|
(ಮಜಾರ ಅಂದರೆ ಇಸ್ಲಾಮೀ ಸಂತ ಅಥವಾ ಫಕೀರರ ಸಮಾಧಿ)
ಭೋಪಾಲ (ಮಧ್ಯಪ್ರದೇಶ) – ರಾಜ್ಯದಲ್ಲಿನ ವಿದಿಶಾ ಜಿಲ್ಲೆಯಲ್ಲಿನ ಕುರವಾಯಿಯಲ್ಲಿರುವ ‘ಸಿಎಮ್ ರಾಯಿಜ ಸ್ಕೂಲ’ನಲ್ಲಿ ದುರಸ್ತಿಗಾಗಿ ದೊರೆತ ಹಣದಲ್ಲಿ ಮಜಾರನ್ನು ಕಟ್ಟಲಾಗಿರುವ ಪ್ರಕರಣವು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮಧ್ಯಪ್ರದೇಶ ಸರಕಾರವು ಶಾಲೆಯ ಮುಸಲ್ಮಾನ ಮುಖ್ಯಾಧ್ಯಾಪಕಿಯಾದ ಶಾಯನಾ ಫಿರದೌಸರವರನ್ನು ಅಮಾನತುಗೊಳಿಸಿದೆ. ಫಿರದೌಸರವರ ಪತಿಯು ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರತರಾಗಿದ್ದರು. ಅವರೇ ಈ ಮಜಾರನ್ನು ನಿರ್ಮಿಸಿದ್ದಾರೆ. ಶಾಲೆಯ ನಿವೃತ್ತ ಶಿಕ್ಷಕರು ಶಾಲೆಯಲ್ಲಿ ಶ್ರೀ ಸರಸ್ವತೀದೇವಿಯ ದೇವಸ್ಥಾನವನ್ನು ನಿರ್ಮಿಸಲು ಮನವಿ ಮಾಡಿದ್ದರು. ಫಿರದೌಸರವರು ಇದನ್ನು ತಿರಸ್ಕರಿಸಿದ್ದರು.
#BREAKING | Mazar allegedly built inside school premises in MP’s Vidisha; Principal & Collector supended. Tune in – https://t.co/2rijHpLkWV pic.twitter.com/du8227HN0L
— Republic (@republic) October 7, 2022
ಫಿರದೌಸರವರು ಶಾಲೆಯಲ್ಲಿ ಫೆಬ್ರುವರಿ ೨೦೨೨ರಲ್ಲಿ ಅಡಿಪಾಯ ಹಾಕಿಸಿಕೊಂಡರು ಹಾಗೂ ಮುಂದೆ ಅದಕ್ಕೆ ಮಜಾರಿನ ರೂಪವನ್ನು ಕೊಟ್ಟರು. ಶಾಲೆಯಲ್ಲಿ ಮುಸಲ್ಮಾನರು ಶುಕ್ರವಾರದಂದು ನಮಾಜುಪಠಣ ಮಾಡಲೂ ಬರತೊಡಗಿದ್ದರು. ಮುಸಲ್ಮಾನ ವಿದ್ಯಾರ್ಥಿಗಳಿಗೆ ಶುಕ್ರವಾರದಂದು ರಜೆ ನೀಡಲಾಗುತ್ತಿತ್ತು. ಶಾಲೆಯ ಶಿಕ್ಷಕರು ಈ ಬಗ್ಗೆ ಜಿಲ್ಲಾ ಶಿಕ್ಷಣ ವಿಭಾಗದ ಬಳಿ ದೂರು ದಾಖಲಿಸಿದ ನಂತರ ಪ್ರಕರಣದ ಗೌಪ್ಯ ತನಿಖೆ ನಡೆಸಲಾಯಿತು. ಅನಂತರ ಸರಕಾರಿ ಶಾಲೆಯನ್ನು ಇಸ್ಲಾಮೀ ಧಾರ್ಮಿಕ ವಾಸ್ತುವನ್ನಾಗಿ ಮಾಡುವ ಷಡ್ಯಂತ್ರವು ಬಹಿರಂಗವಾಯಿತು.
ರಾಜ್ಯಸರಕಾರವು ಸ್ವಲ್ಪ ಸಮಯದ ಹಿಂದೆ ಈ ಶಾಲೆಗೆ ‘ಸಿಎಲ್ ರಾಯಿಜ ಸ್ಕೂಲ’ನ ರೂಪದಲ್ಲಿ ಅದರ ವಿಕಾಸಕ್ಕಾಗಿ ಆಯ್ಕೆ ಮಾಡಿತ್ತು. ಆದರೆ ಅದರ ನಂತರ ದೊರೆತಿರುವ ಅನುದಾನದ ಅಯೋಗ್ಯ ಬಳಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಜಿಲ್ಲಾ ಶಿಕ್ಷಣ ಅಧಿಕಾರಿ ಅತುಲ ಮುದ್ಗಲರವರು ಇದರ ನಂತರ ಫಿರದೌಸರವರ ವರ್ಗಾವಣೆಗೆ ಆದೇಶ ನೀಡಿದರು. ಮುದ್ಗಲರವರು ಹೇಳುವಂತೆ, ಆಗಸ್ಟ ೩೧ರಂದು ವಿದ್ಯಾಲಯದ ಪರಿಸರದಲ್ಲಿರುವ ಮಜಾರನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಇಲ್ಲಿಯ ವರೆಗೆ ಮಜಾರನ್ನು ತೆರವುಗೊಳಿಸಿಲ್ಲ.
ಅನಧೀಕೃತ ಅಡಿಪಾಯವನ್ನು ಒಡೆಯಲಾಗುವುದು ! – ಉಪವಿಭಾಗೀಯ ದಂಡಾಧಿಕಾರಿಗಳು
ಕುರವಾಯಿಯ ಉಪವಿಭಾಗೀಯ ದಂಡಾಧಿಕಾರಿ ಅಂಜಲಿ ಶಾಹರವರು ಈ ಪ್ರಕರಣದಲ್ಲಿ, ವಿದ್ಯಾಲಯದ ಪರಿಸರದಲ್ಲಿ ನಿರ್ಮಿಸಲಾದ ಅನಧೀಕೃತ ಅಡಿಪಾಯವನ್ನು ಒಡೆಯಲಾಗುವುದು. ಶಾಲೆಯಲ್ಲಿ ರಾಷ್ಟ್ರಗೀತೆಯನ್ನು ಕೇವಲ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರೋತ್ಸವದಂದು ಹಾಡಲಾಗುತ್ತಿದೆ. ಪ್ರತಿದಿನ ಕೇವಲ ‘ಎ ಮಾಲಿಕ ತೆರೆ ಬಂದೆ ಹಮ್’ ಈ ಚಲನಚಿತ್ರದ ಹಾಡಿನ ಮೇಲೆ ಪ್ರಾರ್ಥನೆಯನ್ನು ಮಾಡಲಾಗುತ್ತಿತ್ತು, ಎಂದು ಹೇಳಿದ್ದಾರೆ.
ಶಿಕ್ಷಣ ಅಧಿಕಾರಿಗಳ ___ ! – ರಾಷ್ಟ್ರೀಯ ಬಾಲ ಸಂರಕ್ಷಣ ಅಧಿಕಾರ ಆಯೋಗದ ಆರೋಪಸಂಬಂಧಿತ ಅಧಿಕಾರಿಗಳ ಮೇಲೆ ಕಾರ್ಯಾಚರಣೆಯಾಗುವುದು ಅಪೇಕ್ಷಿತವಿದೆ ! ರಾಷ್ಟ್ರೀಯ ಬಾಲ ಸಂರಕ್ಷಣ ಅಧಿಕಾರ ಆಯೋಗದ ಅಧ್ಯಕ್ಷರಾದ ಪ್ರಿಯಂಕ ಕಾನೂನಗೋರವರು ಈ ಶಾಲೆಗೆ ಇತ್ತೀಚೆಗೆ ಭೇಟಿನೀಡಿದ್ದರು. ಅವರು ಈ ಸಮಯದಲ್ಲಿ ‘ವಿದ್ಯಾಲಯದ ಪರಿಸರದಲ್ಲಿ ಬಹಳಷ್ಟು ಸಮಯದಿಂದ ಧರ್ಮವಿಶೇಷ ಸಂಗತಿಗಳನ್ನು ನಡೆಸಲಾಗುತ್ತಿದೆ. ಶಿಕ್ಷಣ ವಿಭಾಗದ ಅಧಿಕಾರಿಗಳೂ ಇದರ ಬಗ್ಗೆ ದುರ್ಲಕ್ಷ ಮಾಡಿದ್ದಾರೆ, ಎಂದು ಆರೋಪಿಸಿದರು. |
ಸಂಪಾದಕೀಯ ನಿಲುವು
|