ಭಾಗ್ಯನಗರದಲ್ಲಿ ಹಿಂದೂ ಸಂಘಟನೆಗಳಿಂದ ಆಂದೋಲನ
ಭಾಗ್ಯನಗರ (ತೆಲಂಗಾಣಾ) – ಇಲ್ಲಿನ ಇಂದಿರಾ ಪಾರ್ಕನ ಬಳಿ ಇರುವ ಧರಣೆ ಚೌಕಿಯಲ್ಲಿ ಗೊಶಾಮಹಲ ಮತದಾರಗಟ್ಟೆಯ ಹಿಂದುತ್ವನಿಷ್ಠ ಶಾಸಕರಾದ ಟಿ. ರಾಜಾಸಿಂಹರವರ ಬಿಡುಗಡೆಗಾಗಿ ಅಕ್ಟೋಬರ್ ೮ರಂದು ವಿಶಾಲ ಪ್ರತಿಭಟನೆಯನ್ನು ಮಾಡಲಾಯಿತು. ‘ಶಾಸಕ ರಾಜಾಸಿಂಹರವರನ್ನು ತಕ್ಷಣ ಬಿಡುಗಡೆ ಮಾಡಿ, ಅವರ ವಿರುದ್ಧ ರಚಿಸಲಾದ ಷಡ್ಯಂತ್ರವಾಗಿರುವ ಪಿಡಿ ಕಾನೂನನ್ನು (THE TELANGANA PREVENTIVE DETENTION ACT, 1970) ತಕ್ಷಣ ರದ್ದುಗೊಳಿಸಿ ಅವರಿಗೆ ನ್ಯಾಯ ಒದಗಿಸಬೇಕು’ ಎಂದು ಈ ಸಮಯದಲ್ಲಿ ಮನವಿ ಮಾಡಲಾಯಿತು. ದೀಪಾವಳಿಯ ಮೊದಲು ರಾಜಾಸಿಂಹರವರನ್ನು ಬಿಡುಗಡೆ ಮಾಡಿದ್ದರೆ ೧೦ ಲಕ್ಷ ಜನರ ಮೆರವಣಿಗೆ ನಡೆಸಿ ಭಾಗ್ಯನಗರವನ್ನು ಮುತ್ತಿಗೆ ಹಾಕಲಾಗುವುದು’, ಎಂಬ ಎಚ್ಚರಿಕೆಯನ್ನು ಈ ಸಮಯದಲ್ಲಿ ನೀಡಲಾಯಿತು. ಈ ಆಂದೋಲನದಲ್ಲಿ ವಿವಿಧ ಹಿಂದೂ ಸಂಘಟನೆಗಳು ಸಹಭಾಗಿಯಾಗಿದ್ದವು. ಹಿಂದೂ ಜನಜಾಗೃತಿ ಸಮಿತಿ, ಹಿಂದೂ ಜೆ.ಎಸಿ., ಎಸ್.ಎಸ್.ವಿ.ಬಿ ಧರ್ಮ ಸೇನಾ, ರಾಷ್ಟ್ರೀಯ ಶಿವಾಜಿ ಸೇನಾ, ರಾಷ್ಟ್ರೀಯ ಹಿಂದೂ ಪರಿಷತ್ತು, ಶ್ರೀರಾಮ ಯುವ ಸೇನಾ ಹೀಗೆ ೧೫ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು ಈ ಆಂದೋಲನದಲ್ಲಿ ಸಹಭಾಗಿಯಾಗಿದ್ದವು.