‘ಆದಿಪುರುಷ’, ಚಲನಚಿತ್ರದ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ದಾಖಲು !

ಭಾಗ್ಯನಗರ (ತೆಲಂಗಾಣ) – ಮುಂಬರುವ ‘ಆದಿಪುರುಷ’ ಚಲನಚಿತ್ರದ ವಿರುದ್ಧ ಹಿಂದೂಗಳಲ್ಲಿನ ಆಕ್ರೋಶ ಹೆಚ್ಚುತಲೆ ಇದೆ. ಚಲನಚಿತ್ರದ ಟ್ರೈಲರ್‌ನಲ್ಲಿ ರಾಮಾಯಣಕ್ಕೆ ಕಾಲ್ಪನಿಕ ಮತ್ತು ಆಕ್ಷೇಪಾರ್ಹ ರೀತಿಯಲ್ಲಿ ಪ್ರದರ್ಶಿಸಲಾಗಿರುವುದರಿಂದ ಹಿಂದೂಗಳು ಚಲನಚಿತ್ರವನ್ನು ವಿರೋಧಿಸುತ್ತಿದ್ದಾರೆ. ಈಗ ಈ ಚಲನಚಿತ್ರದ ವಿರುದ್ಧ ದೆಹಲಿಯ ನ್ಯಾಯಾಲಯದಲ್ಲಿ ಅರ್ಜಿ ದಾಖಲು ಮಾಡಲಾಗಿದೆ. ಅರ್ಜಿಯ ಮೂಲಕ, ಚಲನಚಿತ್ರದಲ್ಲಿ ಪ್ರಭು ಶ್ರೀ ರಾಮ ಮತ್ತು ಹನುಮಂತನನ್ನು ಅಯೋಗ್ಯ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಲಾಗಿದೆ.