ-ಹಿಂದ್’ಗಾಗಿ ಹಿಂದೂಗಳಲ್ಲಿ ಬಿಂಬಿಸಿದ ಭಯದ ವಿಷಯದಲ್ಲಿ ಯಾರೂ ಮಾತನಾಡುವುದಿಲ್ಲ. ಇಂದು `ಪಿ.ಎಫ್.ಐ.ಗೆ ನಿಷೇಧ ಹೇರಿದ್ದರೂ, `ಗಝವಾ-ಎ-ಹಿಂದ್’ದಿಂದ ಪ್ರೇರಣೆ ಪಡೆದಿರುವ ಅನೇಕ ಜಿಹಾದಿ ಯುವಕರು ನಾಳೆ ಬೇರೆಯೆ ಹೆಸರಿನಲ್ಲಿ ಯಾವುದಾದರೂ ಸಂಘಟನೆಯನ್ನು ಸ್ಥಾಪಿಸಿ ಹಿಂದೂವಿರೋಧಿ ಕಾರ್ಯಾಚರಣೆಯನ್ನು ಮುಂದುವರಿಸುವರು. ಅವರನ್ನು ಹೇಗೆ ತಡೆಯುವುದು ? ಆದ್ದರಿಂದ ಕೇವಲ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತದ ಜಿಹಾದಿಗಳು `ಗಝವಾ-ಎ-ಹಿಂದ್’ನ ಕನಸು ಕಾಣುವುದು ಬಿಡಿ ಈ ಶಬ್ದವನ್ನು ಉಚ್ಚರಿಸಲು ಕೂಡ ಧೈರ್ಯ ಮಾಡದಷ್ಟು ಭಯವನ್ನು ಭಾರತವು ನಿರ್ಮಾಣ ಮಾಡುವ ಅವಶ್ಯಕತೆಯಿದೆ. ಇಂದಿನ ಪರಿಸ್ಥಿತಿಯಿಂದ `ಭಾರತದ ಸಂಕಟ ನಿವಾರಣೆಯಾಯಿತು’, ಎಂದು ಹೇಳುವ ಹಾಗಿಲ್ಲ, `ಈ ಸಂಕಟದ ವ್ಯಾಪ್ತಿ ಪಿ.ಎಫ್.ಐ.ಯ ಕಾರ್ಯಾಚರಣೆಯಿಂದ ನಮಗೆ ಅರಿವಾಯಿತು’, ಎಂದು ನಾವು ಹೇಳಬಹುದು. ಈ ಸಂಕಟವನ್ನು ಹಿಮ್ಮೆಟ್ಟಿಸುವ ಬಹುದೊಡ್ಡ ಸವಾಲು ಸರಕಾರದ ಮುಂದಿದೆ.

ಮತಾಂಧ ಸಂಘಟನೆಗಳೆ, ಇಲ್ಲಿಂದ ತೊಲಗಿ !

ಸ್ವಾತಂತ್ರ್ಯವೀರ ಸಾವರಕರರು ಹಿಂದೂ ರಾಷ್ಟ್ರವನ್ನು ಆಗ್ರಹಿಸಿದ್ದರು. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಇಂತಹ ಬೇಡಿಕೆಯನ್ನು ಮಾಡುವವರು ಅವರು ಒಬ್ಬರೆ ಇದ್ದರು. ಸನಾತನ ಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ `ಹಿಂದೂ ರಾಷ್ಟ್ರ’ದ ಬೇಡಿಕೆಯನ್ನು ಪುರಸ್ಕರಿಸುತ್ತಿದೆ; ಕ್ರಮೇಣ ಅನೇಕ ಹಿಂದೂಗಳಿಗೆ ಇದರ ಮಹತ್ವ ಅರಿವಾಗಿರುವುದರಿಂದ ಅನೇಕ ಜನರು ಈಗ ಹಿಂದೂ ರಾಷ್ಟ್ರದ ಘೋಷಣೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಆರಂಭಿಸಿದ್ದಾರೆ. ಭಾರತ ಮತ್ತು ಹಿಂದೂ ಧರ್ಮಕ್ಕಾಗಿ ಇದು ಆಶಾದಾಯಕ ವಿಷಯವೆಂದೇ ಹೇಳಬೇಕು. ಹಿಂದೂ ರಾಷ್ಟ್ರದಲ್ಲಿ ನಿಜವಾಗಿಯೂ ಹಿಂದೂಗಳ ಆಧ್ಯಾತ್ಮಿಕ ಉತ್ಕರ್ಷವಾಗಲಿಕ್ಕಿದೆ; ಆದರೆ ಹಾಗಾಗದೆ `ಗಝವಾ’ದ ದವಡೆಗೆ ಹೋದರೆ ಹಿಂದೂಗಳು ಹೆಜ್ಜೆಹೆಜ್ಜೆಗೂ ಅನ್ಯಾಯ, ಅತ್ಯಾಚಾರವನ್ನೇ ಎದುರಿಸಬೇಕಾಗುವುದು, ಎಂಬುದು ಖಚಿತ. ಮೂಲಭೂತವಾದಿ, ಪ್ರಗತಿ (ಅಧೋಗತಿ) ಪರರು, ಜಾತ್ಯತೀತವಾದಿಗಳು ಇವರೆಲ್ಲ `ಹಿಂದೂ ರಾಷ್ಟ್ರ’ದ ಸಂಕಲ್ಪನೆಯನ್ನು ವಿರೋಧಿಸುತ್ತಿರುವುದು ಕಾಣಿಸುತ್ತದೆ; ಏಕೆಂದರೆ ಹಿಂದೂ ರಾಷ್ಟçದ ಸಾಮರ್ಥ್ಯ ಮತ್ತು ಅದರ ಪರಿಣಾಮದ ಬಗ್ಗೆ ಅವರ ಬುದ್ದಿಗೆ ಎಳ್ಳಷ್ಟೂ ತಿಳಿಯುವುದಿಲ್ಲ. `ಹಿಂದೂ ರಾಷ್ಟ್ರ’ ಮತ್ತು `ಇಸ್ಲಾಮೀ ರಾಷ್ಟ್ರ’ವನ್ನು ಎಂದಿಗೂ ತುಲನೆ ಮಾಡಲು ಸಾಧ್ಯವಿಲ್ಲ. ಈಗ ವಿಶ್ವದಲ್ಲಿ ಅನೇಕ ಇಸ್ಲಾಮೀ ರಾಷ್ಟ್ರಗಳು ಉದಯವಾಗಿವೆ; ಆದರೆ ಅಲ್ಲಿನ ಜನರು ನಿಜವಾಗಿಯೂ ಸುಖ, ಸಮಾಧಾನ, ಆನಂದಲ್ಲಿದ್ದಾರೆಯೆ ? ಇಲ್ಲ. ಅಲ್ಲಿನ ಇಸ್ಲಾಮೀ ಆಡಳಿತ ಎಷ್ಟು ಭಯಂಕರವಾಗಿ ವರ್ತಿಸುತ್ತಿವೆ, ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ. ಆದ್ದರಿಂದ `ಅನ್ಯಾಯಕಾರಿಯಾಗಿರುವ ಇಸ್ಲಾಮೀ ರಾಷ್ಟçವನ್ನು ಭಾರತದಲ್ಲಿ ಎಂದಿಗೂ ಬರಲು ಬಿಡ ಬಾರದು’, ಎಂಬ ದೃಢವಾದ ನಿರ್ಧಾರವನ್ನು ಭಾರತೀಯರು ಮತ್ತು ಹಿಂದೂಗಳು ಮಾಡಬೇಕು. ಹಿಂದೂಬಹುಸಂಖ್ಯಾತ ಭಾರತವು ಇಸ್ಲಾಮೀ ರಾಷ್ಟ್ರವೆಂದು ಉದಯವಾಗಲಿಕ್ಕಿಲ್ಲ; ಆದರೆ ಇಂತಹ ಘಾತಕ ಇಚ್ಛೆಯನ್ನಿಟ್ಟುಕೊಳ್ಳುವವರನ್ನು ಧರ್ಮಾಭಿ ಮಾನಿ ಹಿಂದೂಗಳು ಮತ್ತು ಭಾರತೀಯರು ಧೈರ್ಯದಿಂದ ಎದುರಿಸಬೇಕು. ಹೇಗೆ `ಪಿ.ಎಫ್.ಐ.’ಯ ಮೇಲೆ ನಿರ್ಬಂಧ ಹೇರಲಾಯಿತೊ, ಅದೇ ರೀತಿ ಜಿಹಾದಿ ಕೃತ್ಯಗಳನ್ನು ಮಾಡುವವರ ಮೇಲೆಯೂ ಕ್ರಮತೆಗೆದುಕೊಳ್ಳುವ ಅವಶ್ಯಕತೆಯಿದೆ.

ಅನೇಕ ಜನರ ಮನಸ್ಸಿನಲ್ಲಿರುವ ಹಿಂದೂ ಸಂಸ್ಕೃತಿ ರಾಷ್ಟ್ರದ ಸುಪ್ತ ಇಚ್ಛೆ ಈಗ ಪ್ರಬಲವಾಗುತ್ತಾ ಹೋಗುತ್ತಿದೆ. ಅದು ಕೃತಿಶೀಲತೆ ಮತ್ತು ಗತಿಮಾನತೆಯ ಸ್ವರೂಪವನ್ನು ಪಡೆಯುತ್ತಿದೆ. ಸ್ವಾತಂತ್ರ್ಯ ವೀರ ಸಾವರಕರರು ಭಾರತೀಯರ ಮನಸ್ಸಿನಲ್ಲಿ ಬಿಂಬಿಸಿದ ಹಿಂದೂ ಸಂಸ್ಕೃತಿ ರಾಷ್ಟ್ರ ಸ್ಥಾಪನೆಯ ಬೀಜವು ಮುಂದೆ ಕೆಲವೇ ವರ್ಷಗಳಲ್ಲಿ ಸಾಕಾರ ವಾಗಲಿಕ್ಕಿದೆ. ಭವ್ಯ, ವ್ಯಾಪಕ ಮತ್ತು ತೇಜಃಪುಂಜವಾಗಿರುವ ಹಿಂದೂ ಸಂಸ್ಕೃತಿ ರಾಷ್ಟ್ರದ ಮುಂದೆ ಇಸ್ಲಾಮೀ ಸಂಸ್ಕೃತಿ ರಾಷ್ಟ್ರ ಉಳಿಯಲಾರದು. ಆಗ ಮತಾಂಧ ಸಂಘಟನೆಗಳೆ ಈ ದೇಶದಿಂದ ತೊಲಗಬೇಕಾಗುತ್ತದೆ, ಎಂಬುದನ್ನು ಮತಾಂಧ ಸಮರ್ಥಕರು ಗಮನದಲ್ಲಿಡಬೇಕು ! ಹೀಗಾಗುವಾಗ ಎಲ್ಲೆಡೆ ಒಂದೇ ಘೋಷಣೆ ಇರುವುದು, `ಹಿಂದೂ ಸಂಸ್ಕೃತಿ ರಾಷ್ಟ್ರದ ವಿಜಯವಾಗಲಿ, ವಿಜಯವಾಗಲಿ, ವಿಜಯವಾಗಲಿ !’